ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಶೀಘ್ರವೇ ಕೆಲವು ಅಧಿಕಾರಿಗಳು ಜೈಲಿಗೆ: ರೇವಣ್ಣ ಭವಿಷ್ಯ (Revanna | JDS | BJP | Yeddyurappa | IAS | Shobha karandlaje)
Bookmark and Share Feedback Print
 
ರಾಜ್ಯದ ಕೆಲವು ಹಿರಿಯ ಅಧಿಕಾರಿಗಳು 2011ರ ವೇಳೆಗೆ ಜೈಲಿಗೆ ಹೋಗುವುದು ನಿಶ್ಚಿತ ಎಂದು ಜೆಡಿಎಲ್‌ಪಿ ನಾಯಕ ಎಚ್.ಡಿ.ರೇವಣ್ಣ ಭವಿಷ್ಯ ನುಡಿದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನು ಉಲ್ಲಂಘಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವರ ತಾಳಕ್ಕೆ, ಐಎಎಸ್ ಅಧಿಕಾರಿಗಳು ಕಾರ್ಯದರ್ಶಿಗಳು ಕುಣಿಯುತ್ತಿದ್ದಾರೆ. ಅವರ ಹೆಂಡತಿ, ಮಕ್ಕಳು ನೆಮ್ಮದಿಯಿಂದ ಇರಬೇಕು ಎಂಬ ಇಚ್ಛೆ ಇದ್ದರೆ ಕಾನೂನು ರೀತಿ ನಡೆದುಕೊಳ್ಳಲಿ ಎಂದು ಎಚ್ಚರಿಸಿದ ಅವರು, ಕಾನೂನುಬಾಹಿರ ಕೃತ್ಯಕ್ಕೆ ಕುಮ್ಮಕ್ಕು ನೀಡದೆ ಗೌರವಯುತವಾಗಿ ಕೆಲಸ ಮಾಡಬೇಕು. ಇಲ್ಲದಿದ್ದರೆ ಅಂಥವರನ್ನು ಬಲಿಹಾಕುವುದು ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯುತ್ ನಿಗಮದ ಎಂಜಿನಿಯರ್‌ಗಳು 10-15 ಸಾವಿರಕ್ಕೆ ಟ್ರಾನ್ಸ್‌ಫಾರ್ಮರ್ ಮಾರಿಕೊಳ್ಳುತ್ತಿದ್ದಾರೆ. ಇಂಧನ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಬೇಕಾದರೆ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದರು.

ಮುಖ್ಯಮಂತ್ರಿಗಳು ನಗರಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಗೌರವ ನೀಡಿದ್ದೇವೆ. ಉಸ್ತುವಾರಿ ಸಚಿವ ವಿ.ಸೋಮಣ್ಣ, ಜೆಡಿಎಸ್ ಶಾಸಕರು, ಅಧಿಕಾರಿಗಳ ಮೇಲೆ ಗದಾಪ್ರಹಾರ ಮಾಡಲು ಹೋದರೆ ತಕ್ಕಪಾಠ ಕಲಿಸಬೇಕಾಗುತ್ತದೆ ಎಂದರು.

ಜಿಲ್ಲೆಯ ಜನ ಸೀರೆ ಪ್ಯಾಕೆಟ್, ಅನ್ನದ ಪ್ಯಾಕೆಟ್ ಕೇಳಲು ಸಿಎಂ ಕಾರ್ಯಕ್ರಮಕ್ಕೆ ಬಂದಿರಲಿಲ್ಲ ಎಂದ ಅವರು, ಜಿಲ್ಲೆಯ ಗೌರವ ಕಾಪಾಡಬೇಕು ಎಂಬ ದೃಷ್ಟಿಯಿಂದ ಡಿಸಿ, ಎಸ್ಪಿ ಮಾತಿಗೆ ಬೆಲೆಕೊಟ್ಟು ನಾವು ಸುಮ್ಮನಾಗಿದ್ದೇವೆ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ