ವಿರೋಧ ಪಕ್ಷಗಳ ಗೊಡ್ಡು ಬೆದರಿಕೆಗಳಿಗೆ ಮಣಿಯುವುದಿಲ್ಲ:ಸಿಎಂ
ಬೆಂಗಳೂರು, ಬುಧವಾರ, 10 ನವೆಂಬರ್ 2010( 08:57 IST )
NRB
ರಾಜ್ಯವನ್ನು ಅಭಿವೃದ್ಧಿಪಡಿಸಲು ಹಗಲಿರಳು ಶ್ರಮಿಸುತ್ತಾ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೇನೆ. ಆದರೆ ವಿರೋಧ ಪಕ್ಷಗಳು ಪ್ರತಿಯೊಂದು ಹಂತದಲ್ಲಿ ಕಂಟಕವಾಗಿ ಪರಿಣಮಿಸಿವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ವಿರೋಧ ಪಕ್ಷಗಳ ಇಂತಹ ಗೊಡ್ಡು ಬೆದರಿಕೆಗಳಿಗೆ, ಕಾಲೆಳೆಯುವ ತಂತ್ರಗಳಿಗೆ ತಾವು ಮಣಿಯುವುದಿಲ್ಲ.ಇಂತಹ ಅಭಿವೃದ್ಧಿ ವಿರೋಧಿಗಳಿಗೆ ಕರುಣೆ ತೋರುವ ಅಗತ್ಯವಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರದಿಂದ ದೂರವಾಗಿರುವ ವಿರೋಧ ಪಕ್ಷಗಳಿಗೆ, ವಾಮಮಾರ್ಗದಲ್ಲಿಯಾದರೂ ಅಧಿಕಾರ ಹಿಡಿಯುವ ಉದ್ದೇಶದಿಂದ ಮನಬಂದಂತೆ ವರ್ತಿಸುತ್ತಿವೆ.ಆದರೆ, ರಾಜ್ಯದ ಜನತೆ ಸತ್ಯ ಸಂಗತಿಯನ್ನು ಅರಿತಿದ್ದಾರೆ ಎಂದು ನುಡಿದರು.
ಕಾಂಗ್ರೆಸ್ ಮತ್ತು ಜೆಡಿ(ಎಸ್) ಪಕ್ಷಗಳ ಅಪವಿತ್ರ ಮೈತ್ರಿಯಿಂದಾಗಿ, ಜಂಟಿಯಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿವೆ.ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗುತ್ತಿವೆ. ಇಂತಹ ಪಕ್ಷಗಳ ಗೊಡ್ಡು ಬೆದರಿಕೆಗಳಿಗೆ ತಾವು ಸೊಪ್ಪುಹಾಕುವುದಿಲ್ಲ ಎಂದು ಎಚ್ಚರಿಸಿದರು.
ಸರಕಾರವನ್ನು ಟೀಕಿಸುವ ಬದಲು ರಾಜ್ಯದ ಹಿತದೃಷ್ಟಿಯಿಂದ ಅಭಿವೃದ್ಧಿಯಲ್ಲಿ ಕೈ ಜೋಡಿಸುವಂತೆ ವಿರೋಧ ಪಕ್ಷಗಳಿಗೆ ಮನವಿ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಇಲ್ಲವಾದಲ್ಲಿ ಮುಂಬರುವ ಚುನಾವಣೆಗಳಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದ್ದಾರೆ.