ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಪ್ರತಿಪಕ್ಷಗಳು ಹಗಲು ಕನಸು ಕಾಣುತ್ತಿವೆ: ಯಡಿಯೂರಪ್ಪ ವ್ಯಂಗ್ಯ (BJP | Yeddyurappa | Belagavi | Congress | JDS | Shettar)
Bookmark and Share Feedback Print
 
ನಾಯಕರು ಯಾರೇ ಆಗಿರಲಿ ರಾಜ್ಯದಲ್ಲಿ ಬಿಜೆಪಿ ಸರಕಾರವೇ ಇರುತ್ತದೆ. ಪ್ರತಿಪಕ್ಷಗಳು ಹಗಲು ಕನಸು ಕಾಣುತ್ತಿವೆ. ಅದು ಈಡೇರಲು ಸಾಧ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.

ಬೆಳಗಾವಿಯಲ್ಲಿ ಆಯೋಜಿಸಿದ್ದ ಭಾಗ್ಯಲಕ್ಷ್ಮಿ ಫಲಾನುಭವಿಗಳಿಗೆ ಆರೋಗ್ಯ ತಪಾಸಣೆ ಹಾಗೂ ತಾಯಂದಿರಿಗೆ ಸೀರೆ ವಿತರಣೆ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ನಾಯಕತ್ವ ಬದಲಾವಣೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ, ಈಶ್ವರಪ್ಪ, ಜಗದೀಶ್ ಶೆಟ್ಟರ್ ಏನೂ ವ್ಯತ್ಯಾಸವಿಲ್ಲ. ಪಕ್ಷದ ದೃಷ್ಟಿಯಲ್ಲಿ ಎಲ್ಲರೂ ಒಂದೇ ಎಂದರು.

ರಾಜ್ಯದಲ್ಲಿ ಬಿಜೆಪಿ ಸರಕಾರವಿರಬೇಕು. ಬಿಜೆಪಿಯ ಮುಖ್ಯಮಂತ್ರಿ ಮುಂದಿನ ಎರಡೂವರೆ ವರ್ಷದ ಅಧಿಕಾರಾವಧಿಯನ್ನು ಪೂರ್ಣಗೊಳಿಸಬೇಕು. ನಾವು ಒಳ್ಳೆಯ ಆಡಳಿತ ನೀಡಿ ಮುಂದಿನ ಹತ್ತು ವರ್ಷಗಳಿಗೆ ಜೆಡಿಎಸ್, ಕಾಂಗ್ರೆಸ್ ಪ್ರತಿಪಕ್ಷದಲ್ಲಿ ಇರುವಂತೆ ಮಾಡಬೇಕೆಂಬ ಅಪೇಕ್ಷೆ ನಮ್ಮದು ಎಂದರು.

ಪಕ್ಷದೊಳಗೆ ಬಂಡಾಯ ಇದೆ ಎಂಬುದನ್ನು ಸಾರಾಸಗಟಾಗಿ ತಳ್ಳಿಹಾಕಿದ ಅವರು, ಸಣ್ಣ ಪುಟ್ಟ ವ್ಯತ್ಯಾಸಗಳು ಸಹಜ. ಆದರೆ ಬಂಡಾಯ ಮಾಡಿದವರನ್ನು ಈಗ ಪಕ್ಷದಿಂದಲೇ ತೆಗೆದು ಹಾಕಲಾಗಿದೆ. ಮತ್ತೆಂದೂ ಅಂಥ ಘಟನೆ ಮರುಕಳಿಸದು. ಎಲ್ಲರೂ ಒಟ್ಟಾಗಿದ್ದೇವೆ. ರಾಜ್ಯಕ್ಕೆ ಸುಭದ್ರ ಸರಕಾರ ನೀಡಲಾಗುತ್ತದೆ. ಮುಂದಿನ ಎರಡೂವರೆ ವರ್ಷ ಜನ ನೆನಪಿಡುವಂತಹ ಆಡಳಿತ ನೀಡುವುದಾಗಿ ಭರವಸೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ