ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ವೀರಪ್ಪ ಮೊಯ್ಲಿ ಉತ್ತಮ ರಾಜಕಾರಣಿ; ಪೇಜಾವರಶ್ರೀ ಹೊಗಳಿಕೆ (Pejavara shree | Bangalore | Veerappa Moily | Rosayya | Andra pradesh)
'ಪ್ರಸ್ತುತ ರಾಜಕಾರಣದ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಪೇಜಾವರ ಮಠದ ವಿಶ್ವೇಶ ತೀರ್ಥರು, ಇದು ಡೆಮಾಕ್ರಸಿ ಅಲ್ಲ, ದಮಾಕ್ರಸಿ' (ರಾಜಕೀಯ ದಮನ ಸ್ಥಿತಿ) ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಅರಮನೆ ಆವರಣದಲ್ಲಿ ಭಾನುವಾರ ಆಂಧ್ರಪ್ರದೇಶ ಮುಖ್ಯಮಂತ್ರಿ ಕೆ.ರೋಸಯ್ಯ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜಕಾರಣಿಗಳು ಇಂದು ಅಧಿಕಾರ ದಾಹದಿಂದ ಹಾತೊರೆಯುತ್ತಿದ್ದು, ಪ್ರಾಮಾಣಿಕತೆ, ನಿಷ್ಠೆ ಕಡಿಮೆಯಾಗುತ್ತಿದೆ. ಇದರಿಂದಾಗಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪುಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ವಿಷಾದಿಸಿದರು.
ಹಾಗಾಗಿ ಡೆಮಾಕ್ರಸಿ ಎನ್ನುವುದು ರಾಜಕೀಯವಾಗಿ ದಮನವಾಗುವ ದಮಾಕ್ರಸಿಯಾಗಿದೆ ಎಂದು ವಿಶ್ಲೇಷಿಸಿದರು. ಅಲ್ಲದೇ, ಕೆ.ರೋಸಯ್ಯ ಮತ್ತು ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರ ಕಾರ್ಯವೈಖರಿಯನ್ನು ಶ್ರೀಗಳು ಶ್ಲಾಘಿಸಿದರು.
ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಹಿಂದುಳಿದ ವರ್ಗದವರಿಗೆ ಅಧಿಕಾರ ಸಿಗುವುದು ಅಪರೂಪ, ಇಂಥ ಪರಿಸ್ಥಿತಿಯಲ್ಲೂ ಮೊಯ್ಲಿ ಮತ್ತು ರೋಸಯ್ಯ ಯೋಗ್ಯತೆ, ಅರ್ಹತೆ ಮೂಲಕ ಅಧಿಕಾರದಲ್ಲಿ ಉನ್ನತ ಮಟ್ಟಕ್ಕೆ ಏರಿದ್ದಾರೆ ಎಂದು ಹೊಗಳಿದರು. ವೀರಪ್ಪ ಮೊಯ್ಲಿ ಉತ್ತಮ ರಾಜಕಾರಣಿ ಎಂಬುದರಲ್ಲಿ ಎರಡು ಮಾತಿಲ್ಲ ಎಂದರು.