ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಯಡ್ಡಿ ಪದಚ್ಯುತಗೊಳಿಸಿದ್ರೆ ಹುಷಾರ್: ಸ್ವಾಮೀಜಿಗಳ ಎಚ್ಚರಿಕೆ (Yeddyurappa | BJP | Congress | JDS | Lingayath | Land scam)
Bookmark and Share Feedback Print
 
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೇಲಿನ ಆರೋಪ ಸಾಬೀತಾಗದೆ ಅವರನ್ನು ಮುಖ್ಯಮಂತ್ರಿ ಗದ್ದುಗೆಯಿಂದ ಕೆಳಗಳಿಸಿದರೆ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಬಸವಪೀಠದ ದಯಾನಂದ ಸ್ವಾಮೀಜಿ ಎಚ್ಚರಿಕೆ ನೀಡುವ ಮೂಲಕ ವಿವಿಧ ಮಠಾಧೀಶರು ಯಡಿಯೂರಪ್ಪ ಪರ ಬೆಂಬಲಕ್ಕೆ ನಿಂತಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಭೂ ಹಗರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರು ಸಿಎಂ ಗದ್ದುಗೆಯಿಂದ ಕೆಳಗಿಳಿಯುವಂತೆ ಪಕ್ಷದ ಹೈಕಮಾಂಡ್ ನೀಡಿದ್ದ ಡೆಡ್‌ಲೈನ್ ಮುಗಿದಿದ್ದರೆ, ಮತ್ತೊಂದೆಡೆ ಲಿಂಗಾಯಿತ ಸಮುದಾಯದ ಸ್ವಾಮೀಜಿಗಳು ಯಡಿಯೂರಪ್ಪ ಅವರ ಬೆಂಬಲಕ್ಕೆ ನಿಂತಿದ್ದಾರೆ. ಯಡಿಯೂರಪ್ಪ ಅವರನ್ನು ಭೂ ಹಗರಣದ ವಿಚಾರದಲ್ಲಿಯೇ ಅಧಿಕಾರದಿಂದ ಗದ್ದುಗೆ ಕೆಳಗಿಳಿಸುವುದು ನಿಮಿತ್ತ ಮಾತ್ರ, ಇದು ಲಿಂಗಾಯಿತ ಧರ್ಮಿಯರ ಮೇಲಿನ ಆಕ್ರಮಣವಾಗಿದೆ ಎಂದು ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆಯೂ ರಾಜ್ಯದಲ್ಲಿನ ಲಿಂಗಾಯಿತ ಸಮುದಾಯದ ಮುಖ್ಯಮಂತ್ರಿಗಳನ್ನ ವ್ಯವಸ್ಥಿತ ಪಿತೂರಿ ನಡೆಸಿ ಅಧಿಕಾರದ ಗದ್ದುಗೆಯಿಂದ ಕೆಳಗಿಳಿಸಲಾಗಿತ್ತು ಎಂದು ದಯಾನಂದ ಸ್ವಾಮೀಜಿ ಆರೋಪಿಸಿದ್ದು, ಯಡಿಯೂರಪ್ಪ ಅವರನ್ನೂ ಕೂಡ ಅದೇ ರೀತಿ ಸಂಚು ನಡೆಸಿ ಅಧಿಕಾರದಿಂದ ಕೆಳಗಿಳಿಸುವ ಯತ್ನ ನಡೆಯತ್ತಿದೆ ಎಂದು ದೂರಿದರು.

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಆರೋಪ ಹೊರಿಸುತ್ತಲೇ ಇದ್ದಾರೆ. ಅವರಿಗೆ ಉತ್ತಮ ಕೆಲಸ ಮಾಡಲು ಬಿಡುತ್ತಲೇ ಇಲ್ಲ. ಮಾಜಿ ಪ್ರಧಾನಿ, ರಾಜ್ಯದ ಮುಖ್ಯಮಂತ್ರಿಯಾಗಿದ್ದ ದೇವೇಗೌಡರು ಮತ್ತು ಮಕ್ಕಳ ಷಡ್ಯಂತ್ರವೇ ಇದರ ಹಿಂದಿದೆ ಎಂದು ಆರೋಪಿಸಿದರು. ಅಪ್ಪ-ಮಕ್ಕಳಿಂದಾಗಿ ಈ ರಾಜ್ಯ ಹಾಳಾಗಿದೆ ಹೋಗಿದೆ ಎಂದು ದೂಷಿಸಿದರು.

ನಾವೇನು ಭ್ರಷ್ಟಾಚಾರದ ಬೆಂಬಲಿಗರಲ್ಲ, ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ. ಯಡಿಯೂರಪ್ಪ ಅವರು ತಪ್ಪು ಮಾಡಿದ್ದರೆ ಪಕ್ಷದ ಹೈಕಮಾಂಡ್, ಆರೆಸ್ಸೆಸ್ ಮುಖಂಡರು ಮಾರ್ಗದರ್ಶನ ನೀಡಲಿ. ಅದೇ ರೀತಿ ಆರೋಪ ಸಾಬೀತಾಗುವ ಮುನ್ನವೇ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರೆ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರೆಡ್ಡಿ, ಹೈಕಮಾಂಡ್ ವಿರುದ್ಧವೂ ವಾಗ್ದಾಳಿ:
ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಪದಚ್ಯುತಗೊಳಿಸಲು ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ರಹಸ್ಯ ಡೀಲ್ ಮಾಡಿದ ಬಗ್ಗೆ ಮಾಧ್ಯಮವೊಂದು ವರದಿ ಬಿತ್ತರಿಸಿದ್ದನ್ನೂ ನಾವು ಗಮನಿಸಿದ್ದೇವೆ ಎಂದ ದಯಾನಂದ ಸ್ವಾಮೀಜಿ, ಜನಾರ್ದನ ರೆಡ್ಡಿಗೆ ಮುಖ್ಯಮಂತ್ರಿ ಆಗಲೇಬೇಕೆಂಬ ಚಟ ಇದ್ದರೆ, ಚುನಾವಣೆಗೆ ಹೋಗಿ ಗೆದ್ದು ಬಹುಮತ ಸಾಬೀತುಪಡಿಸಲಿ. ಅದನ್ನು ಬಿಟ್ಟು ಯಾರದ್ದೊ ಹೆಗಲ ಮೇಲೆ ಕುಳಿತು ಇನ್ನೊಬ್ಬರಿಗೆ ಗುಂಡು ಹೊಡೆಯುವ ಕೆಲಸ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅದೇ ರೀತಿ ರೆಡ್ಡಿಗಳ ಮಾತು ಕೇಳಿಕೊಂಡು ಸುಷ್ಮಾ ಸ್ವರಾಜ್ ಆಗಲಿ, ಹೈಕಮಾಂಡ್‌ನ ಯಾವುದೇ ನಾಯಕರು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದರೆ ಅದರ ಪರಿಣಾಮ ಬಿಜೆಪಿ ಅನುಭವಿಸಬೇಕಾಗುತ್ತದೆ ಎಂದು ಈ ಸಂದರ್ಭದಲ್ಲಿ ಧಮಕಿ ಹಾಕಿದ್ದಾರೆ. ಯಡಿಯೂರಪ್ಪ ಭೂ ಹಗರಣದಲ್ಲಿ ಭಾಗಿ ಎಂದು ಹೇಳುವವರು ಕೂಡ ಸಾಕಷ್ಟು ಹಗರಣಗಳಲ್ಲಿ ಶಾಮೀಲಾಗಿದ್ದಾರೆ. ಅಲ್ಲದೇ ತಂದೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ಜಮೀನು ಖರೀದಿಸುವುದು ಸರಿಯಲ್ಲ ಎಂದು ಪುತ್ರ, ಸಂಸದ ರಾಘವೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡರು.

ಯಡಿಯೂರಪ್ಪ ಅವರನ್ನು ಅಧಿಕಾರದ ಗದ್ದುಗೆಯಿಂದ ಕಿತ್ತೊಗೆಯಬೇಕು ಎಂದು ದುರುದ್ದೇಶದಿಂದ ದೇವೇಗೌಡರು ಮತ್ತು ಮಕ್ಕಳು ಪ್ರಯತ್ನಿಸುತ್ತಿದ್ದಾರೆ ಎಂದು ಜ್ಞಾನಪ್ರಭು ಸಿದ್ದರಾಮ ಸ್ವಾಮೀಜಿ ತಿಳಿಸಿದ್ದಾರೆ. ಈ ಅಪ್ಪ-ಮಕ್ಕಳ ನಾಟಕ ರಾಜ್ಯದ ಜನತೆಗೆ ಗೊತ್ತಿದೆ. ಹಾಗಾಗಿ ಯಡಿಯೂರಪ್ಪ ಪದಚ್ಯುತಿಗೆ ನಮ್ಮ ವಿರೋಧವಿದೆ ಎಂದು ಈ ಸಂದರ್ಭ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ