ಅಸಾಂವಿಧಾನಿಕವಾಗಿ ವರ್ತಿಸುತ್ತಿರುವ ಕರ್ನಾಟಕ ರಾಜ್ಯಪಾಲ ಹೆಚ್. ಆರ್. ಭಾರದ್ವಾಜ್‌ರನ್ನು ಕೇಂದ್ರ ಶೀಘ್ರವೇ ವಾಪಾಸ್ ಕರೆಸಿಕೊಳ್ಳಬೇಕು ಎಂದು ರಾಜ್ಯ ಬಿಜೆಪಿ ಪಕ್ಷ ಆಗ್ರಹಿಸಿದೆ.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ನೇರ ವಾಗ್ದಾಳಿ ನಡೆಸಿದ ಬಿಜೆಪಿ ವರಿಷ್ಠ ವೆಂಕೆಯ್ಯ ನಾಯ್ಡು, ಸಂವಿಧಾನದ ಬಗ್ಗೆ ರಾಜ್ಯಪಾಲರಿಗೆ ಗೌರವವಿದ್ದರೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಇತ್ತೀಚೆಗೆ ಬಿಜೆಪಿನ ಕೆಲವು ಶಾಸಕರು ಬಂಡಾಯವೆದ್ದಿದ್ದ ಸಂದರ್ಭದಲ್ಲಿ ರಾಜ್ಯಪಾಲರು ಕಾನೂನು ಬಾಹಿರವಾಗಿ ವರ್ತಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಮಾತು ಮುಂದುವರಿಸಿದ ವೆಂಕಯ್ಯ, ಒಂದು ವೇಳೆ ಭಾರದ್ವಾಜ್ ರಾಜಿನಾಮೆ ನೀಡಲು ಮುಂದಾಗದಿದ್ದಲ್ಲಿ ಕೇಂದ್ರ ಖುದ್ದಾಗಿ ವಾಪಾಸ್ ಕರೆಯಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.