ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮುಖ್ಯಮಂತ್ರಿ ಕುರ್ಚಿ ಕುಮಾರಸ್ವಾಮಿ ಸ್ವತ್ತಲ್ಲ: ರೇಣುಕಾಚಾರ್ಯ (Kumaraswamy | JDS | BJP | Congress | Renukacharya | Yeddyurappa)
Bookmark and Share Feedback Print
 
ಮುಖ್ಯಮಂತ್ರಿ ಕುರ್ಚಿ ಎಚ್.ಡಿ.ಕುಮಾರಸ್ವಾಮಿ ಅವರ ಸ್ವಂತ ಸ್ವತ್ತಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಗೊರೂರಿನ ಹೇಮಾವತಿ ಜಲಾಶಯಕ್ಕೆ ಬಾಗಿನ ಅರ್ಪಿಸಿ, ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪ ಸುಳ್ಳುಗಾರ-ಮೋಸಗಾರ ಎಂದು ಟೀಕಿಸುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ತಮ್ಮ ಘನತೆಗೆ ತಕ್ಕಂತೆ ಮಾತನಾಡಬೇಕು ಎಂದರು.

ಪ್ರತಿಪಕ್ಷದಲ್ಲಿ ಕೂರಲು ಆಗದೆ ಬಿಜೆಪಿ ಸರಕಾರ ಅಸ್ಥಿರಗೊಳಿಸುವ ಕೆಲಸಕ್ಕೆ ಕೈಹಾಕಿದ್ದು, ಅದರಲ್ಲಿ ಅವರು ಯಶಸ್ವಿಯಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಮಾಜಿ ಪ್ರಧಾನಿ ಪುತ್ರ ಎಂಬುದನ್ನೂ ಮರೆತು ಸಣ್ಣತನದ ರಾಜಕೀಯ ಮಾಡುತ್ತಿರುವುದರ ಹಿಂದಿನ ಉದ್ದೇಶವೇನು ಎಂಬುದು ರಾಜ್ಯದ ಜನತೆಗೆ ತಿಳಿದಿದೆ.

ಬಿಜೆಪಿ ಬೆಂಬಲದೊಂದಿಗೆ 20 ತಿಂಗಳು ಮುಖ್ಯಮಂತ್ರಿ ಆಗಿದ್ದಾಗ ಯಡಿಯೂರಪ್ಪ ಸುಳ್ಳುಗಾರ-ಮೋಸಗಾರ ಎಂಬುದು ಕುಮಾರಸ್ವಾಮಿಗೆ ಗೊತ್ತಿರಲಿಲ್ಲವೇ? ಎಂದು ಪ್ರಶ್ನಿಸಿದರು.ರಾಜ್ಯದ ಅಭಿವೃದ್ದಿ ದೃಷ್ಟಿಯಿಂದ ಪ್ರತಿಪಕ್ಷದವರು ಸಕಾರಾತ್ಮಕ ಸಲಹೆ ನೀಡಬೇಕೆ ಹೊರತು ಕುತಂತ್ರದ ರಾಜಕೀಯ ಮಾಡಬಾರದು ಎಂದರು.

ಎರಡ್ ಮೂರ್ ಎಕ್ರೆ ಜಾಗ ಕೊಟ್ರೆ ತಪ್ಪಾ?
ಎರಡ್ ಮೂರ್ ಎಕ್ರೆ ಭೂಮಿ ಕೊಟ್ಟ ಮಾತ್ರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ಕೊಡ್ಬೇಕಾ...! ಎಂದು ರೇಣುಕಾಚಾರ್ಯ ಸಿಎಂ ಮತ್ತು ಕುಟುಂಬದ ಭೂ ಹಗರಣ ಕುರಿತಂತೆ ಈ ರೀತಿ ಪ್ರತಿಕ್ರಿಯೆ ನೀಡಿದರು.

ರಾಜ್ಯದ ಬೊಕ್ಕಸಕ್ಕೆ ವಂಚಿಸದೆ ಕಾನೂನು ರೀತಿ ಭೂಮಿ ಕೊಟ್ಟಿರುವುದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದರು.ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಬೆಂಗಳೂರು ಸುತ್ತಲಿನ ಭೂಮಿಯನ್ನು ಅವರ ಅಳಿಯ ಸಿದ್ದಾರ್ಥ ಅವರಿಗೆ ನೀಡಿಲ್ಲವೇ? ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿ ಒಂದೇ ತಿಂಗಳಲ್ಲಿ 350 ಎಕರೆ ಡಿನೋಟಿಫೈ ಮಾಡಿದ್ದು ನಮಗೇನು ಗೊತ್ತಿಲ್ಲ ಎಂದು ತಿಳಿದಿದ್ದಾರೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್-ಕಾಂಗ್ರೆಸ್‌ನವರು ಮಾಡಿರುವ ಆಸ್ತಿ ಎಲ್ಲೆಲ್ಲಿದೆ ಎಂಬುದು ಗೊತ್ತಿದೆ. ಭ್ರಷ್ಟಾಚಾರದ ದಾಖಲೆ ಸಂಗ್ರಹದಲ್ಲಿ ನಾವೂ ಸೆಮಿಫೈನಲ್ ತಲುಪಿದ್ದು, ಸೂಕ್ತ ಸಮಯದಲ್ಲಿ ಬಹಿರಂಗಪಡಿಸುತ್ತೇವೆ ಎಂದು ಎಚ್ಚರಿಸಿದರು.
ಸಂಬಂಧಿತ ಮಾಹಿತಿ ಹುಡುಕಿ