ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕಂದಾಯ ವಸೂಲಿಗೆ ಹೋದ ಬಿಬಿಎಂಪಿ ಅಧಿಕಾರಿಗಳಿಗೆ ಗೂಸಾ! (BBMP | KR Market | Police | Bangalore)
Bookmark and Share Feedback Print
 
ನಗರದ ಕೆ.ಆರ್.ಮಾರ್ಕೆಟ್ ಪ್ರದೇಶದಲ್ಲಿರುವ ಬಿಬಿಎಂಪಿಗೆ ಸೇರಿದ ಕಟ್ಟಡಗಳ ಕಂದಾಯ ಬಾಕಿ ವಸೂಲಿಗೆ ತೆರಳಿದ್ದ ಅಧಿಕಾರಿಗಳ ಮೇಲೆ ಅಂಗಡಿಗಳ ಮಾಲೀಕರು ಹಲ್ಲೆ ನಡೆಸಿರುವ ಘಟನೆ ಗುರುವಾರ ನಡೆದಿದೆ.

ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದರು. ಕೆ.ಆರ್.ಮಾರ್ಕೆಟ್ ಪ್ರದೇಶದಲ್ಲಿರುವ ಅಂಗಡಿಗಳ ಸುಮಾರು 6 ಕೋಟಿ ರೂ.ಗಳಷ್ಟು ಕಂದಾಯ ವಸೂಲಿ ಮಾಡಬೇಕಾಗಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಟ್ಯಾಕ್ಸ್ ಇನ್ಸ್‌ಪೆಕ್ಟರ್ ಅಮೃತ್ ರಾಜ್ ಮತ್ತು ಕೆಲವು ಅಧಿಕಾರಿಗಳು ತೆರಳಿದ್ದ ಸಂದರ್ಭದಲ್ಲಿ ಅಂಗಡಿಗಳ ಮಾಲೀಕರು ಗೂಸಾ ನೀಡಿದ್ದರು.

ಅಧಿಕಾರಿಗಳು ಇಂದು ಬೆಳಿಗ್ಗೆ ಸ್ಥಳಕ್ಕೆ ಆಗಮಿಸಿ ಕಂದಾಯ ಬಾಕಿ ವಸೂಲಿಗೆ ಪ್ರಯತ್ನ ನಡೆಸಿದಾಗ ಮಾರ್ಕೆಟ್ ಪ್ರದೇಶಗಳ ಮಾಲೀಕರು ಮತ್ತು ಬಿಬಿಎಂಪಿ ಅಧಿಕಾರಿಗಳ ನಡುವೆ ಮೊದಲು ಮಾತಿನ ಚಕಮಕಿ, ವಾದ-ವಿವಾದ ನಡೆದಿತ್ತು. ಈ ಸಂದರ್ಭದಲ್ಲಿ ಕಂದಾಯ ವಸೂಲಿ ನೇತೃತ್ವ ವಹಿಸಿದ್ದ ಅಮೃತ್ ರಾಜ್ ಮೇಲೆ ಮಾಲೀಕರು ಹಲ್ಲೆ ನಡೆಸಿದಾಗ ಪೊಲೀಸರು ಮಧ್ಯೆ ಪ್ರವೇಶಿಸಿ ಲಾಠಿ ಚಾರ್ಜ್ ಮಾಡಿ ಗಲಾಟೆ ಮಾಡುತ್ತಿದ್ದ ಮಾಲೀಕರ ಗುಂಪನ್ನು ಚದುರಿಸಿದರು.

ಕಂದಾಯ ನೀಡಲು ಮಾಲೀಕರು ವಿರೋಧ ವ್ಯಕ್ತಪಡಿಸಿ, ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆಂದು ಅಮೃತ್ ರಾಜ್ ಅವರು ಕೆ.ಆರ್.ಮಾರ್ಕೆಟ್ ಠಾಣೆಗೆ ದೂರು ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ