ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮಾಧ್ಯಮಗಳ ವಿರುದ್ಧವೇ ಶಾಸಕ ಸಿ.ಟಿ.ರವಿ ಕಿಡಿ (CT Ravi | BJP | Yeddyurappa | Press | Congress | Indira gandhi)
Bookmark and Share Feedback Print
 
ಇತ್ತೀಚೆಗೆ ಮಾಧ್ಯಮಗಳಲ್ಲಿ ಬಿಜೆಪಿ ಮುಖಂಡರ ಬಗ್ಗೆ ಹೆಚ್ಚು ಟೀಕೆ ಪ್ರಕಟವಾಗುತ್ತಿವೆ. ಪಕ್ಷದೊಳಗೆ ಆಂತರಿಕ ಸಂಘರ್ಷಗಳಿವೆ ನಿಜ, ಆದರೆ ಎಲ್ಲ ವರದಿ ಪೂರ್ಣ ಸತ್ಯವೂ ಅಲ್ಲ, ಸುಳ್ಳು ಅಲ್ಲ. ಹೀಗಾಗಿ ಪಕ್ಷ ಸಂಪೂರ್ಣ ದೋಷಮುಕ್ತ ಎನ್ನುವಂತಿಲ್ಲ ಎಂದು ಬಿಜೆಪಿ ರಾಜ್ಯ ವಕ್ತಾರ, ಶಾಸಕ ಸಿ.ಟಿ.ರವಿ ತಿಳಿಸಿದ್ದಾರೆ.

ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆ ಹಿರಿಯೂರಿನಲ್ಲಿ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಸರಕಾರದ ಜನಪರ ಯೋಜನೆಗಳ ಕುರಿತು ಪತ್ರಿಕೆಗಳಲ್ಲಿ ವರದಿಯಾಗುತ್ತಿಲ್ಲ. ಕಾರ್ಯಕರ್ತರು ಈ ಯೋಜನೆಗಳನ್ನು ಜನರಿಗೆ ತಲುಪಿಸಬೇಕು. ಸಣ್ಣ ಸಮುದಾಯಗಳಿಗಾಗಿ ಬಿಜೆಪಿ ಹಲವು ಯೋಜನೆ ರೂಪಿಸಿದೆ. ಆದರೆ ಗರೀಬಿ ಹಠಾವೋ ಎಂದ ಇಂದಿರಾಗಾಂಧಿ ಬಡವರಿಗೆ ಭಾಗ್ಯಲಕ್ಷ್ಮಿ ಯೋಜನೆ, ಸೈಕಲ್ ವಿತರಣೆ, ಸಂಧ್ಯಾಸುರಕ್ಷಾ ಯೋಜನೆ ಜಾರಿ ತರಲಿಲ್ಲವೇಕೆ ಎಂದು ಪ್ರಶ್ನಿಸಿದರು. ಕೋರ್ಟ್ ತೀರ್ಪಿನ ನಂತರವೂ ಕಾಂಗ್ರೆಸ್ ಮತ ಗಳಿಕೆಗಾಗಿ ಅಫ್ಜಲ್ ಗುರುವನ್ನು ಈವರೆಗೆ ಗಲ್ಲಿಗೇರಿಸಿಲ್ಲ. ದೇಶದ ದೊಡ್ಡ ಸಮಸ್ಯೆಯಾದ ನಕ್ಸಲರ ಜತೆ ರಾಜಿ ಮಾಡಿಕೊಂಡಿದೆ. ಆದರೆ ಬಿಜೆಪಿ ರಕ್ಷಣೆ ದೃಷ್ಟಿಯಿಂದ ಎಂದೂ ರಾಜಿ ಮಾಡಿಕೊಂಡಿಲ್ಲ ಎಂದರು.

ಸಮಾರಂಭಗಳಿಗೆ ಜನರನ್ನು ಸೇರಿಸುವುದು ಸುಲಭ. ಆದರೆ ಎಲ್ಲ ಸಮುದಾಯದವರು ಸಭೆಗಳಿಗೆ ಬಂದಾಗ ಪಕ್ಷಕ್ಕೆ ಶಕ್ತಿ ತುಂಬಿಕೊಳ್ಳುತ್ತದೆ. ಸಂಖ್ಯೆ ದೃಷ್ಟಿಯಿಂದ ಪಕ್ಷ ಬಲಿಷ್ಠವಾದರೆ ಸಾಲದು. ಮತ ಗಳಿಸುವ ನಾಯಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡುವ ಕೆಲಸ ಆಗಬೇಕು. ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾಗಿ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ