ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸರ್ಕಾರದ ಎಲ್ಲಾ ಹಗರಣ ದಾಖಲೆ ಸಹಿತ ಬಹಿರಂಗ: ಎಚ್‌ಡಿಕೆ (BJP | Yeddyurappa | Kumaraswamy | Congress | JDS)
Bookmark and Share Feedback Print
 
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ತಾಕತ್ತಿದ್ದರೆ ಮತ್ತೊಮ್ಮೆ ಸಂಪುಟ ವಿಸ್ತರಣೆ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದು, ಸರಕಾರದ ಹಗರಣಗಳನ್ನು ದಾಖಲೆ ಸಹಿತ ಬಿಡುಗಡೆಗೊಳಿಸುವ ಚಳವಳಿ ನಡೆಸುವುದಾಗಿ ಗುಡುಗಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರಕಾರ ಯಾವುದಾದರೂ ಒಂದು ಒಳ್ಳೆ ಕೆಲಸ ಮಾಡಿದೆ ಎಂದು ತೋರಿಸಿದ್ರೆ, ಕೂಡಲೇ ನಮ್ಮ ಪಕ್ಷದ 27 ಮಂದಿ ಶಾಸಕರು ಬೇಷರತ್ ಬೆಂಬಲ ನೀಡುತ್ತಾರೆಂದು ಅವರು ಘೋಷಿಸಿದರು.

ಆಪರೇಷನ್ ಕಮಲಕ್ಕೆ ಗಣಿ ದುಡ್ಡು ತಂದು ಸುರಿಯಲಾಗುತ್ತಿದೆ. ನಮ್ಮದು ಚಿಕ್ಕಪಕ್ಷ, ಅಷ್ಟೊಂದು ದುಡ್ಡು ಕೊಡಲು ಸಾಧ್ಯವೇ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮುಂಬರುವ ಉಪ ಚುನಾವಣೆಯಲ್ಲೂ ನಮ್ಮ ಶಕ್ತಿ ಸಾಮರ್ಥ್ಯ ತೋರಿಸುತ್ತೇವೆ. ನಮ್ಮ ಬಲವನ್ನು ಹೆಚ್ಚಿಸಿಕೊಳ್ಳುತ್ತೇವೆ ಎಂದರು.

ಗುಬ್ಬಿ ಶಾಸಕ ಶ್ರೀನಿವಾಸ್ ಅವರು ಆಮಿವೊಡ್ಡಿದ ಸಿ.ಡಿಯನ್ನು ಬಿಡುಗಡೆ ಮಾಡಿದಾಗಿನಿಂದ ಸತ್ಯಾಸತ್ಯತೆಗಳು ಹೊರಬರುತ್ತಿದ್ದು, ಈ ಪ್ರಕರಣದ ಕುರಿತು ನ್ಯಾಯಾಲಯದ ಮೆಟ್ಟಿಲು ಏರುವುದಾಗಿ ಕುಮಾರಸ್ವಾಮಿ ಹೇಳಿದರು.

ಕಂಡ,ಕಂಡ ದೇವರಿಗೆ ಕೈಮುಗಿಯುತ್ತಿರುವ ಸಿಎಂ: ತಮ್ಮ ತಪ್ಪಿನಿಂದ ರಕ್ಷಿಸು ಅಂತ ಮುಖ್ಯಮಂತ್ರಿಗಳು ಕಂಡ, ಕಂಡ ದೇವರಿಗೆ ಕೈಮುಗಿದು ರಕ್ಷಿಸುವಂತೆ ಬೇಡಿಕೊಳ್ಳುತ್ತಿದ್ದಾರೆ. ಈಗ ಭಗವಂತನ ನೆನಪು ಬಂದಿದೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಸರಕಾರ ಅಭದ್ರಗೊಳಿಸಲು ನಡೆದ ಷಡ್ಯಂತ್ರದ ಕುರಿತು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯಿಂದ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿಗಳು ಹೇಳಿರುವುದು 60 ವರ್ಷಗಳ ಸ್ವತಂತ್ರ ಭಾರತದಲ್ಲಿ ಇದೇ ಮೊದಲ ಬಾರಿಗೆ ಹೊಸ ಸಂಪ್ರದಾಯ ಆರಂಭಿಸಿದ್ದಾರೆ. ಇದನ್ನು ಸ್ವಾಗತಿಸುತ್ತೇನೆ. ಆದರೆ ಪಕ್ಷೇತರರು ಸರಕಾರಕ್ಕೆ ಬೆಂಬಲ ಸೂಚಿಸಿದಾಗಿನಿಂದ ಹಿಡಿದು, ಹೈದರಾಬಾದ್‌ನಲ್ಲಿ ನಡೆದ 40-50 ಮಂದಿ ಬಿಜೆಪಿ ಶಾಸಕರು ನಡೆಸಿದ ಭಿನ್ನಮತ ಚಟುವಟಿಕೆ ಸೇರಿದಂತೆ ಪ್ರಸ್ತುತದವರೆಗೆ ನಡೆದಿರುವ ಆಪರೇಷನ್ ಕಮಲದವರೆಗೂ ಎಲ್ಲವೂ ತನಿಖೆಯಾಗಬೇಕು ಎಂದರು.
ಸಂಬಂಧಿತ ಮಾಹಿತಿ ಹುಡುಕಿ