ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಶಾಸಕರ ಗೂಂಡಾಗಿರಿ; ಗುರುವಾರ ಅಂತಿಮ ವಿಚಾರಣೆ (BJP | Congress | KG Bopayya | Yeddyurappa | JDS)
Bookmark and Share Feedback Print
 
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ನಡೆದ ಶಾಸಕರ ಅನುಚಿತ ವರ್ತನೆ ಬಗ್ಗೆ ಶಾಸಕ ಅಪ್ಪಚ್ಚು ರಂಜನ್ ಅಧ್ಯಕ್ಷತೆಯ ಸದನ ಸಮಿತಿ ಗುರುವಾರ ಅಂತಿಮ ವಿಚಾರಣೆ ನಡೆಸಲಿದೆ.

ಅಕ್ಟೋಬರ್ 11ರಂದು ನಡೆದ ವಿಧಾನಸಭೆ ಅಧಿವೇಶನದಲ್ಲಿ ಪ್ರತಿಪಕ್ಷಗಳ 15 ಶಾಸಕರು ಅನುಚಿತವಾಗಿ ವರ್ತಿಸಿರುವ ಬಗ್ಗೆ ವಿಚಾರಣೆ ನಡೆಸಿ ವರದಿ ಸಲ್ಲಿಸಲು ಸಮಿತಿಗೆ ನವೆಂಬರ್ 20ರವರೆಗೆ ಗಡುವು ನೀಡಲಾಗಿದೆ.

ನವೆಂಬರ್ 12ರಂದು ಕಾಂಗ್ರೆಸ್‌ನ ಎನ್.ಎ.ಹ್ಯಾರಿಸ್ ಮಾತ್ರ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದರು. ಅಂದು ಗೈರು ಹಾಜರಾದ ಹಾಗೂ ನೋಟಿಸ್‌ಗೆ ಉತ್ತರಿಸಲು ಕಾಲಾವಕಾಶ ಕೇಳಿದ ಎಲ್ಲಾ ಶಾಸಕರಿಗೂ ನಾಳೆ ಅಂತಿಮ ಅವಕಾಶವನ್ನು ಸಮಿತಿ ನೀಡಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್‌ನ 14 ಶಾಸಕರು ನಾಳೆ ಸಮಿತಿ ಮುಂದೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಬೇಕು. ಕಾಂಗ್ರೆಸ್‌ನ ಕೆಲವು ಶಾಸಕರು ನಾಳೆ ಹಾಜರಾಗುವುದಾಗಿ ಸಮಯಾವಕಾಶ ಕೇಳಿದ್ದರು.

ಜೆಡಿಎಸ್‌ನ ಬಂಡೆಪ್ಪ ಕಾಶೆಂಪೂರ್, ಎಚ್.ಸಿ.ಬಾಲಕೃಷ್ಣ ಸೇರಿದಂತೆ ಕೆಲವು ಶಾಸಕರು ನ.12ರಂದು ಹಾಜರಾಗಲು ಸಾಧ್ಯವಿಲ್ಲ. 20 ದಿನಗಳ ಕಾಲಾವಕಾಶ ನೀಡುವಂತೆ ಸಮಿತಿಯನ್ನು ಕೋರಿದ್ದರು. ಆದರೆ ಸಮಿತಿ ನ.18ರಂದು ಅಂತಿಮ ಅವಕಾಶ ನೀಡಿದೆ. ನ.20ರಂದು ಸಮಿತಿಯ ಅವಧಿ ಮುಗಿಯುತ್ತಿದ್ದು, ಅಷ್ಟರಲ್ಲಿ ಶಾಸಕರು, ಪೊಲೀಸರು ಹಾಗೂ ಮಾರ್ಷಲ್‌ಗಳ ಹೇಳಿಕೆ ಪಡೆದು ವರದಿ ನೀಡಬೇಕಾಗಿದೆ.

ಪ್ರತಿಪಕ್ಷಗಳ 15 ಮಂದಿ ಶಾಸಕರು ಅನುಚಿತವಾಗಿ ವರ್ತಿಸಿದ್ದಲ್ಲದೆ, ಮಾರ್ಷಲ್‌ಗಳ ಮೇಲೂ ಹಲ್ಲೆ ನಡೆಸಿದ್ದರು. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಶಾಸಕರು ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರಿಗೆ ದೂರು ನೀಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ