ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮೀನುಗಾರರಿಗಾಗಿ ಮತ್ಸಾ-ಆಶ್ರಯ ಯೋಜನೆ: ಆಚಾರ್ಯ (Matsa-ashraya yojane | Government | Acharya)
Bookmark and Share Feedback Print
 
NRB
ಮೀನುಗಾರರು ಮನೆ ಕಟ್ಟಿಕೊಳ್ಳಲು ಮತ್ಸಾ-ಆಶ್ರಯ ಯೋಜನೆಯಡಿ ಸರಕಾರದಿಂದ ನೀಡುತ್ತಿದ್ದ 40 ಸಾವಿರ ರೂ. ನೆರವನ್ನು 60 ಸಾವಿರ ರೂ.ಗೆ ಹೆಚ್ಚಿಸಲಾಗುವುದು ಎಂದು ಸಚಿವ ಡಾ.ವಿ.ಎಸ್. ಆಚಾರ್ಯ ಹೇಳಿದರು.

ಕರ್ನಾಟಕ ಮೀನುಗಾರಿಕಾ ಅಭಿವೃದ್ದಿ ನಿಗಮ ರಾಷ್ಟ್ತ್ರೀಯ ಕೃಷಿ ವಿಕಾಸ ಯೋಜನೆ ಹಾಗೂ ರಾಜ್ಯ ಸರಕಾರದ ನೆರವಿನಿಂದ ಕೆ.ಆರ್. ವೃತ್ತದ ಬಳಿ ನವೀಕರಿಸಿದ `ಮತ್ಸ-್ಯದರ್ಶಿನಿ-ಕಬ್ಬನ್ಪಾರ್ಕ್'ನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಲಕ್ಷಾಂತರ ಜನ ಮೀನುಗಾರಿಕೆ ಅವಲಂಬಿಸಿದ್ದು, ಸರಕಾರ ಅವರಿಗೆ ಸಾಕಷ್ಟು ನೆರವು ನೀಡುತ್ತಿದೆ. ಮನೆ ಕಟ್ಟಿಕೊಳ್ಳಲು ಸರಕಾರದಿಂದ ಇಲ್ಲಿವರೆಗೆ 40 ಸಾವಿರ ರೂ. ನೆರವು ನೀಡಲಾಗುತ್ತಿತ್ತು. ಮುಂದಿನ ವರ್ಷದಿಂದಲೇ ಅದನ್ನು 60 ಸಾವಿರ ರೂ.ಗೆ ಹೆಚ್ಚಿಸಲಾಗುವುದು ಎಂದರು.

ರಾಜ್ಯದಲ್ಲಿ ಮೀನುಗಾರಿಕೆಗೆ ಸಾಕಷ್ಟು ಅವಕಾಶಗಳಿವೆ. 320 ಕಿ.ಮೀ. ಕರಾವಳಿ ಪ್ರದೇಶ, ಪಶ್ಚಿಮಾಭಿಮುಖವಾಗಿ ಹರಿಯುವ ನದಿ. ಅಲ್ಲದೆ, ಕೃಷ್ಣಾ ಕಾವೇರಿಯಂತ ದೊಡ್ಡ ನದಿಗಳಿವೆ. ಕೊಟ್ಯಂತರ ಜನರ ಪ್ರಮುಖ ಆಹಾರವಾಗಿದೆ. ಬೋಟ್ಗಳಿಗೆ 50 ಸಾವಿರ ಕಿಲೋ ಲೀಟರ್ ಡೀಸೆಲ್‌ಗೆ ನೀಡುತ್ತಿದ್ದ ತೆರಿಗೆ ವಿನಾಯಿತಿಯನ್ನು 90 ಸಾವಿರ.ಕಿ.ಲೀ.ಗೆ ಹೆಚ್ಚಿಸಲಾಗಿದೆ. ಮೀನುಗಾರಿಕಾ ಮಹಿಳೆಯರಿಗೆ ಶೇ.3ರ ಬಿಡ್ಡಿ ದರದಲ್ಲಿ 10 ಸಾವಿರ ರೂ. ಸಾಲ ನೀಡಲಾಗುತ್ತದೆ ಎಂದು ವಿವರಿಸಿದರು.

ಅಲಂಕಾರಿಕ ಮೀನುಗಳನ್ನು ಮನೆಯಲ್ಲಿಡುವುದು ಇಂದು ಹವ್ಯಾಸವಾಗಿದೆ. ಪ್ರತಿನಿತ್ಯ 10 ನಿಮಿಷ ಅಕ್ವೇರಿಯಂ ನೋಡುವುದರಿಂದ ಅಧಿಕ ರಕ್ತದೊತ್ತಡ, ಮಾನಸಿಕ ದುಗುಡ ಕಡಿಮೆಯಾಗುತ್ತದೆ ಎಂದು ವೈದ್ಯಕೀಯ ಲೋಕದಲ್ಲಿ ಸಾಬೀತಾಗಿದೆ. ಅಲಂಕಾರಿಕ ಮೀನುಗಳು ಜಾಗತಿಕವಾಗಿ 5500 ಕೋಟಿ ರೂ. ವ್ಯವಹಾರ ಹೊಂದಿವೆ. ಆಸಕ್ತರಿಗೆ ಸೂಕ್ತ ಪ್ರೋತ್ಸಾಹ ನೀಡಿದರೆ ರಾಜ್ಯದಲ್ಲಿ ದೊಡ್ಡ ಉದ್ಯಮವಾಗಿ ಬೆಳೆಯುತ್ತದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ