ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ವಿಪಕ್ಷದಿಂದ ಸಿಎಂ ಸಾವಿಗಾಗಿ ಕತ್ತೆ ಬಲಿಕೊಟ್ಟು ಮಾಟ?! (BJP | Yeddyurappa | Congress | JDS | Kumaraswamy | Donkey)
Bookmark and Share Feedback Print
 
'ತಮಗೆ ಇನ್ನು ಮುಂದೆ ಅಧಿಕಾರ ಸಿಗುವುದಿಲ್ಲ, ಹಾಗಾಗಿ ಈ ಯಡಿಯೂರಪ್ಪ ಸಾಯಲೇಬೇಕು ಎಂದು ವಿಪಕ್ಷಗಳು ಕತ್ತೆಯಂಥ ಪ್ರಾಣಿಗಳನ್ನು ಬಲಿಕೊಟ್ಟು ನನ್ನ ವಿರುದ್ಧ ಮಾಟ-ಮಂತ್ರ ಮಾಡಿಸುತ್ತಿದ್ದಾರೆ' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗಂಭೀರವಾಗಿ ಆರೋಪಿಸಿದರು.

ಇಲ್ಲಿ ಭಾಗ್ಯಲಕ್ಷ್ಮಿ ಫಲಾನುಭವಿಗಳ ಆರೋಗ್ಯ ತಪಾಸಣೆ ಮತ್ತು ಮಹಿಳೆಯರಿಗೆ ಸೀರೆ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಅಮೂಲ್ಯ ಸಂಪತ್ತಾಗಿರುವ ಖನಿಜ ಸಂಪತ್ತನ್ನು ಲೂಟಿ ಮಾಡುವುದಕ್ಕೆ ತಡೆಯೊಡ್ಡಿರುವುದಕ್ಕೆ ವಿರೋಧಿಗಳು ನನ್ನ ವಿರುದ್ಧ ಕತ್ತಿ ಮಸೆಯುತ್ತಲೇ ಇದ್ದಾರೆ. ಹಾಗಾಗಿ ಸಿಎಂ ಕುರ್ಚಿ ಉರುಳಿಸುವ ಸಂಚು ನಡೆಸುತ್ತಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡರು.

ಅಧಿಕಾರದ ದಾಹದಿಂದ ಏನೆಲ್ಲ ತಂತ್ರ ಮಾಡಲು ಸಾಧ್ಯವೋ ಅವೆಲ್ಲವನ್ನೂ ಮಾಡುತ್ತಿದ್ದಾರೆ. ಹಾಗಾಗಿಯೇ ನನ್ನ ವಿರುದ್ಧ ಮಾಟ-ಮಂತ್ರದ ಪ್ರಯೋಗವೂ ನಡೆಯುತ್ತಿದೆ ಎಂದು ದೂರಿದರು.

ಪ್ರತಿಯೊಂದು ವಿಷಯಕ್ಕೂ ಅಡ್ಡಗಾಲು ಹಾಕುತ್ತಿರುವುದರಿಂದ ರಾಜ್ಯದ ಅಭಿವೃದ್ಧಿಗೆ ತೊಡಕಾಗುತ್ತಿದೆ. ಅಷ್ಟೇ ಅಲ್ಲದೇ ನನ್ನ ಮೇಲೆ ಆರೋಪ ಹೊರಿಸಿ ನನ್ನನ್ನು ಖಳನಾಯಕನನ್ನಾಗಿ ಬಿಂಬಿಸುತ್ತಿದ್ದಾರೆ. ನಾನು ದೇವರನ್ನು ನಂಬಿದ್ದೇನೆ. ನನ್ನ ಪಾಲಿನ ದೇವರು ನೀವು. ತಪ್ಪು ಮಾಡಿದ್ದರೆ ದೇವರು ಶಿಕ್ಷೆ ಕೊಡಲಿ ಎಂದು ಗದ್ಗದಿತರಾಗಿ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ