ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಹಗರಣದಿಂದ ರಾಜ್ಯಕ್ಕೆ ಅಪಖ್ಯಾತಿ: ಎಸ್.ಎಂ.ಕೃಷ್ಣ (Krishan | Mysore | UPA | JDS | Congress | Yeddyurappa)
Bookmark and Share Feedback Print
 
ರಾಜ್ಯ ಬಿಜೆಪಿ ಸರಕಾರದ ಮಿತಿ ಮೀರಿದ ಭ್ರಷ್ಟಚಾರದಿಂದ ಕರ್ನಾಟಕ ಅಪಖ್ಯಾತಿಗೆ ಒಳಗಾಗುವಂತಾಗಿದೆ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಕಟುವಾಗಿ ಟೀಕಿಸಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ನಗರದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಆಶ್ರಮಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸರಕಾರದ ಚುಕ್ಕಾಣಿ ಹಿಡಿದಿರುವ ಮುಖ್ಯಸ್ಥರೇ ಲಜ್ಜೆಗೆಟ್ಟ ರೀತಿಯಲ್ಲಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿರುವುದು ಹಾಗೂ ಅದರಲ್ಲಿ ನೇರ ಪಾಲುದಾರರಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಇದು ಯಾವುದೇ ಸರಕಾರಕ್ಕೆ ಶೋಭೆ ತರುವುದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಹಿಂದೆ ಕರ್ನಾಟಕ ಸರಕಾರ ಮತ್ತು ಆಡಳಿತ ದೇಶದ ಗಮನ ಸೆಳೆಯುತಿತ್ತು. ಬೆಂಗಳೂರಿನ ಮೂಲಕ ಭಾರತವನ್ನು ವಿಶ್ವವೇ ಗಮನಿಸುತಿತ್ತು. ಆದರೆ ಇವತ್ತು ಬೆಂಗಳೂರು ಮಲೀನಗೊಂಡಿದ್ದು, ಅವನತಿಯತ್ತ ಸಾಗುತ್ತಿದೆಯಲ್ಲದೇ, ಕರ್ನಾಟಕ ತೀವ್ರ ಅಪಖ್ಯಾತಿಗೆ ಒಳಗಾಗಿದೆ. ರಾಜ್ಯ ಸರಕಾರದ ಆಡಳಿತ ವೈಖರಿ ಇದಕ್ಕೆ ಕಾರಣ. ಇಂಥ ಸರಕಾರವನ್ನು ಅರಿಸಿರುವ ಕನ್ನಡಿಗರು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.

ಜಾಗತಿಕವಾಗಿ ಗುರುತಿಸಿಕೊಂಡಿದ್ದ ಬೆಂಗಳೂರಿಗೆ ಇತ್ತೀಚೆಗೆ ಬಂಡವಾಳ ಬರುತ್ತಿಲ್ಲ. ಪಾರದರ್ಶಕತೆ ಇಲ್ಲದ ಅಭದ್ರ ಸರಕಾರ ಮತ್ತು ಮಿತಿ ಮೀರಿದ ಭ್ರಷ್ಟಾಚಾರದಿಂದ ಹೂಡಿಕೆದಾರರು ಹಿಂಜರಿಯುವಂತಾಗಿದೆ. ಗುಣಾತ್ಮಕ ಮತ್ತು ಭದ್ರ ಸರಕಾರವಿದ್ದಾಗ ಮಾತ್ರ ಬಂಡವಾಳ ಬರಲು ಸಾಧ್ಯ. ಯಾವ ಸರಕಾರ ಶಿಥಿಲವಾಗುತ್ತದೆಯೋ, ಭ್ರಷ್ಟಾಚಾರ ಮಿತಿ ಮೀರಿ ಬೆಳೆಯುತ್ತದೆಯೋ ಆಗ ಹೂಡಿಕೆದಾರರು ಹಿಂದೆ ಮುಂದೆ ನೋಡುತ್ತಾರೆ ಎಂದು ಕಿಡಿಕಾರಿದರು.
ಸಂಬಂಧಿತ ಮಾಹಿತಿ ಹುಡುಕಿ