ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸದನದಲ್ಲಿ ಕಾಂಗ್ರೆಸ್ ಗೂಂಡಾಗಿರಿ: ಸೋನಿಯಾಗೆ ಬಿಜೆಪಿ ದೂರು (BJP | Congress | Sonia gandhi | Yeddyurappa | CT Ravi | Deve gowda)
Bookmark and Share Feedback Print
 
NRB
ಬಿಜೆಪಿ ಪಕ್ಷದಲ್ಲಿನ ಬಿಕ್ಕಟ್ಟಿನಿಂದಾಗಿ ಅಕ್ಟೋಬರ್ 11ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ನಡೆದುಕೊಂಡ ರೀತಿ, ಗಲಾಟೆಗೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿಗೆ ಆಡಳಿತಾರೂಢ ಬಿಜೆಪಿ ದೂರನ್ನು ಸಲ್ಲಿಸಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ರಾಜ್ಯ ರಾಜಕಾರಣದಲ್ಲಿನ ಜಂಗೀಕುಸ್ತಿಯಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ದಾಳಿ ಮುಂದುವರಿದಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಆಮಿಷವೊಡ್ಡಿ ರಾಜೀನಾಮೆ ಕೊಡಿಸುತ್ತಿರುವುದಾಗಿ ಗಂಭೀರವಾಗಿ ಆರೋಪಿಸಿದೆ. ಏತನ್ಮಧ್ಯೆ, ಸದನದಲ್ಲಿ ಕಾಂಗ್ರೆಸ್ ಶಾಸಕರ ಗೂಂಡಾಗಿರಿ ಬಗ್ಗೆ ಬಿಜೆಪಿ ದೂರು ನೀಡಿದೆ.

ಈ ಬಗ್ಗೆ ಸೋನಿಯಾ ಗಾಂಧಿಯವರಿಗೆ ಬರೆದಿರುವ ದೂರಿನ ಪತ್ರದ ಪ್ರತಿಯನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ವಕ್ತಾರ ಸಿ.ಟಿ.ರವಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.

ಕಾಂಗ್ರೆಸ್ ರಾಜ್ಯದಲ್ಲಿ ಗೌರವಾನ್ವಿತ ವಿರೋಧ ಪಕ್ಷವಾಗಿದ್ದರೂ ಕೂಡ ಅಕ್ಟೋಬರ್ 11ರಂದು ಸಿಎಂ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಸದನದ ಗೌರವ ಕಾಪಾಡದೆ ಅಶಿಸ್ತಿನಿಂದ ನಡೆದುಕೊಂಡಿದೆ ಎಂದು ಪತ್ರದಲ್ಲಿ ದೂರಲಾಗಿದ್ದು, ಅದರ ಜೊತೆಗೆ ಸದನದಲ್ಲಿ ಕಾಂಗ್ರೆಸ್ ರಂಪಾಟದ ಸುಮಾರು 15 ನಿಮಿಷಗಳ ವೀಡಿಯೋವನ್ನು ಕೂಡ ಸೋನಿಯಾಗಾಂಧಿಗೆ ಕಳುಹಿಸಲಾಗಿದೆ. ಈ ಬಗ್ಗೆ ಪಕ್ಷದ ವರಿಷ್ಠೆಯಾಗಿರುವ ಸೋನಿಯಾಗಾಂಧಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರವಿ ಈ ಸಂದರ್ಭದಲ್ಲಿ ಒತ್ತಾಯಿಸಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಕಾಂಗ್ರೆಸ್ ಮುಖಂಡರು ಅ.11ರಂದು ನಡೆದ ರಾಜಕೀಯ ಘರ್ಷಣೆಯ ಪ್ರಮುಖ ಹೊಣೆಗಾರರು. ಹಾಗಾಗಿ ಅವರೆಲ್ಲ ಸದನದ ಗೌರವವನ್ನು ಕಾಪಾಡಲು ಸಹಕರಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಅಂದು ಸದನದಲ್ಲಿ ಕಾಂಗ್ರೆಸ್ ಶಾಸಕರು ಅನುಚಿತವಾಗಿ ವರ್ತಿಸದಂತೆ ಸಿದ್ದರಾಮಯ್ಯನವರು ತಡೆಯಬಹುದಿತ್ತು. ಆದರೆ ಸಿದ್ದರಾಮಯ್ಯನವರೇ ಅವರಿಗೆಲ್ಲ ಕುಮ್ಮಕ್ಕು ನೀಡಿ ಇಡೀ ಸದನದ ವಾತಾವರಣವೇ ಹಾಳುಗೆಡವಿರುವುದಾಗಿ ಪತ್ರದಲ್ಲಿ ಗಂಭೀರವಾಗಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲ ಸಿದ್ದರಾಮಯ್ಯ ಹಾಗೂ ಡಿಕೆಶಿ ಸದನದ ಮೇಜಿನ ಮೇಲೆ ನಿಂತು ಸ್ಪೀಕರ್ ವಿರುದ್ಧ ಅವಾಚ್ಯದ ಶಬ್ದಗಳಿಂದ ನಿಂದಿಸಿರುವುದಾಗಿಯೂ ಪತ್ರದಲ್ಲಿ ವಿವರಿಸಿದ್ದಾರೆ.

ಈ ಪತ್ರದ ಪ್ರತ್ಯೇಕ ಪ್ರತಿಯನ್ನು ಲೋಕಸಭಾ ಸ್ಪೀಕರ್ ಅವರಿಗೂ ಕಳುಹಿಸಿರುವುದಾಗಿ ರವಿ ವಿವರಿಸಿದ್ದು, ಅಕ್ಟೋಬರ್ 11ರಂದು ವಿಧಾನಸಭೆಯ ಕಲಾಪದಲ್ಲಿ ನಡೆದ ಹೊಯ್, ಕೈ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗಬೇಕು ಎಂದು ಈ ಸಂದರ್ಭದಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.

ಅಲ್ಲದೆ, ಆಡಳಿತಾರೂಢ ಬಿಜೆಪಿ ಸರಕಾರವನ್ನು ಅಸ್ಥಿರಗೊಳಿಸಲು ಸಂಚು ರೂಪಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯ ಕಾರ್ಯಚಟುವಟಿಕೆ ಬಗ್ಗೆ ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರಿಗೂ ಮತ್ತೊಂದು ಪತ್ರವನ್ನು ರವಾನಿಸಲಾಗಿದೆ ಎಂದರು. ಗೌಡರಿಗೆ ದೂರಿನ ಪತ್ರ ಬರೆದಿಲ್ಲ, ಬದಲಾಗಿ ಜೆಡಿಎಸ್ ಪಕ್ಷದ ಶಾಸಕರಿಗೆ ಸೂಕ್ತ ನಡವಳಿಕೆಯಿಂದ ವರ್ತಿಸಿ ರಾಜ್ಯದ ಮಾನ ಕಾಪಾಡಬೇಕೆಂದು ಸಲಹೆ ನೀಡುವಂತೆ ಪತ್ರ ಬರೆಯಲಾಗಿದೆ ಎಂದು ವಿವರಿಸಿದರು.
ಸಂಬಂಧಿತ ಮಾಹಿತಿ ಹುಡುಕಿ