ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಹಾಪ್‌ಕಾಮ್ಸ್‌ಗಳ ಗಣಕೀಕರಣಕ್ಕೆ ಆದ್ಯತೆ : ರವೀಂದ್ರನಾಥ್ (Hapcalms | Computerise | Government)
Bookmark and Share Feedback Print
 
ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಎಲ್ಲ ಹಾಪ್‌ಕಾಮ್ಸ್‌ಗಳನ್ನೂ ಗಣಕೀಕರಗೊಳಿಸಲಾಗುವುದು ಎಂದು ತೋಟಗಾರಿಕೆ ಮತ್ತು ಸಕ್ಕರೆ ಖಾತೆ ಸಚಿವ ಎಸ್.ಎ. ರವೀಂದ್ರನಾಥ್ ತಿಳಿಸಿದರು.

ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘವು ಆರ್.ಕೆ.ವಿ.ವೈ ಯೋಜನೆಯಡಿ ಮಲ್ಲೇಶ್ವರದಲ್ಲಿ ಆರಂಭಗೊಂಡ ನೂತನ ಹಾಪ್‌ಕಾಮ್ಸ್‌ ಮಳಿಗೆ ಉದ್ಘಾಟಿಸಿ ಮಾತನಾಡಿದರು. ಈ ಎರಡು ಜಿಲ್ಲೆಗಳಲ್ಲಿ ಒಟ್ಟು 260 ಮಳಿಗೆಗಳಿದ್ದು, ಅವುಗಳಲ್ಲಿ 100 ಮಳಿಗೆಯನ್ನು ಅಂತರ್ಜಾಲ ಸಹಿತ ವಿದ್ಯುನ್ಮಾನ ತೂಕದ ಯಂತ್ರ ಅಳವಡಿಸಲಾಗಿದೆ. ಉಳಿದ 160 ಹಾಪ್‌ಕಾಮ್ಸ್‌ ಮಳಿಗೆಗಳಿಗೂ ಈ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.

ಈ ವ್ಯವಸ್ಥೆಯಿಂದ ರೈತರು ಮತ್ತು ಗ್ರಾಹಕರು ಇಬ್ಬರಿಗೂ ಅನುಕೂಲವಾಗಲಿದೆ. ವ್ಯಾಪಾರಿಗಳು ಗ್ರಾಹಕರಿಂದ ಹೆಚ್ಚಿನ ಬೆಲೆ ಪಡೆಯಲು ಅವಕಾಶವಿರುವುದಿಲ್ಲ. ಗ್ರಾಹಕರಿಗೆ ಯಾವುದೇ ರೀತಿಯ ಮೋಸವಾಗದು. ಉತ್ತಮ ಬೆಲೆಗೆ ಗುಣಮಟ್ಟದ ತರಕಾರಿ ಹಾಗೂ ಹಣ್ಣುಗಳನ್ನು ಜನರಿಗೆ ವಿತರಿಸಲಾಗುವುದು ಎಂದು ನುಡಿದರು.
ಸಂಬಂಧಿತ ಮಾಹಿತಿ ಹುಡುಕಿ