ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅನರ್ಹ ಶಾಸಕ ಬಗಲಿ, ಬೆಳ್ಳುಬ್ಬಿ ಕ್ಷಮೆಯಾಚಿಸಿ ಮರು ಸೇರ್ಪಡೆ? (BJP | Yeddyurappa | Bellubbi | Anand | Manappa Vajjal)
Bookmark and Share Feedback Print
 
ರಾಜ್ಯ ರಾಜಕೀಯದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ಎಂಬಂತೆ ಅನರ್ಹಗೊಂಡ ಶಾಸಕ ಡಾ.ಸಾರ್ವಭೌಮ ಬಗಲಿ, ಎಸ್.ಕೆ.ಬೆಳ್ಳುಬ್ಬಿ ಹಾಗೂ ಬಂಡಾಯ ಸಾರಿದ್ದ ಶಾಸಕ ಮಾನಪ್ಪ ವಜ್ಜಲ್ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರ ಬಳಿ ಕ್ಷಮೆ ಯಾಚಿಸಲು ಮುಂದಾಗಿದ್ದಾರೆ ಎಂಬ ಸುದ್ದಿ ಸುಳ್ಳು ಎಂದು ಅನರ್ಹಗೊಂಡ ಶಾಸಕ ಆನಂದ್ ಅಸ್ನೋಟಿಕರ್ ಸ್ಪಷ್ಟಪಡಿಸಿದ್ದಾರೆ.

ಕೆಟ್ಟ ಮೇಲೆ ಬುದ್ದಿ ಬಂತು ಎಂಬ ಗಾದೆ ಮಾತಿನಂತೆ ಅನರ್ಹಗೊಂಡ ಶಾಸಕರಾದ ಡಾ.ಸಾರ್ವಭೌಮ ಬಗಲಿ, ಎಸ್.ಕೆ.ಬೆಳ್ಳುಬ್ಬಿ ಮತ್ತು ವಿಶ್ವಾಸಮತ ಯಾಚನೆ ಸಂದರ್ಭದಿಂದ ನಾಪತ್ತೆಯಾಗಿದ್ದ ಭಿನ್ನಮತೀಯ ಶಾಸಕ ಮಾನಪ್ಪ ವಜ್ಜಲ್ ಇದೀಗ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ನೇತೃತ್ವದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಮುಂದೆ ಕ್ಷಮೆಯಾಚಿಸಿ ಮತ್ತೆ ಬಿಜೆಪಿ ಜತೆ ಇರಲು ಮುಂದಾಗಿದ್ದಾರೆ ಎಂಬ ಸುದ್ದಿ ಸುದ್ದಿವಾಹಿನಿಯೊಂದರಲ್ಲಿ ವರದಿಯಾಗಿತ್ತು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವದ ವಿರುದ್ಧ ಸೆಡ್ಡು ಹೊಡೆದು ಬಿಜೆಪಿಯ 11 ಮಂದಿ ಶಾಸಕರು ಹಾಗೂ ಪಕ್ಷೇತರ ಐದು ಮಂದಿ ಶಾಸಕರು ಬಂಡಾಯದ ಬಾವುಟ ಹಾರಿಸಿದ್ದರು. ಇದೀಗ ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ಪ್ರಕರಣ ಹೈಕೋರ್ಟ್ ಕಟಕಟೆಯಲ್ಲಿದೆ. ಏತನ್ಮಧ್ಯೆ ಸಾಕಷ್ಟು ರಾಜಕೀಯ ನಾಟಕಗಳು ನಡೆದಿದೆ. ಅಷ್ಟೆಲ್ಲಾ ರಂಪಾಟದ ನಡುವೆಯೇ 11 ಮಂದಿ ಅನರ್ಹ ಶಾಸಕರ ಗುಂಪಿನಿಂದ ಡಾ.ಸಾರ್ವಭೌಮ ಬಗಲಿ ಮತ್ತು ಎಸ್.ಕೆ.ಬೆಳ್ಳುಬ್ಬಿ ಅವರನ್ನು ಜನಾರ್ದನ ರೆಡ್ಡಿ ಮನವೊಲಿಸಿ ಮತ್ತೆ ಬಿಜೆಪಿ ಪಡಸಾಲೆಗೆ ಕರೆತರುತ್ತಿದ್ದಾರೆ ಎಂಬ ವದಂತಿ ದಟ್ಟವಾಗಿ ಹಬ್ಬಿದೆ.

ಅನರ್ಹಗೊಂಡ ಶಾಸಕರನ್ನು ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳುವ ಬಗ್ಗೆ ಬಿಜೆಪಿಯಲ್ಲೇ ತೀವ್ರ ವಿರೋಧ ವ್ಯಕ್ತವಾಗಿದೆ. ಬಗಲಿ, ಬೆಳ್ಳುಬ್ಬಿ ಹಾಗೂ ವಜ್ಜಲ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಕೈಮಗ್ಗ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ ವಿರೋಧ ವ್ಯಕ್ತಪಡಿಸಿದ್ದಾರೆ.

ಏತನ್ಮಧ್ಯೆ ನಾವು 11 ಮಂದಿ ಶಾಸಕರು ಒಟ್ಟಿಗಿದ್ದೇವೆ. ಕ್ಷಮೆ ಕೇಳುವ ವಿಚಾರ ಸದ್ಯ ನಮ್ಮ ಮುಂದಿಲ್ಲ ಎಂದು ಆನಂದ್ ಅಸ್ನೋಟಿಕರ್ ಪ್ರತಿಕ್ರಿಯೆ ನೀಡಿದ್ದಾರೆ. ರಾಜಕೀಯ ವಿದ್ಯಾಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಆ ಬಗ್ಗೆ ಚರ್ಚೆ ನಡೆಸುತ್ತಿರುವುದಾಗಿ ಅವರು ವಿವರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ