ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅರುಂಧತಿ ವಿರುದ್ಧ ಮೊಕದ್ದಮೆ ಬೇಡ: ಕಾರ್ನಾಡ್ ಉವಾಚ (Girish karnad | Arundhathi Roy | Kashmir | India)
Bookmark and Share Feedback Print
 
ಪ್ರಜಾಪ್ರಭುತ್ವದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಎಲ್ಲರಿಗೂ ಸ್ವಾತಂತ್ರ್ಯವಿದೆ. ಹಾಗಾಗಿ ಲೇಖಕಿ ಅರುಂಧತಿ ರಾಯ್ ವಿರುದ್ಧ ಮೊಕದ್ದಮೆ ದಾಖಲು ಮಾಡುವ ಕ್ರಮ ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಬೆಂಬಲ ಸೂಚಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಶ್ಮೀರದಲ್ಲಿ ನಮ್ಮವರ ವಿರುದ್ಧ ಪೊಲೀಸ್ ಮತ್ತು ಮಿಲಿಟರಿ ದಬ್ಬಾಳಿಕೆ, ದೌರ್ಜನ್ಯ ನಡೆದಿದೆ. 15 ದಿನಗಳಲ್ಲಿ 140ಕ್ಕೂ ಹೆಚ್ಚು ಯುವಕರ ಕೊಲೆಯಾಗಿದೆ. ಇದನ್ನು ಪ್ರಶ್ನಿಸುವುದು ತಪ್ಪೇ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚರ್ಚೆಗೆ ಮುಕ್ತ ಅವಕಾಶಬೇಕು. ಈ ನಿಟ್ಟಿನಲ್ಲಿ ಅರುಂಧತಿ ರಾಯ್ ಕಾಶ್ಮೀರ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯ. ಅವರ ಹೇಳಿಕೆ ಕುರಿತು ಮುಕ್ತ ಚರ್ಚೆ ನಡೆಯಬೇಕೇ ಹೊರತು ಅವರನ್ನು ಬಂಧಿಸ ಬೇಕು, ಶಿಕ್ಷಿಸಬೇಕು ಎಂಬ ಫ್ಯಾಸಿಸ್ಟ್ ಮನೋಭಾವದ ಹೇಳಿಕೆಗಳು ಸರಿಯಲ್ಲ ಎಂದರು.

ಕಾಶ್ಮೀರದಲ್ಲಿ ಪಂಡಿತರಿಗೂ ಸಾಕಷ್ಟು ಅನ್ಯಾಯವಾಗಿದೆ. ಆದರೆ, ಅದು ಮುಗಿದ ಅಧ್ಯಾಯ. ಸದ್ಯ ಅಲ್ಲಿ ನಮ್ಮದೆ ಜನರ ಮೇಲೆ ಪೊಲೀಸರು ಮತ್ತು ಮಿಲಿಟರಿಯವರು ನಡೆಸುತ್ತಿರುವ ದೌರ್ಜನ್ಯದ ಬಗ್ಗೆ ಗಮನ ಸೆಳೆಯುವ ಪ್ರಯತ್ನವನ್ನು ಅರುಂಧತಿ ಮಾಡಿದ್ದಾರೆ. ಕಾಶ್ಮೀರ ವಿಷಯ ವನ್ನು ನಿರ್ವಹಿಸುವ ನಿಟ್ಟಿನಲ್ಲಿ ಸರಕಾರಗಳು ಸಂಪೂರ್ಣ ವಿಫಲವಾಗಿವೆ. ಸ್ವಾತಂತ್ರ್ಯ ಬಂದು ಆರು ದಶಕ ಕಳೆದರೂ ರಾಜ್ಯವೊಂದರ ಸಮಸ್ಯೆ ಇತ್ಯರ್ಥಗೊಳಿಸಲು ಆಗದೆ ಇರುವುದು ನಮ್ಮ ವ್ಯವಸ್ಥೆಯ ಲೋಪವಾಗಿದೆ ಎಂದು ವಿಷಾದಿಸಿದರು.
ಸಂಬಂಧಿತ ಮಾಹಿತಿ ಹುಡುಕಿ