ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಇದು ಪಕ್ಷ ನಿಷ್ಠೆ: ಜೆಡಿಎಸ್ ತೊರೆದ್ರೆ ಪತಿಗೆ ಗುಡ್ ಬೈ! (JDS | BJP | Kumaraswamy | Sk Natarajan | Sowbhgya | Yeddyurappa)
Bookmark and Share Feedback Print
 
ರಾಜಕೀಯ ನಾಯಕರ ಕಚ್ಚಾಟ, ಪಕ್ಷಾಂತರ ರಾಜ್ಯದ ಜನರಿಗೆ ಮನರಂಜನೆ ಉಣಬಡಿಸಿದರೆ, ಮತ್ತೊಂದೆಡೆ ಪತಿಗಿಂತ ಜೆಡಿಎಸ್ ಪಕ್ಷವೇ ಮುಖ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಚಿತ್ರದುರ್ಗ ಜೆಡಿಎಸ್ ಶಾಸಕ ಎಸ್.ಕೆ.ಬಸವರಾಜನ್ ಅವರ ಪತ್ನಿ ಎಸ್.ಕೆ.ಸೌಭಾಗ್ಯ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ!

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಜೆಡಿಎಸ್ ಬಿಟ್ರೆ ಪತಿಗೆ ಗುಡ್ ಬೈ!: 'ಯಾವ ಪಕ್ಷದಲ್ಲಿ ಟಿಕೆಟ್ ಪಡೆದಿದ್ದೇವೆಯೋ ಅದೇ ಪಕ್ಷದಲ್ಲಿ ಇರಬೇಕು ಎಂಬುದು ನನ್ನ ಅಭಿಪ್ರಾಯ. ಆದರೂ ಬಿಜೆಪಿಯ ಕೆಲವು ಆಪ್ತರು ನಮ್ಮ ಪಕ್ಷಕ್ಕೆ ಸೇರಿ ಹಣ,ಮಂತ್ರಿಗಿರಿ ಕೊಡುತ್ತಾರಂತೆ ಏನ್ಮಾಡ್ಲಿ ಅಂತ ಕೇಳಿದ್ದರು. ಅದಕ್ಕೆ ನಾನು ನೇರವಾಗಿ ಹೇಳಿದ್ದೆ, ಒಂದು ವೇಳೆ ನೀವು ಜೆಡಿಎಸ್ ಪಕ್ಷ ತೊರೆದ್ರೆ ನಾನು ನಿಮಗೆ ಗುಡ್ ಬೈ ಹೇಳುತ್ತೇನೆ ಎಂದಿದ್ದೆ...ಇದು ಶಾಸಕ ಎಸ್.ಕೆ.ಬಸವರಾಜನ್ ಪತ್ನಿ ಸೌಭಾಗ್ಯ ಅವರ ನೇರ ನುಡಿಯಾಗಿತ್ತು!

ನಿಮ್ಮ ಪತಿ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ರೆ ಏನ್ಮಾಡುತ್ತೀರಿ ಎಂದು ಟಿವಿ9 ಚಾನೆಲ್ ಸೌಭಾಗ್ಯ ಅವರನ್ನು ಪ್ರಶ್ನಿಸಿದಾಗ ಅವರು ನೀಡಿದ ಪ್ರತಿಕ್ರಿಯೆ ಇದಾಗಿದೆ. ನಮ್ಮ ಯಜಮಾನ್ರು ಯಾವುದೇ ಕಾರಣಕ್ಕೂ ಬಿಜೆಪಿಗೆ ಸೇರಲ್ಲ. ನಮಗೆ ಮೊದಲಿನಿಂದಲೂ ಕುಮಾರಣ್ಣ, ಜೆಡಿಎಸ್ ಮೇಲೆಯೇ ಹೆಚ್ಚು ನಿಷ್ಠೆ ಎಂದರು.

ಬಿಜೆಪಿಯಲ್ಲೇ ಸಾಕಷ್ಟು ಕಚ್ಚಾಟ ಇದೆ. ಅವರ ಶಾಸಕರು, ಸಚಿವರೇ ಅತೃಪ್ತಿಯಿಂದ ಇರುವಾಗ ಇನ್ನು ಜೆಡಿಎಸ್ ಪಕ್ಷ ತೊರೆದು ಬಿಜೆಪಿಗೆ ಸೇರಿದರೆ ಕ್ಷೇತ್ರದ ಅಭಿವೃದ್ದಿ ಮಾಡಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಸೌಭಾಗ್ಯ ಅವರದ್ದು.ಆದರೂ ಯಜಮಾನರಿಗೆ ಬಿಜೆಪಿಯಿಂದ ತುಂಬಾ ಆಫರ್ ಬಂದಿತ್ತು. ಆಗ ನಾನು ಅವರನ್ನು ತೊರೆಯುವ ಬೆದರಿಕೆ ಹಾಕಿದ್ದೆ ಎಂದರು.

ಆಮಿಷ ಒಡ್ಡಿದ್ದು ಹೌದು...ಜೆಡಿಎಸ್ ತೊರೆಯಲ್ಲ-ಬಸವರಾಜನ್:'ನೀವು ಜೆಡಿಎಸ್ ತೊರೆದು, ಬಿಜೆಪಿ ಸೇರಿದ್ರೆ ನಿಮಗೆ ಗುಡ್ ಬೈ ಹೇಳುವುದಾಗಿ ಪತ್ನಿ ಹೇಳಿದ್ದು ಹೌದೇ ಎಂಬ ಪ್ರಶ್ನೆಗೆ ಪತಿ, ಶಾಸಕ ಎಸ್.ಕೆ.ಬಸವರಾಜನ್ ಪ್ರತಿಕ್ರಿಯೆ ನೀಡಿ, ಹೌದು...ಯಾವ ಪಕ್ಷದಲ್ಲಿ ಗೆಲುವು ಸಾಧಿಸಿದ್ದೀರೋ ಅದೇ ಪಕ್ಷದಲ್ಲಿ ಇರಬೇಕು ಎಂಬ ಇಚ್ಚೆ ಪತ್ನಿಯದಾಗಿತ್ತು. ನನಗೂ ಬಿಜೆಪಿಯ ಕೆಲವು ಆತ್ಮೀಯರಿಂದ ದೊಡ್ಡ ಮೊತ್ತದ ಆಫರ್, ಮಂತ್ರಿಗಿರಿಯ ಆಮಿಷ ಬಂದಿತ್ತು. ಆದರೆ ನಾನು ಜೆಡಿಎಸ್ ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿರುವುದಾಗಿ ಹೇಳಿದರು.

ಬಿಜೆಪಿಯ ಯಾವ ಆತ್ಮೀಯರು ನಿಮಗೆ ಆಮಿಷ ಒಡ್ಡಿದ್ದರು ಎಂಬ ಪ್ರಶ್ನೆಗೆ, ಅವೆಲ್ಲಾ ಈಗ ಅಪ್ರಸ್ತುತ. ನನ್ನ ಆತ್ಮೀಯರು ಕೆಲವರು ಕೇಳಿದ್ದರು. ನಾನು ಅದನ್ನು ಒಪ್ಪಿಕೊಂಡಿಲ್ಲ ಅಷ್ಷೆ ಎಂದು ಸಮಜಾಯಿಷಿ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ