ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಜೆಡಿಎಸ್ ಪಾಳೇಗಾರಿಕೆಗೆ ಹೆದರಲ್ಲ: ಯಡಿಯೂರಪ್ಪ (JDS | Deve gowda | BJP | Congress | Yeddyurappa)
Bookmark and Share Feedback Print
 
ಸರಕಾರಿ ಕಾರ್ಯಕ್ರಮಗಳನ್ನು ದಬ್ಬಾಳಿಕೆಯಿಂದ ನಿಲ್ಲಿಸುವ ವಿರೋಧ ಪಕ್ಷಗಳ ಪಾಳೆಗಾರಿಕೆತನಕ್ಕೆ ಬೆದರಿ ಕಾರ್ಯಕ್ರಮಗಳನ್ನು ಮೊಟಕುಗೊಳಿಸುವುದಿಲ್ಲ. ಮಂಡ್ಯ, ಸೇರಿದಂತೆ ರಾಮನಗರ, ಹಾಸನ ಜಿಲ್ಲೆಗಳಲ್ಲಿ ಫಲಾನುಭವಿಗಳಿಗೆ ಸೀರೆ ಹಂಚುವ ಮತ್ತು ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಮುಂದುವರಿಸುವುದಾಗಿ ಹೇಳಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಪಕ್ಷಗಳಿಗೆ ಸವಾಲು ಹಾಕಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಪಕ್ಷಗಳ ನಿರಂತರ ಕಿರುಕುಳದಿಂದಾಗಿ ಅಭಿವೃದ್ಧಿ ಕುಂಠಿತವಾಗಿದೆ. ಈ ಎಲ್ಲಾ ಅಡ್ಡಿ ಆತಂಕಗಳ ಮಧ್ಯಯೂ ರಾಜ್ಯ ಆರ್ಥಿಕ ಅಭಿವೃದ್ಧಿಯಲ್ಲಿ ದೇಶದಲ್ಲಿಯೇ 2ನೇ ಸ್ಥಾನದಲ್ಲಿರುವುದು ವಿರೋಧ ಪಕ್ಷಗಳು ಗಮನಿಸಬೇಕು. ನನಗೆ ಮುಕ್ತವಾಗಿ ಆಡಳಿತ ನಡೆಸಲು ಅವಕಾಶ ನೀಡಿದ್ದರೆ ರಾಜ್ಯ ಅಭಿವೃದ್ಧಿಯಲ್ಲಿ ನಂ.1 ಸ್ಥಾನದಲ್ಲಿರುತ್ತಿತ್ತು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ನೆರೆ ಸಂತ್ರಸ್ತರು ಕಳೆದ ವರ್ಷದ ದೀಪಾವಳಿಗೆ ಕಣ್ಣಿರಿಟ್ಟರೆ, ಈ ವರ್ಷ ಉಸಿರೇ ಬಿಟ್ಟಿದ್ದಾರೆ ಎಂದು ಟೀಕಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸೀರೆ ವಿತರಣೆಯಲ್ಲಿ ಪ್ರತಿ ಸೀರೆಗೂ ಬಿಜೆಪಿ 100 ರೂ.ಕಮಿಷನ್ ಪಡೆದಿದೆ ಎಂದು ಆರೋಪ ಮಾಡಿದ್ದಾರೆ. ಇವರ ಹಗುರವಾದ ಟೀಕೆಗಳಿಗೆ ಇನ್ನು ಮುಂದೆ ನಾನು ಯಾವುದೇ ರೀತಿಯಲ್ಲಿ ಕಟುವಾಗಿ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳುತ್ತಲೇ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿ,ನಾಳೆ ಮಂಡ್ಯ ಜಿಲ್ಲೆಯಲ್ಲಿ ನಡೆಯುವ ಭಾಗ್ಯಲಕ್ಷ್ಮಿ ಯೋಜನೆ ಸೀರೆ ವಿತರಣೆ ಕಾರ್ಯಕ್ರಮ ತಡೆಯುವ ಜಾತ್ಯತೀತ ಜನತಾದಳದ ಕ್ರಮ ಪಾಳೆಯಗಾರಿಕೆ ವರ್ತನೆಯಾಗಿದೆ. ಇದಕ್ಕೆ ನಾನು ಹೆದರುವ ಪ್ರಶ್ನೆಯೇ ಇಲ್ಲ ಎಂದು ತಿರುಗೇಟು ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ