ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕನಸಿಗೆ ಆಂತರ್ಯದ ಒಳಗಣ್ಣಿರಬೇಕು: ಕಾಯ್ಕಿಣಿ ನುಡಿ (Jayanth kaikini | Kanasu | Kannada sahithya | Karnataka yuka sangha)
Bookmark and Share Feedback Print
 
PTI
'ಯಾವ ಕನಸು ತನ್ನನ್ನು ಮೀರಿ ಉಳಿದವರ ಏಳ್ಗೆ ಒಳಗೊಂಡಿರುತ್ತದೋ ಆ ಕಸನು ಯಾವತ್ತೂ ಈಡೇರುತ್ತದೆ. ಕನಸು ಕಾಣುವಾತನ ಕನಸಿನಲ್ಲಿ ತಾನು ಮಾತ್ರ ಇದ್ದರೆ ಅಂತಹ ಕನಸು ನನಸಾಗುವುದು ತುಂಬಾ ಕಷ್ಟ' ಇದು ಸಾಹಿತಿ ಜಯಂತ್ ಕಾಯ್ಕಿಣಿ ಅವರ ಕನಸು-ನನಸುಗಳ ಕುರಿತು ವ್ಯಕ್ತಪಡಿಸಿದ ಅಭಿಪ್ರಾಯ ಇದಾಗಿದೆ.

ಸ್ಥಳೀಯ ಕರ್ನಾಟಕ ಯುವಕ ಸಂಘ ಹಮ್ಮಿಕೊಂಡಿದ್ದ ಸಂಗೀತ ಕಾರ್ಯಕ್ರಮದ ಉದ್ಘಾಟನೆಗೆ ನಗರಕ್ಕೆ ಭೇಟಿ ನೀಡಿದ್ದ ಕಾಯ್ಕಿಣಿ, ಪತ್ರಕರ್ತರ ಜತೆ 'ಹಾಗೆ ಸುಮ್ಮನೆ' ಮಾತಿಗಿಳಿದರು.

ಕೆಲವರು ತಮ್ಮಷ್ಟಕ್ಕೆ ತಾವೇ ಕನಸುಗಾರ ಎಂದುಕೊಳ್ಳುತ್ತಾರೆ. ಆ ಕೇಂದ್ರೀಕೃತವಾಗಿ ಕನಸು ಕುರಿತು ಹೆಚ್ಚು ಪ್ರಸ್ತಾಪ ಬೇಡ. ಆದರೆ, ಕನಸಿಗೆ ಮಮತೆ ಮತ್ತು ಸಮತೆಯ ಆಂತರ್ಯದ ಒಳಗಣ್ಣಿರಬೇಕು. ಮಮತೆ ಮತ್ತು ಸಮತೆ ಎಂಬ ಎರಡು ಕಣ್ಣುಗಳು ಅನಿವಾರ್ಯವೂ ಕೂಡ. ಮಮತೆಯ ಕಣ್ಣಿನಿಂದ ನೋಡಿದಾಗ ಬರುವ ಸಮತೆ, ನಾವೆಲ್ಲರೂ ಒಂದು ಎಂಬ ಭಾವ ಮೂಡಿಸುತ್ತದೆ ಎಂದರು.

ಇನ್ನು ಬರವಣಿಗೆ ಕುರಿತು ಹೇಳುವುದಾದರೆ, ಬರವಣಿಗೆ ಮೂಲಕ ತಾನು ವಿಕಾಸವಾಗಬೇಕು. ತನ್ನೊಳಗೆ ತಾನು ಬೆಳೆಯುತ್ತಿರಬೇಕು. ಇದು ಬಹಳ ಮುಖ್ಯ. ನಮ್ಮ ಬರವಣಿಗೆಯಿಂದ ನಾವು ಬೆಳೆಯದೇ ಹೋದರೆ, ಬರವಣಿಗೆಗೆ ಜೀವ ಬರುವುದಿಲ್ಲ. ಅದರಲ್ಲಿ ಜೀವ ಬರದೇ ಹೋದರೆ ಉಳಿದವರಿಗೆ ಅದರಿಂದ ಏನೂ ಪ್ರಯೋಜನವಾಗುವುದಿಲ್ಲ ಎಂದು ಹೇಳಿದರು.

ಜನರಲ್ಲಿ ಇಂಗ್ಲೀಷ್ ಮೋಹ ಹೆಚ್ಚುತ್ತಿದೆಯಲ್ಲಾ? ಎಂಬ ಪ್ರಶ್ನೆಗೆ, ಭಾರತದಂತಹ ಪ್ರಾಂತೀಯ ಭಾಷೆ ಇರುವ ಕಡೆಗಳಲ್ಲಿ ಇಂಗ್ಲೀಷ್ ಬೇಕೇಬೇಕು. ಇಂಗ್ಲೀಷ್‌ನಲ್ಲಿ ಮಾತನಾಡುವವರ ಕುರಿತು ಏನೋ ಆಡಿಕೊಳ್ಳುವುದಕ್ಕಿಂತ ಆತನ ಹಿಂದಿನ ತಳಮಳಗಳೇನು ಎಂಬುದನ್ನು ಅರಿಯಬೇಕು. ನಮ್ಮ ಪ್ರಾಂತೀಯ ಭಾಷೆಗೆ ಕೆಟ್ಟ ಬ್ಯಾಗೇಜ್ ಇದೆ. ಅಲ್ಲಿನ ಅವಮಾನಗಳು, ಜಾತಿ ವ್ಯವಸ್ಥೆ ಈ ಎಲ್ಲವೂ ಇಂಗ್ಲೀಷ್ ವ್ಯಾಮೋಹಕ್ಕೆ ದಾರಿ ಮಾಡಿಕೊಡುತ್ತದೆ. ಇಂಗ್ಲೀಷ್ ಕಲಿಕೆ ತಪ್ಪಲ್ಲ. ಆದರೆ, ಪ್ರಾಥಮಿಕ ಶಿಕ್ಷಣವಾದರೂ ಮಾತೃಭಾಷೆಯಲ್ಲಾಗಬೇಕು ಎಂದು ನುಡಿದರು.
ಸಂಬಂಧಿತ ಮಾಹಿತಿ ಹುಡುಕಿ