ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಭಾಷಾಭಿಮಾನ ಬೆಳೆಸಿಕೊಳ್ಳುವುದು ಅಗತ್ಯ: ಜವರೇಗೌಡ (Language | javaregowda | kannada)
Bookmark and Share Feedback Print
 
ಮಾತೃಭಾಷೆ ಕನ್ನಡದ ವ್ಯಾಮೋಹ ತೊರೆದು ಇಂಗ್ಲಿಷ್ ಹಿಂಬಾಲಿಸುವ ಅಗತ್ಯವಿಲ್ಲವೆಂದು ನಾಡೋಜ ದೇ. ಜವರೇಗೌಡ ತಿಳಿಸಿದರು.
ಪಟ್ಟಣದ ಬಿಜಿಎಸ್ ಸಮುದಾಯ ಭವನದಲ್ಲಿ ಜಿಲ್ಲಾ ಮಟ್ಟದ ಪ್ರೌಢಶಾಲಾ ಕನ್ನಡ ಭಾಷಾ ಬೋಧಕರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, `ನಾವು ಜರ್ಮನರಂತೆ ಭಾಷಾಭಿಮಾನ ಬೆಳೆಸಿಕೊಳ್ಳಬೇಕು. ಆಗ ಮಾತ್ರ ವಾಣಿಜ್ಯೋದ್ಯಮಕ್ಕಾಗಿ ಕಾನ್ವೆಂಟ್ ತೆರೆಯುವ ಭ್ರಷ್ಟರನ್ನು ನಿಯಂತ್ರಿಸಲು ಸಾಧ್ಯ' ಎಂದು ಅಭಿಪ್ರಾಯಪಟ್ಟರು.

`ಇಂಗ್ಲಿಷ್ ಭಾಷೆ ವ್ಯಾಪರೀಕರಣಕ್ಕಾಗಿಯೇ ಅನಗತ್ಯವಾಗಿ ವೈಭವೀಕರಿಸಲಾಗುತ್ತಿದೆ. ಕನ್ನಡ ಕಲಿತವರಿಗೆ ಕನ್ನಡ ನಾಡಿನಲ್ಲಿ ಕೆಲಸಕ್ಕೆ ಮೊದಲ ಆದ್ಯತೆ ನೀಡಲಿ, ಉದ್ಯೋಗಕ್ಕಾಗಿಯೇ ಇಂಗ್ಲಿಷ್ ಕಲಿತವರು ಬೇಕಾದರೆ ಇಂಗ್ಲೆಂಡ್‌ಗೆ ಹೋಗಲಿ' ಎಂದರು.

ರಾಜ್ಯದಾದ್ಯಂತ ಕನ್ನಡ ಶಿಕ್ಷಕರು ಸಂಘಟಿತರಾಗಿ ಭಾಷೆಯ ಅಭಿವೃದ್ದಿಗೆ ಹೆಚ್ಚು ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ರಾಜಕಾರಣ ಸಂಪೂರ್ಣ ಮೌಲ್ಯ ಕಳೆದುಕೊಂಡಿದ್ದು, ಕನ್ನಡ ಭಾಷೆಯನ್ನು ರಾಜಕಾರಣಕ್ಕೆ ಬಳಸಿಕೊಳ್ಳದಂತೆ ನಿಗಾವಹಿಸುವ ಅಗತ್ಯವಿದೆ. ಕನ್ನಡಿಗರು ಸರ್ವಧರ್ಮ ಸಹಿಷ್ಣುಗಳು, ಸೌಮ್ಯವಾದಿಗಳಷ್ಟೇ ಆದರೆ ಸಾಲದು, ಕನ್ನಡ ಭಾಷೆ, ನೆಲ, ಜಲ ವಿಚಾರ ಬಂದಾಗ ಕೆಚ್ಚಿನ ಸ್ವಾಭಿಮಾನಿಗಳಾಗಬೇಕು ಎಂದರು.
ಸಂಬಂಧಿತ ಮಾಹಿತಿ ಹುಡುಕಿ