ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಗದಗ ಬಂದ್; ಶ್ರೀರಾಮುಲು ಅಭಿಮಾನಿಗಳ 'ಅತಿರೇಕ' (Gadag | Sri ramulu | BJP | Yeddyurappa | Congress | Janardana Reddy)
Bookmark and Share Feedback Print
 
ಸಚಿವ ಶ್ರೀರಾಮುಲು ಅವರನ್ನು ಗದಗ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ಬದಲಾವಣೆ ಮಾಡಿರುವುದನ್ನು ಖಂಡಿಸಿ, ಶ್ರೀರಾಮುಲು ಅಭಿಮಾನಿ ಬಳಗದ ಕಾರ್ಯಕರ್ತರು ಸೋಮವಾರ ಕರೆ ನೀಡಿದ ಗದಗ ಬಂದ್ ಯಶಸ್ವಿಯಾಗಿದೆ.

ನಗರದ ಬಹುತೇಕ ಅಂಗಡಿಗಳು ಮುಚ್ಚಿದ್ದವು. ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿತ್ತು. ಮಹಾತ್ಮಗಾಂಧಿ ವೃತ್ತದಲ್ಲಿ ಅಭಿಮಾನಿಗಳು ಗಾಂಧಿ ಮೂರ್ತಿಗೆ ಮಾಲಾರ್ಪಣೆ ಮಾಡಿ ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದರು.

ಈ ಸಂದರ್ಭದಲ್ಲಿ ರಸ್ತೆಯ ಮಧ್ಯದಲ್ಲೇ ಆಟೋಗೆ ಬೆಂಕಿ ಹಚ್ಚಲಾಯಿತು. ಈ ವೇಳೆ ಪೊಲೀಸರು ತಡೆಯಲು ಯತ್ನಿಸಿದರು, ಆಟೋ ಮಾಲೀಕನೇ ಸ್ವಯಂ ಪ್ರೇರಣೆಯಿಂದ ಬೆಂಕಿ ಹಚ್ಚಿದ್ದರಿಂದ ಅವರು ಮೂಕ ಪ್ರೇಕ್ಷಕರಾಗಬೇಕಾಯಿತು.

ಮೂರು ಮಂದಿ ಶ್ರೀರಾಮುಲು ಅಭಿಮಾನಿಗಳು ತಮ್ಮ ಕೈಯನ್ನು ಬ್ಲೇಡ್ ಮೂಲಕ ಕೊಯ್ದುಕೊಂಡು ಆಕ್ರೋಶ ವ್ಯಕ್ತಪಡಿಸಿದ ಅತಿರೇಕದ ಘಟನೆಯೂ ನಡೆಯಿತು.

ಕೆಲ ದಿನಗಳ ಹಿಂದಷ್ಟೇ ರಾಜ್ಯದ ಹಲವು ಸಚಿವರ ಉಸ್ತುವಾರಿಯನ್ನು ಬದಲಾಯಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶ ನೀಡಿದ್ದರು. ಇದೀಗ ಗದಗ ಜಿಲ್ಲೆಯಿಂದ ತಮ್ಮನ್ನು ಬದಲಾಯಿಸಿರುವುದಕ್ಕೆ ಸ್ವತಃ ಶ್ರೀರಾಮುಲು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಶ್ರೀರಾಮುಲು ಅಪಾರ ಜನ್ನಮನ್ನಣೆ ಗಳಿಸಿರುವ ನಾಯಕ ಅವರನ್ನು ಯಾಕೆ ಉಸ್ತುವಾರಿ ಸಚಿವಗಿರಿಯಿಂದ ಬದಲಾಯಿಸಲಾಯಿತು ಎಂಬುದು ಮುಖ್ಯಮಂತ್ರಿಗಳೇ ಉತ್ತರಿಸಬೇಕು ಎಂದು ಸಚಿವ ಜನಾರ್ದನ ರೆಡ್ಡಿ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ