ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರಾಜಕಾರಣಿಗಳ ಹಣದ ಆಮಿಷ ತಿರಸ್ಕರಿಸಿ: ಅನಂತಮೂರ್ತಿ (Kannada Sahithya | Ananthmurthy | Politician | Karnataka)
Bookmark and Share Feedback Print
 
PTI
ಮತದಾರರನ್ನು ಸೆಳೆಯಲು ರಾಜಕಾರಣಿಗಳು ಇಂದು ಹಲವು ಆಮಿಷಗಳನ್ನು ಒಡ್ಡುವ ಕೀಳುಮಟ್ಟದ ರಾಜಕೀಯಕ್ಕೆ ಇಳಿದಿದ್ದಾರೆ. ಹಾಗಾಗಿ ಹಳ್ಳಿಗೆ ಬರುವ ರಾಜಕಾರಣಿಗಳು ಹಣ, ಟಿವಿ ಕೊಡಲು ಬಂದರೆ ಅದನ್ನು ತಿರಸ್ಕರಿಸಬೇಕು. ಅದಕ್ಕೆ ಹೊರತಾಗಿ ನಮ್ಮ ಹಳ್ಳಿಗೆ ಮೊದಲು ವಿದ್ಯುತ್ ನೀಡಿ, ನಮ್ಮ ಬೆಳೆಗೆ ಉತ್ತಮ ಬೆಲೆ ನೀಡುವಂತೆ ಅವರನ್ನು ಒತ್ತಾಯಿಸಬೇಕು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್.ಅನಂತಮೂರ್ತಿ ಸಲಹೆ ನೀಡಿದ್ದಾರೆ.

ಬುದ್ದಿವಂತರು, ವಿದ್ಯಾವಂತರು ಎನಿಸಿಕೊಂಡ ಜನರೇ ಇಂದು ಭ್ರಷ್ಟರಾಗುತ್ತಿದ್ದಾರೆ. ಆದರೆ ಹಳ್ಳಿಯ ಜನರು ಭ್ರಷ್ಟರಾಗಬಾರದು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯ ಸಂಗೀತ ಮತ್ತು ನಾಟಕ ವಿಭಾಗ, ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿರುವ ಅಭಿವೃದ್ಧಿ ಸಂವಹನ ಉದ್ಘಾಟಿಸಿ ಅವರು ಮಾತನಾಡಿದರು.

ಹಳ್ಳಿಗಳಲ್ಲಿ ಇಂದಿಗೂ ಮಾನವೀಯ ಮೌಲ್ಯಗಳು, ನಿಸ್ವಾರ್ಥ ಉಳಿದುಕೊಂಡಿದೆ. ಈ ಸಂದರ್ಭದಲ್ಲಿ ಪಟ್ಟಣ ನಿವಾಸಿಗಳಿಂದ ಕಲಿಯಬೇಕಾದುದು ಏನೂ ಇಲ್ಲ. ಅವರಿಗೆ ಹಳ್ಳಿಗರ ಔದಾರ್ಯದ ಬಗ್ಗೆ ತಿಳಿಸಿ ಕೊಡಬೇಕು ಎಂದರು.

ಹಳ್ಳಿಯ ಹೆಣ್ಣು ಮಕ್ಕಳಿಗೆ ಕಾಲೇಜು ಶಿಕ್ಷಣ ಕೊಡಿಸುವುದು ತುಂಬಾ ಮುಖ್ಯ. ಹೆಣ್ಣು ಮಕ್ಕಳು ನರ್ಸ್ ಆಗುವುದರಲ್ಲಿ ಹೆಚ್ಚಿನ ಪ್ರಯೋಜನವಿದೆ. ಸಮಾಜದಲ್ಲಿ ಬದಲಾವಣೆ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸಂಬಂಧಿತ ಮಾಹಿತಿ ಹುಡುಕಿ