ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅಪ್ಪ-ಮಕ್ಳ ಬಣ್ಣ ಬಯಲು,ಜೆಡಿಎಸ್ ನಿರ್ನಾಮ ಮಾಡ್ತೇನೆ: ಸಿಎಂ (JDS | Deve gowda | Yeddyurappa | Congress | KPCC | Kumaraswamy)
Bookmark and Share Feedback Print
 
'ಅಪ್ಪ-ಮಕ್ಕಳು ಸೇರಿಕೊಂಡು ನನ್ನನ್ನು ರಾಜಕೀಯವಾಗಿ ಮುಗಿಸಲು ಸಂಚು ನಡೆಸುತ್ತಿದ್ದಾರೆ' ಎಂದು ಗಂಭೀರವಾಗಿ ಆರೋಪಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ದೇವೇಗೌಡ ಮತ್ತು ಕುಮಾರಸ್ವಾಮಿ ಕರ್ಮಕಾಂಡ ರಾಜ್ಯದ ಜನತೆಗೆ ತಿಳಿಸುತ್ತೇನೆ. ಅಷ್ಟೇ ಅಲ್ಲ ರಾಜ್ಯದಲ್ಲಿ ಜೆಡಿಎಸ್ ನಿರ್ನಾಮ ಮಾಡುವುದೇ ತನ್ನ ಗುರಿ ಎಂದು ಶಪಥ ಮಾಡಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಶುಕ್ರವಾರ ತಡರಾತ್ರಿಯವರೆಗೂ ಭೂಹಗರಣದ ಕುರಿತು ಪಕ್ಷದ ವರಿಷ್ಠರೊಂದಿಗೆ ಸಮಾಲೋಚನೆ ನಡೆಸಿದ ನಂತರ ಶನಿವಾರ ಬೆಳಿಗ್ಗೆ ವಿಶೇಷ ವಿಮಾನದಲ್ಲಿ ಹುಬ್ಬಳ್ಳಿಗೆ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೇವೇಗೌಡ ಮತ್ತು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ದೆಹಲಿ ರಾಜಕಾರಣ ನನಗೂ ಗೊತ್ತು, ಇನ್ನೆರಡು ದಿನ ದೆಹಲಿಯಲ್ಲೇ ಠಿಕಾಣಿ ಹೂಡಿ ಅಪ್ಪ-ಮಕ್ಕಳ ಎಲ್ಲಾ ಹಗರಣ ಜಗಜ್ಜಾಹೀರು ಮಾಡ್ತೇನೆ ಎಂದು ಗುಡುಗಿದ ಅವರು, ನಾನು ಭೂ ಹಗರಣದಲ್ಲಿ ಶಾಮೀಲಾಗಿದ್ದೇನೆ ಎಂದು ಸಾಬೀತು ಪಡಿಸಿದ್ರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ದೇವೇಗೌಡರಿಗೆ ಸವಾಲು ಹಾಕಿದ್ದಾರೆ.

ನನ್ನ ಮುಖ್ಯಮಂತ್ರಿ ಕುರ್ಚಿಯಿಂದ ಇಳಿಸಬೇಕೆಂದು ಅಪ್ಪ-ಮಕ್ಕಳು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ಆದರೆ ರಾಜ್ಯದಲ್ಲಿ ನನ್ನ ನಾಯಕತ್ವದಲ್ಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಹಾಗಾಗಿ ನಾನೇ ಮುಂದಿನ ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ ಎಂದರು.

ರಾಜ್ಯದಲ್ಲಿ ದೇವೇಗೌಡ ಮತ್ತು ಮಗ ಕುಮಾರಸ್ವಾಮಿ ಮಾಡಿರುವಷ್ಟು ಭ್ರಷ್ಟಾಚಾರ ಬೇರೆ ಯಾರೂ ಮಾಡಿಲ್ಲ, ಆ ಎಲ್ಲ ಹಗರಣ ಸಂಸತ್‌ನಲ್ಲಿಯೂ ಚರ್ಚೆಯಾಗಲಿ ಎಂದು ಈ ಸಂದರ್ಭದಲ್ಲಿ ಹೇಳಿದರು. ಆ ನಿಟ್ಟಿನಲ್ಲಿಯೇ ದೇವೇಗೌಡರ ಕಾಲದಲ್ಲಿ ತುಂಡು ಗುತ್ತಿಗೆ ಸೇರಿದಂತೆ 2010ರವರೆಗಿನ ಎಲ್ಲಾ ಹಗರಣದ ತನಿಖೆಗೆ ಆದೇಶಿಸಿದ್ದೇನೆ. ಎಲ್ಲವೂ ಬಯಲಾಗಲಿ, ಇದರಿಂದ ರಾಜ್ಯದ ಜನತೆಗೆ ಸತ್ಯಾಂಶ ತಿಳಿಯಲಿದೆ ಎಂದರು.

ಮಾಜಿ ಪ್ರಧಾನಿಯಾದ ದೇವೇಗೌಡರಿಗೆ ಮಾನ, ಮರ್ಯಾದೆ ಏನಾದ್ರೂ ಇದೆಯಾ ಎಂದು ಏಕವಚನದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ಅಧಿಕಾರಕ್ಕಾಗಿ ಸೋನಿಯಾ ಮನೆ ಮುಂದೆ ಕಾದು ಕುಳಿತುಕೊಳ್ಳುವುದು, ಅಧಿಕಾರ ನೀಡುತ್ತೇವೆ ಎಂದು ಕೈಕೊಡುವುದು ಇವೆಲ್ಲ ಅಪ್ಪ-ಮಕ್ಕಳ ಜಾಯಮಾನ. ಈ ಜನ್ಮದಲ್ಲಿ ನನ್ನ ಮುಖ್ಯಮಂತ್ರಿ ಪಟ್ಟ ಕಸಿಯಲು ನಿಮ್ಮಿಂದ ಸಾಧ್ಯವಿಲ್ಲ. ಅಷ್ಟೇ ಅಲ್ಲ ನಿಮ್ಮ ಅಡ್ರೆಸ್ ಇಲ್ಲದ ಹಾಗೆ ಮಾಡ್ತೇನೆ ಎಂದು ದೇವೇಗೌಡರಿಗೆ ಸವಾಲು ಹಾಕಿದರು.

ನಮ್ಮ ಬಣ್ಣ ಬಯಲು ಮಾಡಲು ಯಾರಿಂದ್ಲೂ ಸಾಧ್ಯವಿಲ್ಲ; ಎಚ್‌ಡಿಕೆ
ಭ್ರಷ್ಟಚಾರ ಆರೋಪದಿಂದ ರೋಸಿ ಹೋಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಪ್ಪ-ಮಕ್ಕಳ ಬಣ್ಣ ಬಯಲು ಮಾಡುವುದಾಗಿ ಗುಡುಗಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ನಮ್ಮ ಬಣ್ಣ ಬಯಲು ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಮುಖ್ಯಮಂತ್ರಿಗಳೇ ಪ್ರಾಕೃತಿವಾಗಿ ಹಾಗೂ ರಾಜಕೀಯವಾಗಿ ಬಣ್ಣ ಬದಲಾಯಿಸುತ್ತಾ ಇರುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.

ನಾವು ಯಡಿಯೂರಪ್ಪನವರ ವಿರುದ್ಧ ಯಾವುದೇ ವೈಯಕ್ತಿಕ ದ್ವೇಷದಿಂದ ಹೋರಾಟ ಮಾಡುತ್ತಿಲ್ಲ. ಸ್ವಜನಪಕ್ಷಪಾತ ಮತ್ತು ಅಧಿಕಾರದ ದುರುಪಯೋಗದ ವಿರುದ್ಧ ಸಮರ ಸಾರಿರುವುದಾಗಿ ಹೇಳಿದರು. ಪಾಪ...ಮುಖ್ಯಮಂತ್ರಿಗಳು ಉದ್ವೇಗಕ್ಕೆ ಒಳಗಾಗಿ ಮಾತನಾಡಿದ್ದಾರೆ. ನಮ್ಮ ಬಣ್ಣ ಬಯಲು ಮಾಡಲು ಅವರ ಹಣೆ ಬರಹದಲ್ಲಿ ಸಾಧ್ಯವಿಲ್ಲ. ನಮ್ಮ ಬಗ್ಗೆ ಏನಾದ್ರೂ ದಾಖಲೆ ಇದ್ದರೆ ಸಾರ್ವಜನಿಕವಾಗಿ ಇಡಲಿ ಚರ್ಚೆಗೆ ಸಿದ್ದ ಎಂದು ಈ ಸಂದರ್ಭದಲ್ಲಿ ಸವಾಲು ಹಾಕಿದರು.

ರಾಜ್ಯದಲ್ಲಿ ಜೆಡಿಎಸ್ ನಿರ್ನಾಮ ಮಾಡುತ್ತೇನೆ ಎಂದು ಶಪಥ ತೊಟ್ಟಿರುವ ಮುಖ್ಯಮಂತ್ರಿ ಯಡಿಯೂರಪ್ಪ ಕಾಂಗ್ರೆಸ್‌ನಿಂದ ರಕ್ಷಣೆ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ಸಂಬಂಧಿತ ಮಾಹಿತಿ ಹುಡುಕಿ