ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ಸರಿಯಲ್ಲ: ನಾಯಕ್ (Bellary | Aerodrum | Nayak)
Bookmark and Share Feedback Print
 
ಬಳ್ಳಾರಿಯಲ್ಲಿ ಸಾವಿರಾರು ಎಕರೆ ಫಲವತ್ತಾದ ಕೃಷಿ ಭೂಮಿ ವಶಪಡಿಸಿಕೊಂಡು ಕೆಲವರು ಮಾತ್ರ ಓಡಾಡಲು ವಿಮಾನ ನಿಲ್ದಾಣ ನಿರ್ಮಿಸಲು ಮುಂದಾಗಿರುವುದು ಖಂಡನೀಯ ಎಂದು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾ.ಎಸ್.ಆರ್. ನಾಯಕ್ ಹೇಳಿದರು.

ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಹಮ್ಮಿಕೊಂಡಿದ್ದ ಪ್ರೊ.ಹಿ.ಶಿ. ರಾಮಚಂದ್ರೇಗೌಡರ `ನಮಗೆ ನಾವು'- ಸಮಗ್ರ ವೈಚಾರಿಕ ಲೇಖನಗಳು, `ರೈತ ಹೋರಾಟ ಸಾಹಿತ್ಯ' ಮತ್ತು `ರೈತ ಚಳವಳಿ ಸುಮ್ಮನೆ' ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಫಲವತ್ತಾದ ಕೃಷಿ ಭೂಮಿ ಕಿತ್ತುಕೊಳ್ಳುವುದು ಸರಿಯಲ್ಲ. ಜಿಂದಾಲ್ ಕಾರ್ಖಾನೆಯಲ್ಲಿ ಆಥವಾ ಬಳ್ಳಾರಿ ನಗರದ ಒಂದು ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲಿ. ಈ ಬಗ್ಗೆ ಕೇಳಿದರೆ ರೈತರಿಗೆ ಹಣ ಕೊಡುತ್ತೇವೆ ಎನ್ನುತ್ತಾರೆ. ಭೂತಾಯಿ ಗರ್ಭವನ್ನೇ ಕೊರೆದು ಕಳ್ಳದುಡ್ಡು ಮಾಡುತ್ತಿದ್ದಾರೆ. ಆ ಹಣ ರೈತರಿಗೆ ಕೊಟ್ಟು ಭೂಮಿ ಖರೀದಿಸುತ್ತಾರೆ ಎಂದರು.

ಕೇವಲ ಚಳವಳಿ, ಸಭೆ, ಘೋಷಣೆಗಳಿಂದ ರೈತರ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುತ್ತೇವೆ ಎಂಬ ಭರವಸೆ ಕಳೆದುಕೊಂಡಿದ್ದೇವೆ. 1970-80ರ ದಶಕದಲ್ಲಿ ರೈತರ ಯಾವ ಸಮಸ್ಯೆಗಳಿದ್ದವೋ ಈಗಲೇ ಅವೇ ಸಮಸ್ಯೆಗಳಿವೆ. ಕೆ.ಸಿ. ರೆಡ್ಡಿಯಿಂದ ಹಿಡಿದು ಎಲ್ಲರೂ ಮಣ್ಣಿನ ಮಕ್ಕಳೇ ಮುಖ್ಯಮಂತ್ರಿಗಳಾದರೂ ಪರಿಹಾರ ಸಿಗಲಿಲ್ಲ. ಅಧಿಕಾರದ ಚುಕ್ಕಾಣಿಯಲ್ಲಿರುವವರು ಸಮಸ್ಯೆಗಳಿಗೆ ಸ್ಪಂದಿಸಬೇಕು. ಅವನೇ ಕ್ರೂರಿಯಾದರೆ ಎಷ್ಟೇ ಹೋರಾಟ ಮಾಡಿದರೂ ಪರಿಹಾರ ಸಾಧ್ಯವಿಲ್ಲ ಎಂದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬಳ್ಳಾರಿ, ವಿಮಾನ ನಿಲ್ದಾಣ, ನಾಯಕ್