ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಪಿತೂರಿಗೆ ಕುಮಾರಸ್ವಾಮಿ ಕಾರಣ: ರೇಣುಕಾಚಾರ್ಯ (Renukacharya | BJP | Congress | Kumaraswamy | JDS)
Bookmark and Share Feedback Print
 
ಕಾಂಗ್ರೆಸ್ ಹಾಗೂ ಜನತಾದಳ ನಾಯಕರು ಅಧಿಕಾರವಿಲ್ಲದೆ ನೀರಿನಿಂದ ಹೊರ ತೆಗೆದ ಮೀನಿನಂತೆ ಒದ್ದಾಡುತ್ತಿದ್ದಾರೆ ಎಂದು ಅಬಕಾರಿ ಸಚಿವ ರೇಣುಕಾಚಾರ್ಯ ತಿಳಿಸಿದ್ದಾರೆ.

ಅವರು ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಲವು ಶಾಸಕರನ್ನು ಬಲಿಪಶು ಮಾಡಿದ್ದಾರೆಂದು ಆರೋಪಿಸಿದ ಅವರು, ಇದಕ್ಕೆಲ್ಲ ಕುಮಾರಸ್ವಾಮಿಯೇ ಕಾರಣ ಎಂದರು.

ಭಿನ್ನಮತಕ್ಕೆ ನಾನು ಕಾರಣನಲ್ಲ ಎಂದು ಸ್ಪಷ್ಟಪಡಿಸಿದ ಅವರು, ಅನಾವಶ್ಯಕವಾಗಿ ನನ್ನನ್ನು ಬಲಿಪಶು ಮಾಡಲಾಗುತ್ತಿದೆ. ನಾನು ಆಡಳಿತಾರೂಢ ಬಿಜೆಪಿ ಸರಕಾರವನ್ನು ಅಸ್ಥಿರಗೊಳಿಸಲು ಯಾವುದೇ ಪಿತೂರಿ ನಡೆಸಿಲ್ಲ. ಇದಕ್ಕೆ ಮಾಧ್ಯಮಗಳೂ ಕೂಡ ನನ್ನ ವಿರುದ್ಧವೇ ಊಹಾಪೋಹದ ಸುದ್ದಿಗಳನ್ನು ಪ್ರಕಟಿಸುತ್ತಿರುವುದಾಗಿ ದೂರಿದರು.

ಯಾರು ಏನೇ ಪಿತೂರಿ ಮಾಡಿದರೂ ರಾಜ್ಯ ಬಿಜೆಪಿ ಸರಕಾರವನ್ನು ಪತನ ಮಾಡಲು ಸಾಧ್ಯವಿಲ್ಲ, ಬಿಜೆಪಿ ಪೂರ್ಣವಾಗಿ ಐದು ವರ್ಷಗಳನ್ನು ಪೂರೈಸಲಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ