ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬೆದರಿಸಿ ಕುರ್ಚಿಯಿಂದ ಇಳಿಸಲು ಸಾಧ್ಯವಿಲ್ಲ: ಯಡಿಯೂರಪ್ಪ (BJP | Yeddyurappa | Congress | JDS | Land scam | Gadkari)
Bookmark and Share Feedback Print
 
'ನನ್ನ ಬೆದರಿಸಿ ಸಿಎಂ ಕುರ್ಚಿಯಿಂದ ಇಳಿಸುವುದು ಸಾಧ್ಯವಿಲ್ಲ. ಯಾರ ಬೆದರಿಕೆಗೂ ಹೆದರುವವ ನಾನಲ್ಲ' ಹೀಗೆಂದು ಹೇಳಿದವರು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ತಮ್ಮ ಕುಟುಂಬದ ಮೇಲೆ ಅನಗತ್ಯ ಆಪಾದನೆಗಳನ್ನು ಮಾಡುವ ಮೂಲಕ ಮುಖ್ಯಮಂತ್ರಿ ಸ್ಥಾನದಿಂದ ತಮ್ಮನ್ನು ಕೆಳಗಿಳಿಸುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ಭೂ ಹಗರಣದಲ್ಲಿ ನಿಜವಾದ ತಪ್ಪಿತಸ್ಥರು ಯಾರು ಎಂಬುದು ರಾಜ್ಯದ ಜನತೆಗೆ ಗೊತ್ತಾಗಲಿ ಎನ್ನುವ ಉದ್ದೇಶದಿಂದಲೆ ಸಮಗ್ರ ತನಿಖೆಗೆ ಮುಂದಾಗಿದ್ದು, ರಾಜ್ಯದಲ್ಲಿನ ಭೂ ಹಗರಣಗಳ ಕುರಿತು ತನಿಖೆ ನಡೆಸಲು ಇನ್ನೆರಡು ದಿನಗಳಲ್ಲಿ ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡಲಾಗುವುದು. ತನಿಖೆಯ ನಂತರ ಸತ್ಯ ಸಂಗತಿ ಹೊರಬರಲಿದೆ ಎಂದು ಹೇಳಿದರು.

ಹುನಗುಂದ ತಾಲೂಕು ನಂದನೂರು ಗ್ರಾಮದಲ್ಲಿ ಸಂತ್ರಸ್ತರಿಗಾಗಿ ನಿರ್ಮಿಸಲಾಗಿರುವ ಆಸರೆ ಮನೆಗಳ ವಿತರಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ನಂತರ ರಾಜ್ಯದ ಇತಿಹಾಸದಲ್ಲೆ ಮೊದಲ ಬಾರಿಗೆ ಪ್ರತಿವರ್ಷ ಪ್ರವಾಹಕ್ಕೆ ತುತ್ತಾಗುತ್ತಿದ್ದ ಗ್ರಾಮಗಳ ಜನತೆಯನ್ನು ಎತ್ತರದ ಪ್ರದೇಶಕ್ಕೆ ಸ್ಥಳಾಂತರಿಸಲು ತಮ್ಮ ಸರಕಾರ ವರ್ಷದಲ್ಲಿ ಆಸರೆ ಮನೆ ನಿರ್ಮಿಸಿಕೊಟ್ಟರೂ ಟೀಕೆ ನಿಂತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾಟ ಮಂತ್ರದಿಂದ ಅಭಿವೃದ್ಧಿ ಆಗೊಲ್ಲ ಎನ್ನುವ ಸತ್ಯದ ಅರಿವಿದ್ದರೂ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ತಮ್ಮ ಕಾಲೆಳೆಯುವ ಪ್ರಯತ್ನ ನಿತ್ಯ ನಡೆದಿದೆ. ರಾಜ್ಯವನ್ನು ಲೂಟಿ ಮಾಡಿದವರು ಯಾರೋ ಆರೋಪ ಎದುರಿಸಬೇಕಾದವರು ಇನ್ಯಾರೋ ಎನ್ನುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ