ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಿಎಂ ನನ್ನ ಸಲಹೆ ತಿರಸ್ಕರಿಸಿದ್ದೇ ಬಿಕ್ಕಟ್ಟಿಗೆ ಕಾರಣ: ರೆಡ್ಡಿ (BJP | Yeddurappa | Congress | Janardana Reddy | Shekar | Varthuru)
Bookmark and Share Feedback Print
 
ಸಚಿವ ಸಂಪುಟ ವಿಸ್ತರಣೆ ವೇಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನನ್ನ ಸಲಹೆ ಕಡೆಗಣಿಸಿದ ಕಾರಣ ಸರಕಾರ ಬಿಕ್ಕಟ್ಟು ಎದುರಿಸಬೇಕಾಯಿತು ಎಂದು ಪ್ರವಾಸೋದ್ಯಮ ಸಚಿವ ಜಿ.ಜನಾರ್ದನ ರೆಡ್ಡಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗೂಳಿಹಟ್ಟಿ ಶೇಖರ್ ಮತ್ತು ಶಿವನಗೌಡ ನಾಯಕರನ್ನು ಕೈಬಿಡಬಾರದು ಎಂದು ಸಲಹೆ ನೀಡಿದ್ದೆ. ಆದರೆ, ಮುಖ್ಯಮಂತ್ರಿ ನನ್ನ ಸಲಹೆ ತಿರಸ್ಕರಿಸಿದ್ದರಿಂದ ಸರಕಾರದ ಸ್ಥಿರತೆಗೆ ಧಕ್ಕೆ ಉಂಟಾಗಿತ್ತು ಎಂದರು.

ವಿಶ್ವಾಸಮತ ಸಾಬೀತುಪಡಿಸುವ ಬಿಕ್ಕಟ್ಟಿನ ಸಂದರ್ಭದಲ್ಲಿ ಸರಕಾರಕ್ಕೆ ಬೆಂಬಲ ನೀಡಿದ ರಾಜುಗೌಡ ಮತ್ತು ವರ್ತೂರ್ ಪ್ರಕಾಶ್‌ಗೆ ಸಚಿವ ಸ್ಥಾನ ನೀಡುವಂತೆ ಸಿಎಂಗೆ ಸಲಹೆ ನೀಡಿದ್ದು, ಶೀಘ್ರದಲ್ಲಿ ಸಚಿವ ಸ್ಥಾನ ಪಡೆಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭೂಹಗರಣ ಸುಳಿಯಲ್ಲಿ ಸಿಎಂ ಸಿಲುಕಿರುವ ಹಿನ್ನೆಲೆಯಲ್ಲಿ ನಾಯಕತ್ವ ಬದಲಾಗುವ ಸಾಧ್ಯತೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರೆಡ್ಡಿ, ಹಗರಣದ ಬಗ್ಗೆ ಮುಖ್ಯಮಂತ್ರಿಯೇ ಸ್ಪಷ್ಟನೆ ನೀಡುತ್ತಾರೆ. ನಾಯಕತ್ವ ಬದಲಾವಣೆ ವಿಚಾರ ಕೇಂದ್ರ ಮುಖಂಡರ ಅಂಗಳದಲ್ಲಿದೆ. ಅವರ ತೀರ್ಮಾನಕ್ಕೆ ನಾನು ತಲೆಬಾಗುತ್ತೇನೆ. ಸರಕಾರದ ಭದ್ರತೆಗೆ ನಾನು ಕಂಕಣಬದ್ಧ ಎಂದು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ