ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಜೆಪಿಗೆ ಮತ ಹಾಕಿದ ಜನ ಪರಿತಪಿಸುತ್ತಿದ್ದಾರೆ: ದೇಶಪಾಂಡೆ (BJP | Desh pandy | Kpcc | Congress | Siddaramaiah | Yeddyurappa)
Bookmark and Share Feedback Print
 
ಅಧಿಕಾರ ದುರುಪಯೋಗಪಡಿಸಿ ಭ್ರಷ್ಟಾಚಾರವನ್ನು ಆಡಳಿತದ ಎಲ್ಲ ರಂಗದಲ್ಲಿ ಹಾಗೂ ಎಲ್ಲ ವಿಧದಲ್ಲಿ ಹೇಗೆ ಮಾಡಬಹುದೆಂಬುದನ್ನು ತೋರಿಸಿದ್ದೇ ರಾಜ್ಯ ಬಿಜೆಪಿಯ ಈವರೆಗಿನ ಸಾಧನೆ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಆರೋಪಿಸಿದ್ದಾರೆ.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ, ಮುಂದಿನ ರಾಜಕೀಯ ನಡೆಯ ಬಗ್ಗೆ ವಿವರಿಸಿದರು.

ದೇಶಭಕ್ತ, ಸತ್ಯವಂತ, ನ್ಯಾಯವಂತ ಎಂದು ಬಿಂಬಿಸಿಕೊಂಡ ಬಿಜೆಪಿಯನ್ನು ನಂಬಿ ಮತದಾರರು ಪರಿತಪಿಸುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ದೇಶದಲ್ಲಿ ನಂಬರ್ 1 ಪಟ್ಟ ಪಡೆದ ಸರಕಾರ ಎಂಬ ಹಣೆಪಟ್ಟಿ ಬಂದಿದೆ. ಭ್ರಷ್ಟಾಚಾರ, ಅಸಂವಿಧಾನಿಕ, ಮತದಾರರ ಹಕ್ಕಿಗೆ ಅಪಚಾರ ಎಸಗುವಂಥ ಆಪರೇಷನ್ ಕಮಲ ಹಾಗೂ ಶಾಸಕರನ್ನು ಖರೀದಿಸುವ ಕೆಟ್ಟ ಸಂಪ್ರದಾಯದಿಂದಾಗಿ ರಾಜ್ಯದ ವರ್ಚಸ್ಸಿಗೆ ಪೆಟ್ಟು ಬಿದ್ದಿದೆ ಎಂದರು.

ರಾಜ್ಯ ಸರಕಾರವನ್ನು ಕಾಂಗ್ರೆಸ್ ಎಂದಿಗೂ ಅಸ್ಥಿರಗೊಳಿಸಲು ಪ್ರಯತ್ನಿಸಿಲ್ಲ. ಸರಕಾರ ಬೀಳಿಸುವ ಇಚ್ಛೆಯೂ ನಮಗಿಲ್ಲ. ಇಂದು ಬಿಜೆಪಿಯ ಮನೆಗೆ ಬೆಂಕಿ ಬಿದ್ದಿದ್ದು, ಅದನ್ನು ನಂದಿಸುವ ಕೆಲಸವನ್ನು ಅವರು ಮಾಡಬೇಕೇ ಹೊರತು ನಾವಲ್ಲ. ಪಕ್ಷೇತರ ಸದಸ್ಯರನ್ನಾಗಲಿ ಇಲ್ಲವೇ ಬಿಜೆಪಿ ಅತೃಪ್ತ ಶಾಸಕರನ್ನಾಗಲಿ ಸರಕಾರದ ವಿರುದ್ಧ ಬಂಡಾಯ ಏಳುವಂತೆ ನಾವು ಪ್ರೇರೇಪಿಸಲಿಲ್ಲ. ಆದರೆ ಈ ಭ್ರಷ್ಟ ಹಾಗೂ ಕೋಮುವಾದಿ ಸರಕಾರದ ವಿರುದ್ಧ ವಿಧಾನಸಭೆಯಲ್ಲಿ ಮತ ಚಲಾಯಿಸಿದ್ದೇವೆ ಎಂದು ಹೇಳಿದರು.

ರಾಜ್ಯ ಸರಕಾರದ ಭವಿಷ್ಯ ಹಾಗೂ ಪ್ರತಿಪಕ್ಷಗಳ ಮುಂದಿನ ರಾಜಕೀಯ ನಡೆ ಹೈಕೋರ್ಟ್ ತೀರ್ಪಿನ ಮೇಲೆಯೇ ಅವಲಂಬಿಸಿದೆ. ಕಾಂಗ್ರೆಸ್‌ನ ಶಾಸಕರೆಲ್ಲರೂ ಒಗ್ಗಟ್ಟಿನಿಂದ ಇದ್ದು ಪಕ್ಷ ನಿಷ್ಠರಾಗಿದ್ದಾರೆ. ಯಾರೂ ಪಕ್ಷಾಂತರ ಮಾಡುವ ಸಾಧ್ಯತೆ ಇಲ್ಲವೇ ಇಲ್ಲ. ಅಷ್ಟಕ್ಕೂ ಪಕ್ಷಾಂತರ ಮಾಡಿದರೆ ಅದು ಮಾತೃದ್ರೋಹಕ್ಕೆ ಸಮಾನ ಎಂದರು.
ಸಂಬಂಧಿತ ಮಾಹಿತಿ ಹುಡುಕಿ