ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನಕ್ಸಲ್ ನಿಗ್ರಹಕ್ಕೆ ಕಮಾಂಡೋ ಪಡೆ: ಅಶೋಕ್ (Naxal commondo | Ashok | BJP | Congress | Yeddyurappa)
Bookmark and Share Feedback Print
 
ರಾಜ್ಯದಲ್ಲಿ ಭಯೋತ್ಪಾದನೆ, ನಕ್ಸಲ್ ಚಟುವಟಿಕೆ ನಿಗ್ರಹಕ್ಕೆ ಹೊಸ 'ಕಮಾಂಡೋ ಪಡೆ ' ರಚಿಸಲು ನಿರ್ಧರಿಸಲಾಗಿದೆ ಎಂದು ಗೃಹ ಮತ್ತು ಸಾರಿಗೆ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ದಾವಣಗೆರೆ ಜಿಲ್ಲೆ ಹರಪನಹಳ್ಳಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಪೋ, ಡಿವೈಎಸ್ಪಿ ಕಚೇರಿ ಕಟ್ಟಡ, ಅಕ್ಕಿ ಸಂತೆ, ಪಡಿತರ ಜಾಗೃತಿ ಸಮಾವೇಶ ಮತ್ತು ಎಪಿಎಂಸಿ ಗೋದಾಮುಗಳ ಕಾಮಗಾರಿಗೆ ಅಡಿಗಲ್ಲು ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕಮಾಂಡೋ ಪಡೆಗೆ 350 ಸಿಬ್ಬಂದಿ ನೇಮಿಸಲಾಗುವುದು. ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿ ಈ ಪಡೆಯ ನೇತೃತ್ವ ವಹಿಸಲಿದ್ದಾರೆ ಎಂದರು.

ಪೊಲೀಸ್ ಇಲಾಖೆಯನ್ನು ಸಮಗ್ರವಾಗಿ ಬದಲಾಯಿಸಲಾಗುತ್ತಿದೆ. ಗೃಹ ಇಲಾಖೆ ಮುಂದಿರುವ ಅನೇಕ ಕಠಿಣ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸರಕಾರ ಸಿದ್ಧವಿದೆ. ಇಲಾಖೆಯನ್ನು ಆಧುನೀಕರಣಗೊಳಿಸಬೇಕಿದ್ದು, ಅಪರಾಧ ತಡೆ ಮತ್ತು ಪತ್ತೆಗೆ ಆಧುನಿಕ ಸೌಲಭ್ಯ ಕಲ್ಪಿಸುವ ಅಗತ್ಯವಿದೆ ಎಂದು ಹೇಳಿದರು.

ಸೈಬರ್ ಅಪರಾಧ, ಗೂಂಡಾಗಿರಿ, ಬೆಳೆಯುತ್ತಿರುವ ಭಯೋತ್ಪಾದನೆ, ಕೋಮುಗಲಭೆ ಸಮರ್ಥವಾಗಿ ನಿಭಾಯಿಸಲು ಪೊಲೀಸರನ್ನು ಮಾನಸಿಕ ಹಾಗೂ ದೈಹಿಕವಾಗಿ ಸದೃಢಗೊಳಿಸಬೇಕಿದೆ ಎಂದು ಅಭಿಪ್ರಾಯಪಟ್ಟರು. ಅಪರಾಧ ತಡೆಗೆ ಕಾನೂನು ತಿದ್ದುಪಡಿ ಅಗತ್ಯವಿದೆ. ಈ ನಿಟ್ಟಿನಲ್ಲಿ ಅಪರಾಧಗಳ ತಡೆಗೆ ಹೊಸ ಕಾನೂನು ಜಾರಿಗೆ ತರಲು ಇಲಾಖೆ ಉದ್ದೇಶಿಸಿದೆ ಎಂದರು.

ಪೇದೆಗಳಿಗೆ ವಸತಿ ಸೌಲಭ್ಯ, ಅವರ ಮಕ್ಕಳಿಗೆ ಶಿಕ್ಷಣ ಕಲ್ಪಿಸಲು ಒತ್ತು ನೀಡಲಾಗುವುದು. ಸಾಮೂಹಿಕ ವರ್ಗಾವಣೆಗೆ ತಮ್ಮ ವಿರೋಧವಿದೆ. ಯಾವುದೇ ಅಧಿಕಾರಿಯಾಗಿರಲಿ ಅವರ ಕಾರ್ಯಕ್ಷಮತೆ, ದಕ್ಷತೆ ಮತ್ತು ಪ್ರತಿಭೆ ಗುರುತಿಸಲು ಕನಿಷ್ಠ ಕಾಲಾವಕಾಶ ನೀಡಬೇಕು. ಅಧಿಕಾರಿಯಿಂದ ಪ್ರಮಾದವಾದಲ್ಲಿ ಅಥವಾ ಅಸಮರ್ಥರಿದ್ದಾಗ ಅಂಥ ಕ್ರಮ ಅನಿವಾರ್ಯ ಎಂದರು.
ಸಂಬಂಧಿತ ಮಾಹಿತಿ ಹುಡುಕಿ