ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಎಂಟಿಸಿ; ಇನ್ಮುಂದೆ ಟಿಕೆಟ್ ಬೇಡ, ಮೊಬಿಲಿಟಿ ಕಾರ್ಡ್ ಬಳಸಿ! (BMTC | Mobility card | Ashok | BJP | Yeddyurappa)
Bookmark and Share Feedback Print
 
ಉದ್ಯಾನನಗರಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರು ಇನ್ಮುಂದೆ ಟಿಕೆಟ್ ಕೊಡಿ, ಚಿಲ್ಲರೆ ಕೊಡಿ ಎಂದು ಒದ್ದಾಡಬೇಕಾಗಿಲ್ಲ. ಯಾಕೆಂದರೆ ಲಂಡನ್ ಮಾದರಿಯಲ್ಲಿ ಟಿಕೆಟ್ ಬದಲು ಮೊಬಿಲಿಟಿ ಕಾರ್ಡ್ ಬಳಸಿ ಬಿಎಂಟಿಸಿ ಹಾಗೂ ಮೆಟ್ರೊದಲ್ಲಿ ಪ್ರಯಾಣಿಸುವ ವಿನೂತನ ಪದ್ದತಿ ಜಾರಿಗೆ ತರಲು ರಾಜ್ಯ ಸರಕಾರ ನಿರ್ಧರಿಸಿದೆ.

ಕೇಂದ್ರ ಸರಕಾರದ ನೆರವಿನೊಂದಿಗೆ ದೇಶದಲ್ಲಿಯೇ ಪ್ರಥಮ ಬಾರಿಗೆ ಪ್ರಾಯೋಗಿಕವಾಗಿ ರಾಜಧಾನಿಯಲ್ಲಿ ಈ ಯೋಜನೆಯನ್ನು ಪರಿಚಯಿಸಲಾಗುತ್ತಿದೆ ಎಂದು ಸಾರಿಗೆ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ಕೇಂದ್ರ ಸರಕಾರ ದೇಶದ ಇತರೆಡೆಯೂ ಈ ಪದ್ದತಿಯನ್ನು ಜಾರಿಗೆ ತಂದರೆ ಮೊಬಿಲಿಟಿ ಕಾರ್ಡ್ ದೇಶದ ಯಾವುದೇ ನಗರದಲ್ಲಿ ಪ್ರಯಾಣಿಸಬಹುದಾಗಿದೆ ಎಂದು ವಿವರಿಸಿದರು.

ಬೆಂಗಳೂರು ವರದಿಗಾರರ ಕೂಟ ಏರ್ಪಡಿಸಿದ್ದ ಪತ್ರಕರ್ತರಿಗೆ ಸ್ಮಾರ್ಟ್ ಕಾರ್ಡ್ ನೀಡುವ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಸರಕಾರದ ನಗರಾಭಿವೃದ್ಧಿ ಇಲಾಖೆಯು ಈ ಯೋಜನೆಗಾಗಿ ಬೆಂಗಳೂರನ್ನು ಆಯ್ಕೆ ಮಾಡಿದೆ. ಮೊದಲ ಹಂತದಲ್ಲಿ ನಗರದ ಒಂದು ಸಾವಿರ ಬಸ್‌ಗಳಲ್ಲಿ ಇದು ಜಾರಿಗೆ ಬರಲಿದೆ ಎಂದರು.

ಇದಕ್ಕಾಗಿ ಸುಮಾರು 16 ಕೋಟಿ ರೂಪಾಯಿ ವೆಚ್ಚವಾಗಲಿದೆ. ಶೇ.35ರಷ್ಟು ಹಣವನ್ನು ಕೇಂದ್ರ ಸರಕಾರ, ಶೇ.15ರಷ್ಟು ಹಣವನ್ನು ರಾಜ್ಯ ಸರಕಾರ ಮತ್ತು ಶೇ.50ರಷ್ಟು ಹಣವನ್ನು ಬಿಎಂಟಿಸಿ ಭರಿಸಲಿದೆ ಎಂದು ಹೇಳಿದರು.

ಅಷ್ಟೇ ಅಲ್ಲ ಶೀಘ್ರದಲ್ಲೇ ಆರಂಭವಾಗಲಿರುವ ಮೆಟ್ರೊದಲ್ಲೂ ಮೊಬಿಲಿಟಿ ಕಾರ್ಡ್ ಮೂಲಕ ಸಂಚರಿಸಬಹುದಾಗಿದೆ. ಅಲ್ಲದೆ ಪಾರ್ಕಿಂಗ್ ವ್ಯವಸ್ಥೆಗೂ ಬಳಸಬಹುದಾಗಿದೆ ಎಂದರು.

ಕಾರ್ಡ್ ಬಳಕೆ ಹೇಗೆ?: ಪ್ರಯಾಣಿಕರು ಮೊಬಿಲಿಟಿ ಕಾರ್ಡ್ ಬಳಸಿ ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸಬಹುದಾಗಿದೆ. ಟಿಕೆಟ್ ಪಡೆಯಬೇಕಾದ ಅಗತ್ಯ ಇಲ್ಲ. ಮೊಬೈಲ್ ರಿಚಾರ್ಜ್ ಮಾದರಿಯಲ್ಲಿ ಮೊಬಿಲಿಟಿ ಕಾರ್ಡ್ ಅನ್ನು ರಿಜಾರ್ಜ್ ಮಾಡಿಸಬೇಕಾಗುತ್ತದೆ. ಬಸ್ ಹತ್ತಿದ ಕೂಡಲೇ ಕಾರ್ಡ್ ಅನ್ನು ಎಲೆಕ್ಟ್ರಾನಿಕ್ ಟಿಕೆಟಿಂಗ್ ಮಿಷಿನ್‌ಗೆ ಟಚ್ ಮಾಡಬೇಕು. ಆಗ ಕೂಡಲೇ ಪ್ರಯಾಣ ದರದ ಹಣ ಕಡಿತವಾಗುತ್ತದೆ. ಕಾರ್ಡ್‌ನಲ್ಲಿ ಹಣ ಖರ್ಚಾದ ಕೂಡಲೇ ರಿಚಾರ್ಜ್ ಮಾಡಿಸಬೇಕಾಗುತ್ತದೆ. ಇದಕ್ಕಾಗಿ 100 ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದರು.
ಸಂಬಂಧಿತ ಮಾಹಿತಿ ಹುಡುಕಿ