ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ವಾಲ್ಮೀಕಿ ಭಾರತೀಯ ಇತಿಹಾಸಕ್ಕೆ ಅಮೂಲ್ಯ ಕೊಡುಗೆ: ಬಸವರಾಜ್ (Basavaraj | Valmiki Jayanthi | India | BJP | Davana gere)
Bookmark and Share Feedback Print
 
ರಾಮಾಯಣದಲ್ಲಿ ಉನ್ನತ ಸಾಂಸ್ಕೃತಿಕ ಮೌಲ್ಯಗಳನ್ನು ಪ್ರತಿಪಾದಿಸಿರುವ ಮಹರ್ಷಿ ವಾಲ್ಮೀಕಿ ಭಾರತೀಯ ಇತಿಹಾಸಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಬಸವರಾಜ ನಾಯ್ಕ್ ಅಭಿಪ್ರಾಯವ್ಯಕ್ತಪಡಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ 'ಮಹರ್ಷಿ ವಾಲ್ಮೀಕಿ ಜಯಂತಿ' ಉದ್ಘಾಟಿಸಿ ಮಾತನಾಡಿದರು.

ಮನ ಪರಿವರ್ತನೆ, ಗುಣ ಮತ್ತು ಸಾಧನೆಯಿಂದ ವಾಲ್ಮೀಕಿ ಮಹಾನ್ ವ್ಯಕ್ತಿಯಾಗಿದ್ದಾರೆ. ವಾಲ್ಮೀಕಿ ಜಯಂತಿ ಯಾವುದೇ ಜಾತಿ-ಮತಕ್ಕೆ ಸೀಮಿತವಾಗಬಾರದು. ನಾಯಕ ಸಮಾಜ ದೇಶಾದ್ಯಂತ ನೆಲೆಸಿದ್ದು, ಅರ್ಥಪೂರ್ಣವಾಗಿ ಜಯಂತಿ ಆಚರಿಸಲು ರಾಜ್ಯ ಸರಕಾರ ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದರು.

ಮಹತ್ವದ ವಿಚಾರಧಾರೆಗಳು ಮುಂದಿನ ಪೀಳಿಗೆಗೂ ಮುಟ್ಟಬೇಕೆಂಬ ಉದ್ದೇಶದಿಂದ ವಾಲ್ಮೀಕಿ ಜಯಂತಿ ಆಚರಿಸಲಾಗುತ್ತಿದೆ. ನಿಯತ್ತು, ಪ್ರಾಮಾಣಿಕತೆಯಿಂದ ಮನುಷ್ಯ ಮೇಲ್ಮಟ್ಟಕ್ಕೆ ಬೆಳೆಯಬಹುದು ಎಂಬುದನ್ನು ರಾಮಾಯಣದಲ್ಲಿ ಕಾಣಬಹುದು. ವಿಶ್ವದಲ್ಲೇ ಇದೊಂದು ಅತ್ಯುತ್ತಮ ಕೃತಿ ಎಂದು ಶ್ಲಾಘಿಸಿದರು.

ವಾಲ್ಮೀಕಿಯು ರಾಮಾಯಣ ಮಹಾಕಾವ್ಯದಲ್ಲಿ ಮೌಲ್ಯ ಪ್ರತಿಪಾದಿಸಿ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಮಹಾಕವಿ ವಾಲ್ಮೀಕಿ ಜೀವನಕ್ಕೆ ಬೇಕಾದ ಮಾದರಿಗಳನ್ನು ಕಾವ್ಯದಲ್ಲಿ ಪ್ರತಿಪಾದಿಸಿದ್ದಾರೆ. ರಾಮಾಯಣ ಮತ್ತದರ ಉಪಕತೆಗಳನ್ನು ಯುವ ಜನತೆ ಮನದಟ್ಟು ಮಾಡಿಕೊಳ್ಳಬೇಕು ಎಂದರು.
ಸಂಬಂಧಿತ ಮಾಹಿತಿ ಹುಡುಕಿ