ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಆರೆಸ್ಸೆಸ್ ಭೂಮಿಯೂ ಗುಳುಂ; ಎಚ್‌ಡಿಕೆ ಬಾಂಬ್! (RSS | BJP | Yeddyurappa | Congress | Kumaraswamy | JDS)
Bookmark and Share Feedback Print
 
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುತ್ತಮುತ್ತ ಭೂಗಳ್ಳ ಶಾಸಕರು, ಸಚಿವರೇ ತುಂಬಿಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಂಭೀರವಾಗಿ ಆರೋಪಿಸಿದ್ದು, ಯಲಹಂಕದ ಶಾಸಕರು (ಎಸ್.ಆರ್.ವಿಶ್ವನಾಥ್) ಮತ್ತು ಗೂಂಡಾಗಳು ಆರ್ಎಸ್ಎಸ್ ಮಾಜಿ ಸಂಚಾಲಕರೊಬ್ಬರಿಗೆ ಸೇರಿದ ಭೂಮಿಯನ್ನೂ ಗುಳುಂ ಮಾಡಿರುವುದಾಗಿ ಹೊಸ ಬಾಂಬ್‌ವೊಂದನ್ನು ಸಿಡಿಸಿದ್ದಾರೆ.

ಬುಧವಾರ ಖಾಸಗಿ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆಡಳಿತಾರೂಢ ಬಿಜೆಪಿ ಅತ್ಯಂತ ಭ್ರಷ್ಟ ಸರಕಾರವಾಗಿದೆ. ಕೂಡಲೇ ಸರಕಾರವನ್ನು ವಜಾಗೊಳಿಸಬೇಕೆಂದು ನಾನು ರಾಜ್ಯಪಾಲರಿಗೆ ಮನವಿ ಮಾಡಿದ್ದೆ. ಅಷ್ಟೇ ಅಲ್ಲ ಬಿಜೆಪಿ ಸರಕಾರದ ಭೂ ಹಗರಣವನ್ನು ಸೆಪ್ಟೆಂಬರ್ ತಿಂಗಳಿನಲ್ಲಿಯೇ ನಾನು ದಾಖಲೆ ಸಹಿತ ಹೊರಹಾಕಿದ್ದೇನೆ. ಅದಕ್ಕೆ ತಿರುಗೇಟು ಎಂಬಂತೆ ಮುಖ್ಯಮಂತ್ರಿಗಳು ನನ್ನ ವಿರುದ್ಧ ಆಧಾರ ರಹಿತವಾಗಿ ಆರೋಪಿಸಿದ್ದಾರೆ ಎಂದು ದೂರಿದರು.

ನನ್ನ ಕಾಲದಲ್ಲಿ 247 ಎಕರೆ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಿದ್ದೇನೆ. ಈ ಸಂದರ್ಭದಲ್ಲಿ ನಾನು ಎಸ್.ಎಂ.ಕೃಷ್ಣ, ಧರಂಸಿಂಗ್ ಕಾಲದ ಡಿನೋಟಿಫಿಕೇಷನ್ ಬಗ್ಗೆ ಮಾತನಾಡಲು ಹೋಗಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ನನ್ನ ವಿರುದ್ಧ ಮಾಡಿದ ಆಪಾದನೆಗಳಿಗೆ ದಾಖಲೆ ಸಹಿತ ಉತ್ತರ ನೀಡುತ್ತಿದ್ದೇನೆ ಎಂದರು.

ನಮ್ಮ ಕುಟುಂಬದ ಜಮೀನು ಉಳಿಸಲು ಪೆರಿಫೆರಲ್ ರಸ್ತೆ ನಕ್ಷೆ ಬದಲಿಸಿಲ್ಲ. ಆ ಬಗ್ಗೆ ಸರಕಾರದ ಬಳಿ ದಾಖಲೆ ಇದ್ದರೆ ತೋರಿಸಲಿ ಎಂದು ಸವಾಲು ಹಾಕಿದ ಕುಮಾರಸ್ವಾಮಿ, ಇಂತಹ ಸುಳ್ಳುಗಾರ, ಮೋಸಗಾರ ಮುಖ್ಯಮಂತ್ರಿಯನ್ನು ಈ ರಾಜ್ಯದ ಇತಿಹಾಸದಲ್ಲಿ ಇನ್ನು ಮುಂದೆಯೂ ಕಾಣಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.

ನನ್ನ ಕಾಲದಲ್ಲಿ 300 ಎಕರೆಗೂ ಅಧಿಕ ಭೂಮಿ ಡಿನೋಟಿಫಿಕೇಷನ್ ಮಾಡಿದ್ದೇನೆ ಎಂದು ಸಿಎಂ ದೂರಿದ್ದಾರೆ. ಅಷ್ಟೇ ಅಲ್ಲ ಒಂದೇ ದಿನದಲ್ಲಿ 60 ಎಕರೆ ಭೂಮಿ ಡಿನೋಟಿಫಿಕೇಷನ್‌ಗೆ ಸಹಿ ಹಾಕಿದ್ದೇನೆ ಎಂದಿದ್ದಾರೆ. ಅವೆಲ್ಲ ಪ್ರಸ್ತಾಪ ಕೃಷ್ಣ ಅವರ ಕಾಲದಲ್ಲಿಯೇ ಬಂದಿದ್ದು, ನನ್ನ ಅವಧಿಯಲ್ಲಿ ಆ ಪ್ರಸ್ತಾಪಕ್ಕೆ ಅನುಮೋದನೆ ನೀಡಲಾಗಿದೆ. ಬಿಜೆಪಿ ಸರಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದ ಮೇಲೆ ನಾನು ಯಾವುದೇ ಡಿನೋಟಿಫಿಕೇಷನ್ ಮಾಡಿಲ್ಲ. ನನ್ನ ಸಂಬಂಧಿಕರಿಗೂ ಭೂಮಿ ಕೊಟ್ಟಿಲ್ಲ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ