4 ಸಾವಿರ ಅಧಿಕಾರಿಗಳಲ್ಲಿ 1500 ಅಧಿಕಾರಿಗಳು ಭ್ರಷ್ಟರು:ಹೆಗ್ಡೆ
ನೆಲಮಂಗಲ, ಶನಿವಾರ, 6 ನವೆಂಬರ್ 2010( 12:26 IST )
NRB
ಸರಕಾರದ ಸೌಲಭ್ಯಗಳು, ತೋಳ್ಬಲ, ರಾಜಕೀಯಬಲ, ಹಣಬಲದವರ ಪಾಲಾಗುತ್ತಿರುವುದು ದುರಾದೃಷ್ಟಕರ ಸಂಗತಿ.ರಾಜ್ಯದಲ್ಲಿ ಕೇವಲ 3 ರಿಂದ 4 ಸಾವಿರ ಸರಕಾರಿ ಅಧಿಕಾರಿಗಳಿದ್ದಾರೆ ಇವರಲ್ಲಿ 1500 ಭ್ರಷ್ಟ ಅಕಾರಿಗಳ ಬಗ್ಗೆ ದೂರುಗಳಿವೆ ಎಂದು ಲೋಕಾಯುಕ್ತ ಸಂತೋಷ ಹೆಗ್ಡೆ ತಿಳಿಸಿದರು.
ನೆಲಮಂಗಲದ ವಾಜರಹಳ್ಳಿಯಲ್ಲಿರುವ ಸೆಂಟ್ ಆನ್ಸ್ ಸ್ಕೂಲ್‌ನಲ್ಲಿ ಶಾಲಾ ಆಡಳಿತ ಮಂಡಳಿ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ಕೆಲವು ರಾಜಕಾರಣಿಗಳು ಶ್ರೀಮಂತಿಕೆಗೆ ಜೋತು ಬಿದ್ದಿರುವುದರಿಂದ ಬಡವರ ಮತ್ತು ನೊಂದವರ ಬಗ್ಗೆ ಕಾಳಜಿ ಇಲ್ಲವಾಗಿದೆ, ಅದಕ್ಕಾಗಿ ಮೌಲ್ಯ ಆಧಾರಿತ ಸರಕಾರ ತರುವ ಜವಾಬ್ದಾರಿ ಮತದಾರರ ಮೇಲಿದೆ. ಸುಂದರ ಸಮಾಜವನ್ನು ಕಟ್ಟಿ ಭ್ರಷ್ಟಾಚಾರ ನಿರ್ಮೂಲನ ವ್ಯವಸ್ಥೆ ಬರುವಂತಾಗಬೇಕು. ಮೌಲ್ಯಾಧಾರಿತ ಸಮಾಜವನ್ನು ಯುವ ಪೀಳಿಗೆ ಮುಂದಿನ ದಿನಗಳಲ್ಲಿ ಕಟ್ಟುತ್ತಾರೆಂಬ ವಿಶ್ವಾಸ ನನಗಿದೆ ಎಂದರು.
ಮನುಷ್ಯ ಕಾನೂನು ಚೌಕಟ್ಟಿನಲ್ಲಿ ಸಂಪಾದಿಸಿದಾಗ ಮಾತ್ರ ಶ್ರೀಮಂತನಾಗಿದ್ದಕ್ಕೆ ತೃಪ್ತಿ ಇರುತ್ತದೆ. ಮತ್ತೊಬ್ಬರನ್ನು ವಂಚಿಸಿ ಕಾನೂನು ಬಾಹಿರವಾಗಿ ಸಂಪಾದಿಸಿದರೆ ತೃಪ್ತಿ ಇರುವುದಿಲ್ಲ. ಕಾನೂನು ಬಾಹಿರ ಚಟುವಟಿಕೆ ಮಾಡುವ ಸಮಾಜ ಘಾತುಕ ಶಕ್ತಿಗಳನ್ನು ಜನಸಾಮಾನ್ಯರು ಖಂಡಿಸಿ ಕಾನೂನು ಚೌಕಟ್ಟಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಇಂತಹ ಮನೋಭಾವನೆಯನ್ನು ಮತದಾರರು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು..
ರಾಜ್ಯದಲ್ಲಿ ಕೇವಲ 3 ರಿಂದ 4 ಸಾವಿರ ಸರಕಾರಿ ಅಧಿಕಾರಿಗಳಿದ್ದಾರೆ ಇವರಲ್ಲಿ 1500 ಭ್ರಷ್ಟ ಅಧಿಕಾರಿಗಳ ಬಗ್ಗೆ ದೂರುಗಳಿವೆ ಎಂದು ಲೋಕಾಯುಕ್ತರು ಆರೋಪಿದರು,ಮೌಖಿಕವಾದ ದೂರುಗಳ ಬಗ್ಗೆ ತನಿಖೆ ನಡೆಸಲು ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ತೊಡಕು ಉಂಟಾಗಿದೆ ಎಂದರು.
ರಾಜ್ಯ ಸರಕಾರವು ವಿಧ್ಯಾರ್ಥಿಗಳ ಅಭಿವೃದ್ದಿಗಾಗಿ ಸಾಕಷ್ಟು ಹಣ ವ್ಯಯಿಸುತ್ತಿದೆ ಇದರ ಸದುಪಯೋಗ ಪಡೆದು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಹೊರದೇಶಗಳಿಗೆ ಮಾರಿಕೊಳ್ಳುತ್ತಾರೆ ಇಂಥಹ ಪ್ರವೃತ್ತಿ ತಪ್ಪಬೇಕು ಎಂದು ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.