ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕಳ್ಳಸಾಗಣೆ ಜಾಲ?: ಬಿಹಾರದ 24 ಮಕ್ಕಳ ರಕ್ಷಣೆ (Bangalore | Bihara | K.R.Puram | Railway | Police)
Bookmark and Share Feedback Print
 
ಬಿಹಾರದಿಂದ ನಗರಕ್ಕೆ ಕರೆತರಲಾದ ಓರ್ವ ಬಾಲಕಿ ಸೇರಿ 24 ಮಕ್ಕಳನ್ನು ಸ್ವಯಂ ಸೇವಾ ಸಂಘಟನೆಯ ಸರಕಾರದೊಂದಿಗೆ ನಗರ ರೈಲ್ವೆ ಪೊಲೀಸರು ರಕ್ಷಿಸಿರುವ ಘಟನೆ ಬುಧವಾರ ನಡೆದಿದೆ.

ಬಿಹಾರದ ಚಂಪಾರಣ್‌ನಿಂದ ಅ.25ರಂದು ಗೋರಖ್‌ಪುರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಹೊರಟಿದ್ದು, 24 ಮಂದಿ ಮಕ್ಕಳು ಇಂದು ಬೆಳಿಗ್ಗೆ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಇಳಿದ ಕೂಡಲೇ ಅವರನ್ನು ರಕ್ಷಿಸಿ ಠಾಣೆಗೆ ಕರೆತರಲಾಯಿತು. ಇದೊಂದು ಮಕ್ಕಳ ಕಳ್ಳ ಸಾಗಣೆ ಎಂದು ಪೊಲೀಸರು ಶಂಕಿಸಿದ್ದಾರೆ.

ಬಾಲಕರನ್ನು ಅಬ್ದುಲ್ ರಶೀದ್ ಎಂಬಾತ ಕರೆ ತಂದಿದ್ದು, ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕೆ.ಆರ್.ಪುರಂ ಬಳಿಯ ಮದರಸಾದಲ್ಲಿ ಶಿಕ್ಷಣ ನೀಡಲು ಈ ಬಾಲಕರನ್ನು ಕರೆ ತಂದಿದ್ದಾಗಿ ತಿಳಿಸಿದ್ದ. ಅಲ್ಲದೆ, ಇತ್ತೀಚೆಗಷ್ಟೇ 14 ಮಂದಿ ಕಡು ಬಡತನ ಕುಟುಂಬದ ಬಾಲಕರನ್ನು ಶಿಕ್ಷಣ ಪಡೆಯಲು ಮದರಸಾದಲ್ಲಿ ಸೇರಿಸಿರುವುದಾಗಿ ಆತ ಪೊಲೀಸರಲ್ಲಿ ಬಾಯ್ಬಿಟ್ಟಿದ್ದಾನೆ.

ಬಾಲಕರ ಬಳಿ ಮದರಸಾದಲ್ಲಿ ಶಿಕ್ಷಣ ಪಡೆಯಲು ಇದ್ದ ದಾಖಲೆಗಳನ್ನು ಪರಿಶೀಲನೆ ನಡೆಸಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ರೈಲ್ವೆ ಎಸ್.ಪಿ.ಶಿವಕುಮಾರ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ