ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಬೆಂಗಳೂರು ಪೊಲೀಸರು, ನಗರದ ಹೊರವಲಯದಲ್ಲಿರುವ ವೈಟ್ ಫೀಲ್ಡ್ ಬಳಿ ಐವರು ಶಂಕಿತ ಬೋಡೋ ಉಗ್ರರನ್ನು ಗುರುವಾರ ಬಂಧಿಸಿದ್ದಾರೆ.
ಈಶಾನ್ಯ ರಾಜ್ಯಗಳಲ್ಲಿ, ವಿಶೇಷವಾಗಿ ಅಸ್ಸಾಂನಲ್ಲಿ ಸಕ್ರಿಯರಾಗಿರುವ ಎನ್‌ಡಿಎಫ್‌ಬಿ ಎಂಬ ಬೋಡೋ ಉಗ್ರಗಾಮಿ ಸಂಘಟನೆಗೆ ಸೇರಿದ ಈ ಭಯೋತ್ಪಾದಕರನ್ನು ಕೇಂದ್ರ ಗುಪ್ತಚರ ಇಲಾಖೆಯ ಮಾಹಿತಿ ಆಧರಿಸಿ ಬಂಧಿಸಲಾಗಿದೆ.
ಬಂಧಿತರನ್ನು ಜಂಗೀಲಾ, ಉಪೇನ್, ಸಮರ್, ಉತ್ತಮ್ ಮತ್ತು ಸಂಜಯ್ ಸಿಂಗ್ ಎಂದು ಗುರುತಿಸಲಾಗಿದೆ.
ಇತ್ತೀಚೆಗೆ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಭಯೋತ್ಪಾದಕರ ಚಟುವಟಿಕೆ ಹೆಚ್ಚಾಗುತ್ತಿದ್ದು, ಆಡಳಿತವು ಆಂತರಿಕ ಕಚ್ಚಾಟಗಳಿಂದ ಹೊರಬಂದು, ಚುರುಕುಗೊಳ್ಳಬೇಕಾದ ಅಗತ್ಯವಿದೆ.