ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನಾನೇನು ಮಹಾ ಅಪರಾಧ ಮಾಡಿದ್ದೇನೆ?: ಯಡಿಯೂರಪ್ಪ (BJP | Yeddyurappa | Congress | Bagalakote | JDS)
Bookmark and Share Feedback Print
 
'ನಾನೇನೋ ಮಹಾ ಅಪರಾಧ ಮಾಡುತ್ತಿದ್ದೇನೆ ಎಂದು ಮಾಧ್ಯಮಗಳಲ್ಲಿ ಬಿಂಬಿಸುವ ಕೆಲಸ ನಿತ್ಯ ನಡೆದಿದೆ' ಎಂದು ಭಾಗ್ಯಲಕ್ಷ್ಮಿ ಯೋಜನೆ ಫಲಾನುಭವಿಗಳ ಮುಂದೆ ಹೀಗೆ ಅಲವತ್ತುಟ್ಟುಕೊಂಡವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ.

ಬಾಗಲಕೋಟ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸೀರೆ ವಿತರಣೆ ಕಾರ್ಯಕ್ರಮದಲ್ಲಿ ಭಾಗ್ಯಲಕ್ಷ್ಮಿ ತಾಯಂದಿರಲ್ಲಿ ಮೊರೆ ಹೋದ ಅವರು ಯಡಿಯೂರಪ್ಪನನ್ನು ಗೋಳು ಹೊಯ್ದುಕೊಳ್ಳುತ್ತಿರುವವರಿಗೆ ಒಳ್ಳೆಯ ಬುದ್ದಿ ಕೊಡಿ ಎಂದು ನಾಳೆಯಿಂದ ಪೂಜೆ ಮಾಡುವಾಗ ದೇವರಿಗೆ ಬೇಡಿಕೊಳ್ಳಿ ಎಂದು ವಿನಂತಿ ಮಾಡಿಕೊಂಡರು.

ಹಲವು ದಿನಗಳಿಂದ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳಿಂದ ಬೇಸತ್ತು ಹೋಗಿದ್ದೇನೆ ಎಂದ ಅವರು, ರಾಜ್ಯದ ಜನತೆ 110 ಜನ ಬಿಜೆಪಿ ಶಾಸಕರನ್ನು ಗೆಲ್ಲಿಸುವ ಬದಲಿಗೆ 120 ಜನರನ್ನಾದರೂ ಗೆಲ್ಲಿಸಿದ್ದರೆ ಐದು ವರ್ಷ ಆರಾಮವಾಗಿ ಆಳ್ವಿಕೆ ಮಾಡುತ್ತಿದ್ದೆ. ಆದರೂ ವಿರೋಧಿಗಳ ಮಾತುಗಳಿಗೆ ಬಗ್ಗದೆ, ಜಗ್ಗದೆ ಪೂರ್ಣಾವ ಆಡಳಿತ ನೀಡುವೆ ಎಂಬ ಭರವಸೆ ನೀಡಿದರು.

ರಾಜ್ಯದ ಸಂಪತ್ತು ಲೂಟಿ ಆಗುವುದನ್ನು ನಿಲ್ಲಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಅದಿರು ರಫ್ತು ನಿಷೇಧ ಕ್ರಮಕ್ಕೆ ನ್ಯಾಯಾಲಯ ಅಧಿಕೃತ ಮುದ್ರೆ ಒತ್ತುವ ಮೂಲಕ ತಮ್ಮ ಕ್ರಮಕ್ಕೆ ಒಪ್ಪಿಗೆ ಸೂಚಿಸಿದೆ. ಅದಿರು ನಿಷೇಧಗೊಳಿಸುವ ಕ್ರಮದಿಂದ ರಾಜ್ಯದ ಸಂಪತ್ತಿನ ಲೂಟಿ ನಿಂತಿದ್ದು, ರಾಜ್ಯದಲ್ಲೆ ಕೈಗಾರಿಕೆಗಳನ್ನು ಸ್ಥಾಪಿಸುವ ಕಂಪನಿಗಳಿಗೆ ಅದಿರು ಸಾಗಣೆ ಮಾಡಿ ಕೈಗಾರಿಕೆಗಳ ಅಭಿವೃದ್ದಿಗೆ ಆದ್ಯತೆ ನೀಡಲು ಅನುಕೂಲವಾಗಿದೆ ಎಂದು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ