ಸೋನಿಯಾ ಗಾಂಧಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಆರೆಸ್ಸೆಸ್‌ನ ಮಾಜಿ ಮುಖ್ಯಸ್ಥ ಸುದರ್ಶನ್ ಅವರಿಗೆ ಮತಿಭ್ರಮಣೆಯಾಗಿದೆ ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಭೈರೇಗೌಡ ಆರೋಪಿಸಿದ್ದಾರೆ.
ಸುದರ್ಶನ್ ಹೇಳಿಕೆ ಖಂಡಿಸಿ ಯುವ ಕಾಂಗ್ರೆಸ್ ನಗರದ ಗಾಂಧಿಚೌಕ್‌ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿ, ಮಹಾತ್ಮ ಗಾಂಧೀಜಿಯನ್ನು ಹತ್ಯೆ ಮಾಡುವ ಮೂಲಕ ರಾಷ್ಟ್ರದಲ್ಲಿ ಭಯೋತ್ಪಾದನೆಯನ್ನು ಹುಟ್ಟುಹಾಕಿದ್ದೇ ಆರೆಸ್ಸೆಸ್. ಹೀಗಿರುವಾಗ, ಅದರ ಮಾಜಿ ಪ್ರಮುಖ ಸುದರ್ಶನ್ ಅವರಿಗೆ ಸೋನಿಯಾ ಗಾಂಧಿ ಬಗ್ಗೆ ಟೀಕಿಸುವ ನೈತಿಕತೆ ಇಲ್ಲ ಎಂದರು.
ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಕಾರ್ಯದರ್ಶಿ ವಿಶ್ವರಂಜನ್ ಮಹಾಂತಿ ಮಾತನಾಡಿ, ಸುದರ್ಶನ್ ಅವರು ಸೋನಿಯಾಗಾಂಧಿ ಬಗ್ಗೆ ಮಾತನಾಡಿರುವುದು ಅವರ ಸಣ್ಣತನವನ್ನು ಎತ್ತಿ ತೋರಿಸುತ್ತದೆ ಎಂದರು.
ಮಹಾರಾಷ್ಟ್ರದ ಮಾಜಿ ಸಿಎಂ ಅಶೋಕ ಚೌವಾಣ್ ಹಾಗೂ ಸುರೇಶ ಕಲ್ಮಾಡಿ ಬಗ್ಗೆ ಆರೋಪ ಬಂದ ತಕ್ಷಣವೇ ಅವರನ್ನು ಕೆಳಗಿಳಿಸಿ ಸೋನಿಯಾಗಾಂಧಿ ನೈತಿಕತೆ ಮೆರದಿದ್ದಾರೆ. ಆದರೆ, ಕರ್ನಾಟಕದಲ್ಲಿ 2000 ಕೋಟಿ ರೂ.ಗಣಿ ಲೂಟಿ ನಡೆದಿದ್ದರೂ ಸಿಎಂ ಹಾಗೂ ಮಂತ್ರಿಗಳನ್ನು ಕೆಳಗಿಸುವ ಕೆಲಸವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ನಿರ್ವಹಿಸಲಿಲ್ಲ ಎಂದು ಟೀಕಿಸಿದರು.