ಯಾವಾಗ ಮುಖ್ಯಮಂತ್ರಿ ಪದತ್ಯಾಗ ಕಾಲ ಸನ್ನಿಹಿತವಾಯಿತೋ ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸಿಎಂ ಬೆಂಬಲಿಗ ಶಾಸಕರು ದೆಹಲಿಗೆ ದೌಡಾಯಿಸಲು ನಿರ್ಧರಿಸಿದ್ದಾರೆ.
ಸಚಿವರಾದ ಅಶೋಕ್, ಆಚಾರ್ಯ, ಉದಾಸಿ, ನಿರಾಣಿ, ರಾಮ್‌ದಾಸ್, ಬಚ್ಚೇಗೌಡ ಮತ್ತು ಸೋಮಣ್ಣ ದೆಹಲಿಗೆ ತೆರಳಿ ಪಕ್ಷದ ಹೈಕಮಾಂಡ್‌ರನ್ನು ಮನವೊಳಿಸುವ ಪ್ರಯತ್ನ ನಡೆಸಲಿದ್ದಾರೆ. ಯಡ್ಡಿಯೇ ನಮ್ಮ ನಾಯಕ. ನಾಯಕತ್ವ ಬದಲಾವಣೆ ಅಸಾಧ್ಯ ಎಂಬ ಪಟ್ಟುಹಿಡಿಯುವ ಸಾಧ್ಯತೆಯಿದೆ.
ನನ್ನ ಜತೆ ಯಾವ ಸಚಿವರು ಅಥವಾ ಶಾಸಕರು ಬರಲ್ಲ ಎಂದು ಬೆಳಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದರು. ಆದರೆ ಸಿಎಂ ರಾಜಿನಾಮೆ ಹೈಕಮಾಂಡ್ ಬಯಸಿದ್ದರ ಹಿನ್ನಲೆಯಲ್ಲಿ ಸ್ವಇಚ್ಚೆಯಿಂದ ಸಚಿವರೆಲ್ಲರು ದೆಹಲಿಗೆ ತೆರಳುತ್ತಿದ್ದಾರೆ.
ನಿತಿನ್ ಗಡ್ಕರಿ ಅವರನ್ನು ಮೊದಲು ಭೇಟಿ ಮಾಡಲಿರುವ ಸಚಿವರು ನಂತರ ಅಗತ್ಯ ಬಿದ್ದಲ್ಲಿ ಅಡ್ವಾಣಿ ಮತ್ತು ಸುಷ್ಮಾ ಸ್ವರಾಜ್ ಭೇಟಿ ಮಾಡುವ ಸಾಧ್ಯತೆಯಿದೆ.
ಇದೀಗ ಸಿಎಂ ಕುರ್ಚಿ ಉಳಿಸುವ ಅಂತಿಮ ಪ್ರಯತ್ನವಾಗಿ ಸಂಖ್ಯಾ ಬಲದ ಮೂಲಕ ಹೈಕಮಾಂಡ್ ಮನವರಿಕೆ ಮಾಡಲು ಸಿಎಂ ಯತ್ನಿಸಲಿದ್ದಾರೆ.