ದೇಶದಲ್ಲಿ ಭ್ರಷ್ಟಾಚಾರ ಮುಕ್ತ ಇಲಾಖೆಯೇ ಇಲ್ಲ' ಎಂದು ಲೋಕಾಯುಕ್ತ ನ್ಯಾ.ಎನ್. ಸಂತೋಷ ಹೆಗ್ಡೆ ಅಭಿಪ್ರಾಯ ಪಟ್ಟರು. ಆದಿಚುಂಚನಗಿರಿ ಟ್ರಸ್ಟ್ ಮಠದ ಹಾಸ್ಟೆಲ್ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ `ಭ್ರಷ್ಟಾಚಾರ ನಿರ್ಮೂಲನೆ' ಕುರಿತ ವಿಶೇಷ ಉಪನ್ಯಾಸದಲ್ಲಿ ಪ್ರಶ್ನೆಗಳಿಗೆ ಉತ್ತರಿಸುತ್ತಾ ಈ ಮಾತು ಹೇಳಿದರು. ಸಾವಿಲ್ಲದ ಮನೆಯಲ್ಲಿ ಹೇಗೆ ಸಾಸಿವೆ ತರಲು ಸಾಧ್ಯವಿಲ್ಲವೋ ಹಾಗೆಯೇ ಸಮಾಜದಲ್ಲಿ ಭ್ರಷ್ಟಾಚಾರ ಇಲ್ಲದ ಇಲಾಖೆ ಹುಡುಕುವುದು ಅಷ್ಟೇ ಸತ್ಯ ಎಂದು ಮಾರ್ಮಿಕವಾಗಿ ನುಡಿದರು.
ನಾನಂತೂ ಇಂತಹದೊಂದು ಇಲಾಖೆ ಇದೆ ಎಂಬುದನ್ನು ಕೇಳಿಲ್ಲ. ಒಂದು ವೇಳೆ ಯಾರಾದರೂ ನೋಡಿದ್ದರೆ ಅಥವಾ ಕೇಳಿದ್ದರೆ ತಮಗೆ ಹೇಳಿದರೆ ಆ ಇಲಾಖೆಗೆ ಭೇಟಿ ನೀಡಿ, ಅವರಿಗೆ ತಲೆಭಾಗಿ ನಮುಸ್ಕರಿಸುತ್ತೇನೆ. ವಿದ್ಯಾವಂತರೇ ಹೆಚ್ಚು ಭ್ರಷ್ಟರಾಗುತ್ತಿದ್ದಾರೆ. ಶಿಕ್ಷಣ, ಆರೋಗ್ಯ ಮುಂತಾದ ಪ್ರಮುಖ ಇಲಾಖೆಗಳು ಭ್ರಷ್ಟಗೊಂಡಿವೆ. ಹೀಗಾಗಿ ಸಮಾಜದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಅಸಾಧ್ಯ. ಆದರೆ ನಿಯಂತ್ರಿಸಬಹುದು ಎಂದು ಅಭಿಪ್ರಾಯಪಟ್ಟರು.
ಲೋಕಾಯುಕ್ತ ಸಂಸ್ಥೆ ಶೇ.10ರಷ್ಟು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತದೆ. ಶೇ.90ರಷ್ಟು ಬಡಜನರ ಸೇವೆ ಮಾಡಲು ಮುಂದಾಗುತ್ತದೆ. ಜನರು ಶೇ.90ರಷ್ಟು ಭ್ರಷ್ಟಾಚಾರ ನಿಯಂತ್ರಿಸಲು ಹೋರಾಡಬೇಕು. ಮನುಷ್ಯ ಲಂಚ ನೀಡುವುದು ಮತ್ತು ಸ್ವೀಕರಿಸುವುದನ್ನು ಬಿಟ್ಟಾಗ ಮಾತ್ರ ಈ ಪಿಡುಗಿಗೆ ಇತಿಶ್ರೀ ನೀಡಲು ಸಾಧ್ಯ. ಭ್ರಷ್ಟಾಚಾರ ತಡೆಗಟ್ಟಿದಾಗ ಮಾತ್ರ ಸಮಾಜ ಸುಧಾರಣೆಯಾಗಲು ಸಾಧ್ಯ ಎಂದು ಸಲಹೆ ನೀಡಿದರು.