ರಾಜ್ಯದ ಆರು ಕೋಟಿ ಜನತೆ ನನ್ನನ್ನು ಆಯ್ಕೆ ಮಾಡಿದ್ದಾರೆ,ನಾನು ಅಧಿಕಾರಕ್ಕಾಗಿ ಯಾವತ್ತು ಹಂಬಲಿಸಿಲ್ಲ.ಶಾಸಕರು ಮಂತ್ರಿ ಸ್ಥಾನಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಲು ಯತ್ನಿಸಿದಲ್ಲಿ, ಅಂತಹ ಕೃತ್ಯಗಳನ್ನು ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಎಚ್ಚರಿಸಿದ್ದಾರೆ.
ಹಲವಾರು ಸಂಕಟಗಳನ್ನು ಎದುರಿಸಿ ಬಂದಿರುವ ತಮಗೆ ಅಧಿಕಾರದ ಮೇಲೆ ಆಸೆಯಿಲ್ಲ.ಅಂತಹ ಸಂದರ್ಭ ಬಂದಲ್ಲಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.
ರಾಜ್ಯದ ಜನತೆಯ ಹಿತ ಮುಖ್ಯವಾಗಿದ್ದರಿಂದ ಜನತೆಯ ಏಳಿಗೆಗಾಗಿ ನನ್ನ ಅಧಿಕಾರವಧಿಯಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ಮುಂದಿನ ಎರಡುವರೆ ವರ್ಷಗಳ ಅವಧಿಯಲ್ಲಿ ಮತ್ತಷ್ಟು ಜನಪ್ರಿಯ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳುತ್ತೇನೆ ಎಂದು ನುಡಿದರು.
ಅಧಿಕಾರಕ್ಕಾಗಿ ನಾನು ಎಂದೂ ಆಸೆಪಟ್ಟವನಲ್ಲ ಜನ ನನ್ನನ್ನು ಆರು ವರ್ಷಗಳ ಅವಧಿಗೆ ಆರಿಸಿ ಕಳುಹಿಸಿದ್ದಾರೆ. ವಿರೋಧ ಪಕ್ಷಗಳು ಕೇವಲ ಅಧಿಕಾರದ ದುರಾಸೆಗಾಗಿ, ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಸಮಧಾನ ವ್ಯಕ್ತಪಡಿಸಿದ್ದಾರೆ.