ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ದೇವೇಗೌಡ ಭಿನ್ನಮತದ ಜನಕ: ವಿಶ್ವನಾಥ್ ವ್ಯಂಗ್ಯ (Deve gowda | BJP | JDS | Congress | Kumaraswamy | Yeddyurappa)
Bookmark and Share Feedback Print
 
ಜೆಡಿಎಸ್ ಪಕ್ಷದ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕರ್ನಾಟಕ ರಾಜಕೀಯದಲ್ಲಿ ಭಿನ್ನಮತದ ಜನಕ ಎಂದು ಸಂಸದ ಎಚ್.ವಿಶ್ವನಾಥ್ ಭಾನುವಾರ ವ್ಯಂಗ್ಯವಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1960ರಿಂದ 2010ರವರೆಗೆ ಗೌಡರ ರಾಜಕೀಯ ಜೀವನವನ್ನು ಅವಲೋಕನ ಮಾಡಿದರೆ ಇದು ಸ್ಪಷ್ಟವಾಗುತ್ತದೆ ಎಂದರು.

ಅರವತ್ತರ ದಶಕದಲ್ಲಿ ಎಸ್.ನಿಜಲಿಂಗಪ್ಪ, 70ರ ದಶಕದಲ್ಲಿ ವೀರೇಂದ್ರ ಪಾಟೀಲ್, 80 ಮತ್ತು 89ರಲ್ಲಿ ಎಸ್.ಆರ್.ಬೊಮ್ಮಾಯಿ, 1994ರಲ್ಲಿ ರಾಮಕೃಷ್ಣ ಹೆಗಡೆಗೆ ಕಾಟ ಕೊಟ್ಟರು. 1996ರಲ್ಲಿ ಕಾಂಗ್ರೆಸ್ ಸಹಾಯ ಪಡೆದು ಪ್ರಧಾನಿಯಾಗಿ ನಂತರದಲ್ಲಿ ಎಐಸಿಸಿ ಅಧ್ಯಕ್ಷ ಸೀತಾರಾಂ ಕೇಸರಿ ವಿರುದ್ಧ ಪಿತೂರಿ ನಡೆಸಿ ಅಧಿಕಾರ ಕಳೆದುಕೊಂಡರು.

2004ರಲ್ಲಿ ಧರಂಸಿಂಗ್ ಜೊತೆ ವ್ಯವಹಾರ ಕುದುರಿಸಿ ಅವರನ್ನು ಮುಖ್ಯಮಂತ್ರಿ ಮಾಡಿದರು. 2006ರಲ್ಲಿ ಧರಂಸಿಂಗ್ ಅವರಿಗೆ ಕೈಕೊಟ್ಟು ಮಗ ಕುಮಾರಸ್ವಾಮಿ ಮೂಲಕ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಜೊತೆ ಕೈಜೋಡಿಸಿದರು. ಇಂತಹ ಘಟನೆಗಳು ಸಾರ್ವಜನಿಕರ ಸ್ಮರಣಿಯಲ್ಲಿದೆ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಇರುವ ಕೆಲವು ನಾಯಕರು ದೇವೇಗೌಡ ಮತ್ತು ಅವರ ಕುಟುಂಬದವರಿಂದ ದೂರ ಇರಬೇಕು. ಆದರೆ ನಮ್ಮ ಪಕ್ಷದ ಕೆಲವು ನಾಯಕರು ದೇವೇಗೌಡರ ಮೋಹಿನಿ ಆಟಕ್ಕೆ ಬಲಿಯಾಗಿದ್ದಾರೆ ಎಂದು ಜನತಾ ಪರಿವಾರದಿಂದ ಕಾಂಗ್ರೆಸ್‌ಗೆ ವಲಸೆ ಬಂದಿರುವ ನಾಯಕರ ವಿರುದ್ಧ ಪರೋಕ್ಷವಾಗಿ ಟೀಕಿಸಿದರು.
ಸಂಬಂಧಿತ ಮಾಹಿತಿ ಹುಡುಕಿ