ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಹೈ ಡ್ರಾಮಾ : ಈಗೇನಾಯ್ತು, ಇಂದೇನಾಯ್ತು? ಕ್ಲಿಕ್ ಮಾಡಿ (Yaddyurappa | BJP Government | Karnataka Crisis | CM | Chief Minister)
Bookmark and Share Feedback Print
 
ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕುರ್ಚಿಯಿಂದ ಕೆಳಗಿಳಿಸಿಯೇ ಸಿದ್ಧ ಎಂದು ಪಟ್ಟು ಹಿಡಿದಿರುವ ಪ್ರತಿಪಕ್ಷಗಳು ಹಾಗೂ ಬಿಜೆಪಿಯೊಳಗಿರುವ ಹಿತಶತ್ರುಗಳ ಒತ್ತಡಕ್ಕೆ ಸಿಲುಕಿರುವ ಸಿಎಂ ಅವರು ರಾಜೀನಾಮೆ ನೀಡ್ತಾರೆಯೇ, ನೀಡಿದ್ರೆ ಯಾವಾಗ ನೀಡ್ತಾರೆ, ಏನಾದ್ರೂ ಷರತ್ತುಗಳಿವೆಯೇ ಎಂಬಿತ್ಯಾದಿ ಊಹಾಪೋಹಗಳ ನಡುವೆ, ಕ್ಷಣ ಕ್ಷಣ ಬದಲಾಗುತ್ತಿರುವ ಬೆಳವಣಿಗೆಗಳು, ಹೇಳಿಕೆಗಳು ಇಲ್ಲಿವೆ:

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

6.55 ಯಡಿಯೂರರಪ್ಪ ಅವರನ್ನು ಭೇಟಿಯಾಗದೆ ನಾಗಪುರಕ್ಕೆ ತೆರಳಿದ ನಿತಿನ್ ಗಡ್ಕರಿ. ಯಡಿಯೂರಪ್ಪ ಜೊತೆ ಮಾತುಕತೆ ನಡೆಸುವಂತೆ ಅರುಣ್ ಜೇಟ್ಲಿಗೆ ಸೂಚಿಸಿ ನಿರ್ಗಮಿಸಿದ ಗಡ್ಕರಿ.

6,35 ಕರ್ನಾಟಕ ಭವನದಲ್ಲಿ ಕಾಣಿಸಿಕೊಂಡ ಯಡಿಯೂರಪ್ಪ. ರಾಜೀನಾಮೆ ಪ್ರಶ್ನೆಯೇ ಇಲ್ಲ ಎಂದರು. ಯಾರು ಕೂಡ ರಾಜೀನಾಮೆಗೆ ಕೋರಿಲ್ಲ ಎಂದೂ ಸ್ಪಷ್ಟಪಡಿಸಿದರು ಸಿ.ಎಂ. ಇಂದು ರಾಜ್ಯದ ಮುಖಂಡರೊಂದಿಗೆ ಮಾತುಕತೆ ನಡೆಸಿ, ಬಿಜೆಪಿ ವರಿಷ್ಠರನ್ನು ಭೇಟಿಯಾಗಿ ಚರ್ಚೆ ನಡೆಸುತ್ತೇನೆ ಎಂದು ವಿವರ ನೀಡಿದರು. ಸಹಜ ಮುಖದಿಂದ, ಆತ್ಮವಿಶ್ವಾಸದಿಂದಲೇ ಮಾತನಾಡಿ, ರಾಜೀನಾಮೆ ನೀಡುವ ಸ್ಥಿತಿಯೇ ಉದ್ಭವಿಸಿಲ್ಲ ಎಂದರು. ನಿವೃತ್ತ ನ್ಯಾಯಮೂರ್ತಿ ಅವರಿಂದ ಭೂಹಗರಣದ ತನಿಖೆ ನಡೆಯುತ್ತಿದೆ ಎಂದರು ಯಡಿಯೂರಪ್ಪ.

6.25 ಮರು ಕ್ಷಣವೇ, ಯಡಿಯೂರಪ್ಪ ಎಲ್ಲಿದ್ದಾರೆಂಬುದೇ ಗೊತ್ತಿಲ್ಲ ಎನ್ನುತ್ತಿವೆ ಮೂಲಗಳು.

6.20 ಬಿಜೆಪಿ ಹಿರಿಯ ಮುಖಂಡ ಅರುಣ್ ಜೇಟ್ಲಿ ಜೊತೆ ಭೇಟಿ ಮಾಡಿದ ಬಳಿಕ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಜೊತೆ ಯಡಿಯೂರಪ್ಪ ಚರ್ಚೆ ನಡೆಸುತ್ತಾರೆ ಎಂಬ ಬಗ್ಗೆ ಊಹಾಪೋಹ.

6.10 ವಿಮಾನ ನಿಲ್ದಾಣದಿಂದ ಬಂದ ಯಡಿಯೂರಪ್ಪ ಎಲ್ಲಿ ಹೋದರು ಎಂಬುದು ಗೊತ್ತಾಗದೆ ಕೆಲವು ಕ್ಷಣ ಗಲಿಬಿಲಿ. ಇತ್ತೀಚೆಗೆ ಬಂದ ಮಾಹಿತಿ ಪ್ರಕಾರ, ಅವರು ಕರ್ನಾಟಕ ಭವನದಲ್ಲಿ ಕಾಣಿಸಿಕೊಂಡರು.

5.00 ಬೆಂಗಳೂರಿನಲ್ಲಿ ರಾಜಭವನಕ್ಕೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಜೊತೆಗೆ ತೆರಳಿದ ಕಾಂಗ್ರೆಸ್ ಮುಖಂಡರು, ಯಡಿಯೂರಪ್ಪ ಸರಕಾರ ವಜಾಗೊಳಿಸಲು ಒತ್ತಾಯಿಸಿದರು.

4.25 ಪ್ರಧಾನ ಮಂತ್ರಿ ಜೊತೆ ವಿಮಾನದಲ್ಲಿ ದೆಹಲಿಯಲ್ಲಿ ಬಂದಿಳಿದ ಸಿಎಂ ಯಡಿಯೂರಪ್ಪ. ಅರುಣ್ ಜೇಟ್ಲಿ, ವೆಂಕಯ್ಯ ನಾಯ್ದು ಮತ್ತು ಗಡ್ಕರಿ ಜೊತೆ ಸಮಾಲೋಚನೆ ನಿರೀಕ್ಷೆ.

4.00 ಯಡಿಯೂರಪ್ಪ ಉಳಿಸಲು ಬೆಂಬಲಿಗರ ಕಸರತ್ತು. ವೆಂಕಯ್ಯ ನಾಯ್ಡು ನಿವಾಸದಲ್ಲಿ ನಾಯಕರ ಚರ್ಚೆ. ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಪಟ್ಟು ಹಿಡಿದಿದೆ.

3.00 ಮುಂದುವರಿದ ಬಿಜೆಪಿ ಮುಖಂಡರ ಸಭೆ, ಸಮಾಲೋಚನೆ

2.20 ವೈಷ್ಣೋದೇವಿ ದರ್ಶನಕ್ಕೆ ಮೊದಲೇ ನವದೆಹಲಿಯಲ್ಲಿ ಬಿಜೆಪಿ ವರಿಷ್ಠರ ಭೇಟಿಗೆ ಯಡಿಯೂರಪ್ಪ ತೀರ್ಮಾನ. ರಾಜೀನಾಮೆ ಕೊಡುತ್ತಾರೆಯೇ ಎಂಬ ಊಹಾಪೋಹಕ್ಕೆ ಗರಿ.

2.10 2008ರಲ್ಲಿ 20-20 ಸರಕಾರ ಉರುಳಿದಾಗ ರಾಜೀನಾಮೆ ಕೊಡುವ ಮುನ್ನ ಯಡಿಯೂರಪ್ಪ ವೈಷ್ಣೋದೇವಿಯ ದರ್ಶನ ಪಡೆದಿದ್ದರು. ಇಂದು ಕೂಡ ವೈಷ್ಣೋದೇವಿ ದರ್ಶನಕ್ಕೆ ಹೊರಟಿದ್ದಾರೆ.

2.00 ಪುಟ್ಟಪರ್ತಿ ಸಾಯಿ ಬಾಬಾ ಜನ್ಮ ದಿನೋತ್ಸವದಲ್ಲಿ ಭಾಗವಹಿಸಲು ಬಂದಿದ್ದ ಪ್ರಧಾನ ಮಂತ್ರಿ ಡಾ.ಮನಮೋಹನ್ ಸಿಂಗ್ ಅವರ ಜೊತೆಗೇ ಅವರ ವಿಮಾನದಲ್ಲೇ ಸಿಎಂ ಯಡಿಯೂರಪ್ಪ ಅವರು ನವದೆಹಲಿಗೆ ಹೊರಟರು ಎಂದು ಮಾಹಿತಿ ನೀಡಿದರು ವಿಧಾನ ಪರಿಷತ್ ಸದಸ್ಯ ಲೇಹರ್ ಸಿಂಗ್.

1.30 ಪುಟ್ಟಪರ್ತಿಯಿಂದ ನವದೆಹಲಿಗೆ ಹೋಗಲು ಯಡಿಯೂರಪ್ಪ ತೀರ್ಮಾನ

12.30 ಮೂಲಗಳ ಪ್ರಕಾರ, ಯಡಿಯೂರಪ್ಪ ತಮ್ಮ ಆಪ್ತರಾದ ಆಚಾರ್ಯ ಕೈಯಲ್ಲೇ ರಾಜೀನಾಮೆ ಪತ್ರ ಕೊಟ್ಟು ಕಳುಹಿಸಿದ್ದಾರೆ. ಎಲ್ಲ ರೀತಿಯ ಸಂಧಾನಗಳನ್ನು ಮಾಡುವಂತೆ ಅವರಿಗೆ ಸೂಚಿಸಿದ್ದಾರೆ. ಕೊಟ್ಟ ಕೊನೆಗೆ ಏನೂ ಆಗದಿದ್ದರೆ, ರಾಜೀನಾಮೆ ಒಪ್ಪಿಸಿಬಿಡಿ ಎಂಬ ಸಂದೇಶದೊಂದಿಗೆ. ಏನೇ ಇದ್ದರೂ ಸಂಜೆ ಒಂದು ಮಟ್ಟದ ನಿರ್ಧಾರ ಪ್ರಕಟವಾಗಬಹುದು.

ಮಧ್ಯಾಹ್ನ ಏನು ನಡೆಯಿತು... ಮೇಲೆ ನೋಡಿ..

12.16 ಯಡಿಯೂರಪ್ಪ ಸಂಜೆ ನವದೆಹಲಿಗೆ ಬಂದು ಮಾತುಕತೆ ನಡೆಸಲಿದ್ದಾರೆ ಎಂದ ವಿ.ಎಸ್.ಆಚಾರ್ಯ.

12.15 ಯಡಿಯೂರಪ್ಪ ಬದಲಾವಣೆ ಪ್ರಸ್ತಾವನೆ ಇಲ್ಲ, ಅವರಿಗೆ ಹೈಕಮಾಂಡ್ ಗಡುವು ಕೂಡ ನೀಡಿಲ್ಲ ಎಂದು ಸ್ಪಷ್ಟಪಡಿಸಿದ ವಿ.ಎಸ್.ಆಚಾರ್ಯ.

12.13 ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ನಿವಾಸದಲ್ಲಿ ಗಡ್ಕರಿ ಜೊತೆ ಮಾತುಕತೆ ನಡೆಸಿ ಹೊರಬಂದ ಸಚಿವ ವಿ.ಎಸ್.ಆಚಾರ್ಯ ಸುದ್ದಿಗೋಷ್ಠಿ.

12.15 ಸಂಸತ್‌ನಲ್ಲಿ ಮುಂದುವರಿದ ಗದ್ದಲ. ಕಲಾಪ ನಾಳೆಗೆ ಮುಂದೂಡಿಕೆ. ಯಡಿಯೂರಪ್ಪ ಪ್ರಕರಣಕ್ಕೆ ಮತ್ತಷ್ಟು ಕಾಲಾವಕಾಶ ದೊರೆತಂತಾಯಿತು.

12.10 ಬೆಂಗಳೂರಲ್ಲಿ ಸಿದ್ದರಾಮಯ್ಯ ಪತ್ರಿಕಾಗೋಷ್ಠಿ: ಸುರೇಶ್ ಕುಮಾರ್, ಜಗದೀಶ್ ಶೆಟ್ಟರ್, ಕಟ್ಟಾ ಸುಬ್ರಹ್ಮಣ್ಯ, ಈಶ್ವರಪ್ಪ, ಎಲ್ಲರೂ ಭೂಹಗರಣದಲ್ಲಿ ಭಾಗಿ.

12.00 ಪುಟ್ಟಪರ್ತಿಯಿಂದ ನೇರವಾಗಿ ವಿಶೇಷ ವಿಮಾನದಲ್ಲಿ ವೈಷ್ಣೋದೇವಿಗೆ ತೆರಳಿದ ಯಡಿಯೂರಪ್ಪ.

11.15 ಪುಟ್ಟಪರ್ತಿಯಲ್ಲೇ ಉಳಿದ ಯಡಿಯೂರಪ್ಪ, ಸತ್ಯ ಸಾಯಿ ಬಾಬಾ ಸಮಾರಂಭದಲ್ಲಿ ಭಾಗಿ.

11.10 2ಜಿ ಹಗರಣಕ್ಕೆ ಜಂಟಿ ಸಂಸದೀಯ ಸಮಿತಿ ರಚಿಸಿ ತನಿಖೆಗೆ ಆಗ್ರಹ, ಪಟ್ಟು ಸಡಿಲಿಸದ ಪ್ರತಿಪಕ್ಷಗಳು

11.10 ಸಂಸತ್ತಿನಲ್ಲಿ ಗದ್ದಲ: ಬಿಕ್ಕಟ್ಟು ನಿವಾರಣೆಗೆ ಸರ್ವ ಪಕ್ಷಗಳ ಸಭೆಗೆ ಕರೆದ ಪ್ರಣಬ್ ಮುಖರ್ಜಿ. ಮಧ್ಯಾಹ್ನದ ಭೋಜನಕ್ಕೆ ಆಹ್ವಾನ.

11.10 ಕಾಂಗ್ರೆಸ್ ಹಗರಣಗಳು ಮತ್ತು ಬಿಜೆಪಿ ಹಗರಣ : ಸಂಸತ್ತಿನಲ್ಲಿ ಭಾರೀ ಕೋಲಾಹಲ, ಉಭಯ ಸದನಗಳೂ 12 ಗಂಟೆವರೆಗೆ ಮುಂದೂಡಿಕೆ.

11.05 ನಿತಿನ್ ಗಡ್ಕರಿ ಜೊತೆ ರಾಜ್ಯ ಬಿಜೆಪಿ ನಾಯಕರಿಂದ ಸಮಾಲೋಚನೆ, ಸಿಎಂ ತಲೆದಂಡ ಮಾಡದಂತೆ ಮನವೊಲಿಕೆ ಯತ್ನ.

11.00 ಸಂಸತ್ ಅಧಿವೇಶನ ಆರಂಭಕ್ಕೆ ಕ್ಷಣ ಗಣನೆ

11.02 ಯಡಿಯೂರಪ್ಪ ರಾಜೀನಾಮೆ ಕೊಡಲ್ಲ, ಸಂಸತ್ತಿನಲ್ಲಿ ಗಲಾಟೆ ಮಾಡ್ತೀವಿ ಎಂದ ಸಂಸದ ಎಚ್.ಡಿ.ಕುಮಾರಸ್ವಾಮಿ

11.00 ರಾಜೀನಾಮೆಗೆ ಯಡಿಯೂರಪ್ಪರಿಗೆ ನೀಡಿದ ಗಡುವು ಮುಕ್ತಾಯ. ಸಿಎಂ ಅವರಿಂದ ಕೇಂದ್ರಕ್ಕೆ ಯಾವುದೇ ಮಾತಿನ ಸುಳಿವಿಲ್ಲ.

10.47 ಹನ್ನೊಂದು ಗಂಟೆಗೆ ಡೆಡ್‌ಲೈನ್ ಎಂಬುದು ಊಹಾಪೋಹ, ಬೇರೆ ಪಕ್ಷಗಳು ರಾಜೀನಾಮೆ ಕೇಳ್ತವೆ ಎಂಬ ಕಾರಣಕ್ಕಾಗಿ ಯಡಿಯೂರಪ್ಪರನ್ನು ರಾಜೀನಾಮೆ ಕೊಡುವಂತೆ ಯಾಕೆ ಬಿಜೆಪಿ ಕೇಳುತ್ತದೆ- ಪ್ರಶ್ನಿಸಿದರು ಧನಂಜಯ ಕುಮಾರ್

10.47 ರಾಜೀನಾಮೆ ಕೇಳುವ ಕುರಿತು ಯಾವುದೇ ತೀರ್ಮಾನವಾಗಿಲ್ಲ. ಪುಟ್ಟಪರ್ತಿಗೆ ಹೋಗಿರುವ ಮುಖ್ಯಮಂತ್ರಿ ದೆಹಲಿಗೆ ಬಂದು ವರಿಷ್ಠರೊಂದಿಗೆ ಮಾತುಕತೆ ನಡೆಸಿದ ಬಳಿಕವೇ ಅಂತಿಮ ನಿರ್ಧಾರ. ಇದುವರೆಗೆ ಯಾವುದೇ ನಿರ್ಧಾರ ಆಗಿಲ್ಲ.

10.46 ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ ನಿವಾಸದಲ್ಲಿ ವಿ.ಎಸ್.ಆಚಾರ್ಯ, ಧನಂಜಯ ಕುಮಾರ್, ಅಶೋಕ್, ವಿ.ಎಸ್.ಆಚಾರ್ಯ ಸಿಎಂ ಉದಾಸಿ, ಸುರೇಶ್ ಅಂಗಡಿ, ಸದಾನಂದ ಗೌಡ ಮುಂದುವರಿದ ಮಾತುಕತೆ

10.45 ಯಡಿಯೂರಪ್ಪ ಅವರಿಗೆ ಹಸ್ತಾಂತರ ಮಾಡದಿರಲು ಇದೇ ಕಾರಣ ಎಂದು ಬೆನ್ನುತಟ್ಟಿಕೊಂಡ ಜೆಡಿಎಸ್. ಯಡಿಯೂರಪ್ಪ ಈ ರೀತಿ ಮಾಡ್ತಾರೆ ಎಂದು ತಿಳಿದ್ದೇ ನಾವು ಅಧಿಕಾರ ಹಸ್ತಾಂತರಿಸಲಿಲ್ಲ ಎಂದರು ಕುಮಾರಸ್ವಾಮಿ.

10.45 ಬಿಜೆಪಿ ಅಂದ್ರೆ ಯಡಿಯೂರಪ್ಪ, ಯಡಿಯೂರಪ್ಪ ಅಂದ್ರೆ ಬಿಜೆಪಿ ಎಂಬಂತಾಗಿದೆ. ಅವರು ಬಡಪೆಟ್ಟಿಗೆ ರಾಜೀನಾಮೆ ನೀಡಲಾರರು ಎಂದ ಎಚ್.ಡಿ.ಕುಮಾರಸ್ವಾಮಿ.

10.40 ಸಿಎಂ ಯಾರಾಗಬಹುದು ಎಂಬ ಬಗ್ಗೆ ಬಿಜೆಪಿ ಮಂದಿಯೊಳಗೆ ಚರ್ಚೆಗೆ ಹೆಚ್ಚಿದ ತೀವ್ರತೆ. ಅನಂತ್ ಕುಮಾರ್, ಜಗದೀಶ್ ಶೆಟ್ಟರ್, ಸುರೇಶ್ ಕುಮಾರ್, ಅಶೋಕ್ ಹೆಸರುಗಳು ಮುಂಚೂಣಿಯಲ್ಲಿ.

10.35 ಅಶೋಕ್ ಹೇಳಿಕೆ: ಭೂಹಗರಣ ವಿಪಕ್ಷಗಳ ತಂತ್ರ, ಡೆಡ್ ಲೈನ್ ಕೊಟ್ಟಿದ್ದಾರೆ ಎಂಬುದೆಲ್ಲಾ ನನಗೆ ಗೊತ್ತಿಲ್ಲ. ಇವತ್ತು ನಾಯಕರೊಂದಿಗೆ ಮಾತುಕತೆ ನಡೆಯಲಿದೆ. ನಾಳೆಯೊಳಗೆ ಎಲ್ಲವೂ ಸ್ಪಷ್ಟವಾಗುತ್ತದೆ.

10.30 ರಾಜೀನಾಮೆ ಕೊಡಬೇಕಿದ್ದರೆ, ರೆಡ್ಡಿ ಸಹೋದರರನ್ನು ಸಂಪುಟದಿಂದ ಹೊರಗಿಡಬೇಕು, ಅನಂತ್ ಕುಮಾರ್, ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಪಟ್ಟದಿಂದ ದೂರವಿರಬೇಕು, ತಾವು ಹೇಳಿದವರೇ ಮುಖ್ಯಮಂತ್ರಿಯಾಗಬೇಕು ಎಂದು ಯಡಿಯೂರಪ್ಪ ಷರತ್ತು ಮುಂದಿಟ್ಟಿದ್ದಾರೆ ಎಂಬ ವರದಿಗಳು.

10.20 ಸಂಕಷ್ಟದಲ್ಲಿ ಹೈಕಮಾಂಡ್, ಯಡಿಯೂರಪ್ಪ ರಾಜೀನಾಮೆ ಕೊಟ್ಟರೆ ಸಂಸತ್ ಅಧಿವೇಶನದಲ್ಲಿ ಯುಪಿಎ ವಿರುದ್ಧ ಮತ್ತಷ್ಟು ಬಲವಾಗಿ ಹರಿಹಾಯಬಹುದು ಎಂಬ ಚಿಂತನೆ

10.10 ಸಿಎಂ ತಲೆದಂಡವಿಲ್ಲ, ನಾಳೆಯೊಳಗೆ ಎಲ್ಲವೂ ಸರಿಯಾಗುತ್ತದೆ, ವಿಪಕ್ಷಗಳಿಂದ ಅನಗತ್ಯ ಗೊಂದಲ ಸೃಷ್ಟಿ : ದೆಹಲಿಯಲ್ಲಿ ವಿ,ಎಸ್.ಆಚಾರ್ಯ ಹೇಳಿಕೆ

10.00 ಯಡಿಯೂರಪ್ಪ ರಾಜೀನಾಮೆಗೆ ಹೈಕಮಾಂಡ್ ಕೇಳಿಲ್ಲ, ಅವರೇ ಮುಂದುವರೀತಾರೆ: ದೆಹಲಿಯಲ್ಲಿ ಆರ್.ಅಶೋಕ್ ಹೇಳಿಕೆ

9.10 ಸಂಜೆ ದೆಹಲಿಗೆ ಹೋಗಿ ವರಿಷ್ಠರೊಂದಿಗೆ ಮಾತುಕತೆ ನಡೆಸುತ್ತೇನೆ ಎಂಬ ಸಂದೇಶ ರವಾನಿಸಿದ ಯಡಿಯೂರಪ್ಪ

9.00 ಪುಟ್ಟಪರ್ತಿ ಸತ್ಯ ಸಾಯಿ ಬಾಬಾ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಲು ಪುಟ್ಟಪರ್ತಿಗೆ ತೆರಳಿದ ಯಡಿಯೂರಪ್ಪ

9.00 ಕೇಂದ್ರೀಯ ಬಿಜೆಪಿ ನಾಯಕರೊಂದಿಗೆ ಸಿಎಂ ಬೆಂಬಲಿಗರಾದ ವಿ.ಎಸ್.ಆಚಾರ್ಯ, ಆರ್.ಅಶೋಕ್, ಬಸವರಾಜ ಬೊಮ್ಮಾಯಿ, ಸದಾನಂದ ಗೌಡ ಮುಂತಾದವರಿಂದ ಮಾತುಕತೆ, ಸಿಎಂ ಕುರ್ಚಿ ಉಳಿಸಲು ಪ್ರಯತ್ನ.

8.00 ಸಂಸತ್ ಅಧಿವೇಶನ ಆರಂಭವಾಗುವುದರೊಳಗೆ ರಾಜೀನಾಮೆ ನೀಡಿ ಎಂದು ಮುಖ್ಯಮಂತ್ರಿಗೆ ಸೂಚಿಸಿದ ಬಿಜೆಪಿ ಹೈಕಮಾಂಡ್
ಭಾನುವಾರ ರಾತ್ರಿ: ಹೈಕಮಾಂಡ್ ನಿರ್ಧಾರಕ್ಕೆ ಬದ್ಧ, ಅವರು ಒಳ್ಳೆಯ ತೀರ್ಮಾನ ಕೈಗೊಳ್ಳುತ್ತಾರೆಂಬ ಭರವಸೆ ನನಗಿದೆ.

ನಿನ್ನೆ ಸಂಜೆಯಿಂದಲೂ ಜನಾರ್ದನ ರೆಡ್ಡಿ ರಾಜ್ಯಪಾಲರಿಗೆ ಆಪ್ತರಲ್ಲೊಬ್ಬ, ಕಾನೂನು ಸಲಹೆಗಾರ ಎಂದು ಹೇಳಲಾಗುತ್ತಿರುವ ಅಶೋಕ್ ಶರ್ಮಾ ಜೊತೆ ಯಡಿಯೂರಪ್ಪ ಅವರನ್ನು ಕಿತ್ತೆಸೆಯುವ ಡೀಲ್ ಮಾಡುತ್ತಿರುವ ವೀಡಿಯೋ ಪ್ರಸಾರ.
ಸಂಬಂಧಿತ ಮಾಹಿತಿ ಹುಡುಕಿ