ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮಾನ ಮರ್ಯಾದೆ ಇದೆಯೇನ್ರೀ?: ಕುಮಾರ ಏಕವಚನ ದಾಳಿ (Bangalore | Kumaraswamy | Vidhana Sabhe | MLA | Operation Kamala | Karnataka Politics)
Bookmark and Share Feedback Print
 
WD
ಕರ್ನಾಟಕದ ರಾಜಕೀಯ ನಾಟಕದ ಮೂಲಕ ಯಾರ‌್ಯಾರ ಬಾಯಿಯಿಂದ ಏನೆಲ್ಲಾ ಕೇಳಬೇಕೋ ಎಂಬ ಇಕ್ಕಟ್ಟಿನಲ್ಲಿ ರಾಜ್ಯದ ಜನತೆ ಸಿಲುಕಿರುವಂತೆಯೇ ಏಕವಚನ ಪ್ರಯೋಗದ ವಾಗ್ದಾಳಿ ಆರಂಭವಾಗಿದೆ. ಗುರುವಾರ ಮಗದೊಂದು ಕಾಂಗ್ರೆಸ್ ಶಾಸಕ ರಾಜೀನಾಮೆ ಸುದ್ದಿ ಕೇಳುತ್ತಲೇ, ಸುದ್ದಿವಾಹಿನಿಗಳಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸ್ಪೀಕರ್ ವಿರುದ್ಧ ಏಕವಚನ ಬಳಸಿ ತಮ್ಮ ರೋಷವನ್ನು ಕಾರಿದ್ದಾರೆ.

ಯಾರು ಯಾವಾಗ ರಾಜೀನಾಮೆ ಕೊಟ್ಟರೂ ಅಂಗೀಕರಿಸುತ್ತಾನಲ್ಲ ಆ ಸ್ಪೀಕರ್ ಬೋಪಯ್ಯನಿಗೆ ಮಾನ-ಮರ್ಯಾದೆ ಇದೆಯೇ ಎಂದು ಆರಂಭಿಸಿದ ಅವರು, ಸಂವಿಧಾನಬದ್ದವಾದ ಕುರ್ಚಿಗೆ ಅಪಚಾರ ಎಸಗುವ ಬೋಪಯ್ಯ ಆ ಸ್ಥಾನದಲ್ಲಿ ಕೂರಲು ಅಯೋಗ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಬಿಜೆಪಿ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿದ್ದಾನಲ್ಲ, ಇದು ಎಷ್ಟು ಸರಿ? ರಾಜ್ಯದಲ್ಲಿ ಇಂತಹ ಪರಿಸ್ಥಿತಿ ಇರುವಾಗ ಕೇಂದ್ರ ಸರಕಾರ ಕೂಡ ಮೂಕಪ್ರೇಕ್ಷವಾಗಿ ಕುಳಿತಿದೆ. ಕೇಂದ್ರ ಸರಕಾರಕ್ಕೂ ಮಾನ-ಮರ್ಯಾದೆ ಇಲ್ಲ ಎಂದು ಕಿಡಿ ಕಾರಿದರು.

ಈ ಆಪರೇಶನ್ ಕಮಲದ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ನೇರವಾಗಿ ಭಾಗಿಯಾಗಿದ್ದಾರೆ. ಅವರಿಗೂ ಮಾನ ಮರ್ಯಾದೆ ಇದೆಯೇ ಎಂದು ಪ್ರಶ್ನಿಸಿದ ಅವರು, ಶಾಸಕರ ರಾಜೀನಾಮೆ ಪತ್ರಗಳನ್ನು ಅಧ್ಯಕ್ಷರ ಕೈಗೆ ಯಾರು ಕೊಡುತ್ತಾ ಇದ್ದಾರೆ ಎಂದು ಕೇಳಿದರು.

ಪೊಲೀಸರನ್ನು ಕರೆಸಿದ್ದಕ್ಕೆ ಗಲಾಟೆ ಮಾಡಿದ ಶಾಸಕರಿಗೆ ಶೋಕಾಸ್ ನೋಟೀಸ್ ನೀಡಲು ಮತ್ತೊಬ್ಬ ಯಾವನೋ ಶಾಸಕ ಅಪ್ಪಚ್ಚು ರಂಜನ್ ನೇತೃತ್ವದಲ್ಲಿ ಸದನ ಸಮಿತಿ ರಚಿಸಿ ವಿಚಾರಣೆ ನಡೆಸ್ತಾರಂತೆ...ಸದನ ಸಮಿತಿ ಹೆಸರಲ್ಲಿ ನಾಟಕ ಆಡಲು ಅಧ್ಯಕ್ಷ ಹೊರಟಿದ್ದಾರೆ ಎಂದು ಆರೋಪಿಸಿದರು.

ರಾಜ್ಯದ ಘನತೆ ಗೌರವ ಉಳಿಯಬೇಕಿದ್ದರೆ, ಕೇಂದ್ರವು ಕೂಡಲೇ ಮಧ್ಯಪ್ರವೇಶ ಮಾಡಬೇಕು, ರಾಜ್ಯಪಾಲರು ಕೂಡ ಸೂಕ್ತ ತೀರ್ಮಾನ ಕೈಗೊಳ್ಳಲಿ. ಇವರಿಗೇನಾದ್ರೂ ಮಾನ ಮರ್ಯಾದೆ ಇದೆಯಾ... ಬಿಜೆಪಿಯು ತಮ್ಮ ಶಾಸಕರು ಆಮಿಷವೊಡ್ಡುತ್ತಿರುವ ಕುರಿತು ಕ್ಯಾಸೆಟ್ ಬಿಡುಗಡೆ ಮಾಡ್ತೀನಿ, ಆಗಲಾದ್ರೂ ಕೇಂದ್ರ ಸರಕಾರ ಕಣ್ಣು ತೆರೆಯುತ್ತದೆಯೋ ನೋಡೋಣ ಎಂದವರು ಹೇಳಿದರು.

ಇನ್ನೂ 8-10 ಜನ ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಡಲಿದ್ದಾರೆ ಎಂಬುದು ತಮ್ಮ ಗಮನಕ್ಕೆ ಬಂದಿದೆ ಎಂದ ಅವರು, ಸಿಡಿಯನ್ನು ರಾಜ್ಯದ ಜನತೆಯ ಮುಂದಿಡುತ್ತೇವೆ. ಬಿಜೆಪಿಯ ಬಣ್ಣವೆಲ್ಲ ಬಯಲಾಗುತ್ತದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ