ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಇಂತಹ ಭ್ರಷ್ಟ ಸರಕಾರ ನಾನೆಂದೂ ನೋಡಿಲ್ಲ: ನ್ಯಾ.ಹೆಗ್ಡೆ (Santhosh Hegde | Lokayuktha | BJP | Yeddyurappa | Congress)
Bookmark and Share Feedback Print
 
ಇಷ್ಟೊಂದು ಅನ್ಯಾಯ ಮತ್ತು ಅನೈತಿಕತೆಯ ಸರಕಾರವನ್ನು ನಾನೆಂದೂ ಕಂಡಿಲ್ಲ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ಬೆಳ್ಳಾರೆ ಸರಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ 'ಸುಳ್ಯ ಹಬ್ಬ'ದ ಪ್ರಯುಕ್ತ ನಡೆದ ಭ್ರಷ್ಟಾಚಾರ ವಿರೋಧಿ ಅರಿವು- ಆಂದೋಲನ ವಿಚಾರಗೋಷ್ಠಿಯಲ್ಲಿ ವಿದ್ಯಾರ್ಥಿ ಮತ್ತು ಸಾರ್ವಜನಿಕರೊಂದಿಗೆ ಸಂವಾದದಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಹಗರಣಗಳು ಹನುಮಂತನ ಬಾಲದಂತೆ ಸಾಗುತ್ತಲೇ ಇದೆ. ಕೋಟ್ಯಂತರ ರೂ. ಖರ್ಚು ಮಾಡಿ ಚುನಾವಣೆಯಲ್ಲಿ ಗೆದ್ದು ಬರುವ ರಾಜಕಾರಣಿಗಳಿಗೆ ಆ ಹಣ ದೊಡ್ಡ ಇನ್ವೆಸ್ಟ್‌ಮೆಂಟ್. ಗೆದ್ದ ನಂತರ ಅದಕ್ಕೆ ಡಿವಿಡೆಂಡ್ ಮಾತ್ರವಲ್ಲ ಚಕ್ರ ಬಡ್ಡಿಯನ್ನೂ ಭ್ರಷ್ಟಾಚಾರದ ಮೂಲದ ವಾಪಸ್ ಪಡೆದುಕೊಳ್ಳುತ್ತಾರೆ ಎಂದು ಕಿಡಿಕಾರಿದರು.

ಭವಿಷ್ಯದ ಬಗ್ಗೆ ಕನಸು ಕಂಡಾಗ ಪ್ರತಿ ಹೆಜ್ಜೆ ಹೆಜ್ಜೆಗೂ ಭ್ರಷ್ಟಾಚಾರ, ಅನ್ಯಾಯದ ದರ್ಶನ ಆಗುತ್ತದೆ. ಭ್ರಷ್ಟಾಚಾರದ ಬಲೆಗೆ ಎಂದೂ ಬೀಳಬೇಡಿ. ನಿಮ್ಮಿಂದಲೇ ಈ ದೇಶದ ಭವಿಷ್ಯ ಇದೆ, ಸಮಾಜದ ಸ್ವಾಸ್ಥ್ಯ ಇದೆ ಎಂದು ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಕಿವಿಮಾತು ಹೇಳಿದರು.

ಭ್ರಷ್ಟ ಅಧಿಕಾರಿ, ಜನಪ್ರತಿನಿಧಿಗಳನ್ನು ಬಹಿಷ್ಕರಿಸಿ, ಸಮಾಜ, ಸಮುದಾಯದ ಕಾರ್ಯಕ್ರಮದಿಂದಲೂ ಅವರನ್ನು ದೂರವಿಡಿ. ಭ್ರಷ್ಟಾಚಾರದಲ್ಲಿ ದೇಶ 73 ರಿಂದ 87ನೇ ಸ್ಥಾನಕ್ಕೆ ಏರಿರುವುದು ದುರ್ದೈವ ಎಂದರು.

ಮರ್ಕಂಜ ಗ್ರಾಮಸ್ಥರು 24 ದಿನಗಳ ಕಾಲ ನಿರಂತರವಾಗಿ ಮುಂದುವರಿಸುತ್ತಿರುವ ಭ್ರಷ್ಟಾಚಾರದ ವಿರುದ್ಧ ಧರಣಿ ಸತ್ಯಾಗ್ರಹ ಮತ್ತು ಗ್ರಾಮದಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ಸಮಿತಿ ಸಂಚಾಲಕ ಶಂಕರನಾರಾಯಣ ಶಾಸ್ತ್ರಿ ಲೋಕಾಯುಕ್ತರ ಮುಂದೆ ವಿವರಿಸಿದರು. ಈ ಅವ್ಯವಹಾರದಲ್ಲಿ ಈಗಿನ ತನಿಖಾ ಪ್ರಕರಣದಲ್ಲಿ ಹೊರಗುಳಿದವರ ವಿರುದ್ಧ ನೀವು ದೂರು ನೀಡಿದರೆ ನಾನೇ ಕಾಳಜಿ ವಹಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ನ್ಯಾ.ಸಂತೋಷ್ ಹೆಗ್ಡೆ ಈ ಸಂದರ್ಭದಲ್ಲಿ ಭರವಸೆ ನೀಡಿದರು.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ
ಸಂಬಂಧಿತ ಮಾಹಿತಿ ಹುಡುಕಿ