ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ದೆಹಲಿಗೆ ಸಚಿವರ ನಿಯೋಗ ಬರಲ್ಲ: ಸಿಎಂ ಸ್ಪಷ್ಟನೆ (Yadyurappa | Delhi | Karnataka | Devegowda)
Bookmark and Share Feedback Print
 
ಬೆಂಬಲಿಗ ಸಚಿವರೊಂದಿಗೆ ಸಿಎಂ ನಿವಾಸದಲ್ಲಿ ಇಂದು ಬೆಳಗ್ಗೆ ಚರ್ಚೆ ನಡೆಸಿದ ನಂತರ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ದೆಹಲಿಗೆ ಸಚಿವರ ನಿಯೋಗ ಬರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ನಾಯಕರು ನಮ್ಮ ಜತೆಗಿದ್ದಾರೆ. ಹಾಗಾಗಿ ಯಾರೂ ಹೋಗುವ ಅಗತ್ಯವಿಲ್ಲ ಎಂದವರು ಸ್ಪಷ್ಟ ಪಡಿಸಿದರು. ಮಾತು ಮುಂದುವರಿಸಿದ ಅವರು, ಇಂದು ನಡೆದ ಸಭೆಯಲ್ಲಿ ರಾಜ್ಯ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಪುತ್ರರ ಭೂ ಹಗರಣದಿಂದಾಗಿ ಯಡ್ಡಿ ಕುರ್ಚಿ ಇದೀಗ ಅನಿಶ್ಚಿತತೆಯಲ್ಲಿದೆ. ದೆಹಲಿಯಲ್ಲಿ ನಡೆಯಲ್ಲಿರುವ ವರಿಷ್ಠರ ಸಭೆಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಸ್ಪಷ್ಟ ತೀರ್ಮಾನ ಹೊರಬರುವ ಸಾಧ್ಯತೆಯಿದೆ.

ಗೌಡರ ವಿರುದ್ಧ ಗುಡುಗು...
ಅದೇ ಹೊತ್ತಿಗೆ ದೇವೇಗೌಡ ಮತ್ತು ಕುಮಾರಸ್ವಾಮಿ ವಿರುದ್ಧ ಸಿಎಂ ಗುಡುಗಿದ್ದಾರೆ. ದೇವೇಗೌಡರ ಕಿತಾಪತಿ ಹೊಸತೇನಲ್ಲ. ಈ ಹಿಂದಿನ ಸಿಎಂಗಳಿಗೂ ಇಂತಹ ತಂತ್ರ ಹಣೆದಿದ್ದರು. ಅಧಿಕಾರದಲ್ಲಿ ಅಪ್ಪ ಮಕ್ಕಳು ಇರಬೇಕೆಂದು ಅವರ ದುರಾಸೆ. ಆದರೆ ಯಾವುದೇ ತಂತ್ರಗಳು ಫಲಿಸಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಜೆಡಿಎಸ್ ಪೂರ್ಣ ನಿರ್ನಾಮ ಮಾಡಲು ಪಣತೊಟ್ಟಿದ್ದೇನೆ. ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಮಾತ್ರ ಉಳಿಯಬೇಕು. ಜೆಡಿಎಸ್‌ನಿಂದ ಅಭಿವೃದ್ಧಿಗೆ ಮಾರಕವಾಗಿದೆ ಎಂದವರು ಪ್ರಹಾರ ನಡೆಸಿದರು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ