ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಿಎಂ ಮರ್ಯಾದೆಯಿಂದ ರಾಜೀನಾಮೆ ಕೊಡ್ಲಿ: ಪರಮೇಶ್ವರ್ (BJP | Yeddyurappa | Parameshwar | kpcc | JDS)
Bookmark and Share Feedback Print
 
ಭ್ರಷ್ಟಾಚಾರ, ಕಾನೂನು ಉಲ್ಲಂಘನೆ, ಸ್ವಜನ ಪಕ್ಷಪಾತ, ನಿಯಮ ಮೀರಿ ತಮ್ಮ ಕುಟುಂಬ ಹಾಗೂ ಸಂಬಂಧಿಕರಿಗೆ ಭೂ ಸ್ವಾಧೀನ ಮುಂತಾದ ಆರೋಪಗಳು ಬಹಿರಂಗಗೊಂಡ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಶುದ್ಧ ಹಸ್ತರೆಂಬುದನ್ನು ಸಾಬೀತುಪಡಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್ ಸವಾಲು ಹಾಕಿದರು.

ಬಿಜೆಪಿ ಸರಕಾರದ ಹಗರಣಗಳ ವಿರುದ್ಧ ರಾಜ್ಯಾದ್ಯಂತ ಆಂದೋಲನದ ಮಾದರಿಯಲ್ಲಿ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಮುಖ್ಯಮಂತ್ರಿ ತಮ್ಮ ಹಾಗೂ ಕುಟುಂಬದವರಿಗೆ ನಿಯಮಗಳನ್ನು ಗಾಳಿಗೆ ತೂರಿ ಭೂ ಸ್ವಾಧೀನ ಮಾಡಿಕೊಂಡಿದ್ದಾರೆ. ಹಾಗಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಬೇರೊಬ್ಬರಿಗೆ ಆದರ್ಶವಾಗಿ ತಾವು ಶುದ್ಧ ಹಸ್ತರೆಂಬುದನ್ನು ಸಾಬೀತುಪಡಿಸಲಿ ಎಂದರು.

ತಮ್ಮ ಮೇಲಿನ ಆಪಾದನೆಗಳನ್ನು ಸಮರ್ಥಿಸಿಕೊಳ್ಳಲು ಬೇರೆಯವರು ತಪ್ಪು ಮಾಡಿದ್ದಾರೆಂಬುದು ತಾವು ತಪ್ಪು ಮಾಡಲು ಮುಂದಾಗುವುದು ಎಷ್ಟು ಸಮಂಜಸ. ಕಳೆದ ಎರಡೂವರೆ ವರ್ಷಗಳಿಂದ ಒಂದಲ್ಲಾ ಒಂದು ಹಗರಣ ಬಹಿರಂಗಗೊಳ್ಳುತ್ತಲೇ ಇದೆ.
ಅವರ ಪುತ್ರರಿಗೆ, ಪುತ್ರಿಗೆ, ಸಂಬಂಧಿಕರಿಗೆ ಕಾನೂನು ಗಾಳಿಗೆ ತೂರಿ ಸರಕಾರದ ಆಸ್ತಿಗಳನ್ನು ವಶಪಡಿಸಿಕೊಂಡಿರುವುದು ಮುಖ್ಯಮಂತ್ರಿ ಸ್ಥಾನಕ್ಕೆ ಅಗೌರವ. ಆ ಸ್ಥಾನ ತ್ಯಜಿಸಲಿ ಎಲ್ಲವೂ ಸರಿ ಹೋಗುತ್ತದೆಂದು ಪರಮೇಶ್ವರ್ ಆಗ್ರಹಿಸಿದರು.

ಹಾಲಪ್ಪ ಅವರ ಅತ್ಯಾಚಾರ ಪ್ರಕರಣ, ರೇಣುಕಾಚಾರ್ಯ ಪ್ರಣಯ ಪ್ರಕರಣ, ರಾಮಚಂದ್ರ ಗೌಡರ ವೈದ್ಯಕೀಯ ಸಿಬ್ಬಂದಿ ನೇಮಕಾತಿ ವಿವಾದ, ಕಟ್ಟಾಸುಬ್ರಹ್ಮಣ್ಯ ನಾಯ್ಡು ಅವರ ಕೆಐಎಡಿಬಿ ಹಗರಣ, ಆರ್. ಅಶೋಕ್ ಅವರ ಮೇಲಿನ ಡಿನೋಟಿಫಿಕೇಷನ್, ಸ್ವತಃ ಮುಖ್ಯಮಂತ್ರಿ ಅವರೇ ಹಗರಣದಲ್ಲಿ ಶಾಮೀಲಾಗಿರುವುದನ್ನು ನೋಡಿಕೊಂಡು ಕಾಂಗ್ರೆಸ್ ಪಕ್ಷ ಕೈ ಕಟ್ಟಿ ಕುಳಿತುಕೊಳ್ಳುವುದಿಲ್ಲ.
ಇದೇ ವಿಷಯ ಮುಂದಿಟ್ಟುಕೊಂಡು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ರೂಪಿಸುತ್ತೇವೆ. ಶೀಘ್ರದಲ್ಲೇ ಅದಕ್ಕೆ ಚಾಲನೆ ನೀಡಲಾಗುವುದೆಂದು ಹೇಳಿದರು.

ಆರೋಪ ನಿರಾಧಾರ:
ಮುಖ್ಯಮಂತ್ರಿ ಯಡಿಯೂರಪ್ಪ ನನ್ನ ಮೇಲೆ ಮಾಡಿರುವ ಆರೋಪ ನಿರಾಧಾರವಾಗಿದೆ. ನನಗೆ ಒಂಬತ್ತು ಎಕರೆ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಿಕೊಡಲಾಗಿದೆ ಎಂದು ಹೇಳಿರುವುದು ಶುದ್ಧ ಸುಳ್ಳು. ನಾನು ಸಚಿವನಾಗಿದ್ದಾಗ ಅಮೆರಿಕ ಮೂಲದ ಫಿನಿಕ್ಸ್ ಗ್ಲೋಬಲ್ ಕಂಪನಿಯವರು ಮೂಲತಃ ಕನ್ನಡದವರು. ಅವರಿಗೆ ಕಾನೂನು ಪ್ರಕಾರ ಡಿ ನೋಟಿಫಿಕೇಷನ್ ಮಾಡಿಕೊಡಲಾಗಿದೆ. ಇದರಲ್ಲಿ ಯಾವುದೇ ಉಲ್ಲಂಘನೆಯಾಗಿಲ್ಲ. ಜನರನ್ನು ತಪ್ಪು ದಾರಿಗೆಳೆಯಲು ಮುಖ್ಯಮಂತ್ರಿ ಯಡಿಯೂರಪ್ಪ ಇಂತಹ ಹೇಳಿಕೆ ನೀಡುತ್ತಿದ್ದಾರೆಂದು ಅವರು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ