ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಭ್ರಷ್ಟ ಸಿಎಂಗೆ ಮಠಾಧೀಶರ ಬೆಂಬಲ ದುರದೃಷ್ಟ: ಪರಮೇಶ್ವರ್ (BJP | Yeddyurappa | KPCC | Parameshwar | Land Scam)
Bookmark and Share Feedback Print
 
ಭೂ ಹಗರಣದಲ್ಲಿ ಸಿಲುಕಿರುವ ಭ್ರಷ್ಟ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮಠಾಧೀಶರು ಬೆಂಬಲಿಸುತ್ತಿರುವುದು ದುರದೃಷ್ಟಕರ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಸಮಾಜವನ್ನು, ಜನರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯಬೇಕಾದ ಧಾರ್ಮಿಕ ಮುಖಂಡರು ಭ್ರಷ್ಟರನ್ನು ಬೆಂಬಲಿಸುವುದು ಎಷ್ಟು ಸಮಂಜಸ? ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲೆ ಗುರುತರ ಆರೋಪಗಳು ಜಗಜ್ಜಾಹೀರಾಗಿ ದಾಖಲೆಗಳು ಬಹಿರಂಗಗೊಂಡರೂ ಮಠಾಧೀಶರುಗಳು ಬೆಂಬಲ ನೀಡುತ್ತಿರುವುದು ಉತ್ತಮ ಬೆಳವಣಿಗೆ ಅಲ್ಲ ಎಂದರು.

ಕಲುಷಿತಗೊಂಡಿರುವ ರಾಜಕಾರಣವನ್ನು ಧರ್ಮಗುರುಗಳು ಶುಚಿ ಮಾಡಬೇಕು. ಸಂಕಷ್ಟದ ಸಂದರ್ಭದಲ್ಲಿ ಸೂಕ್ತ ಸಲಹೆ ಸಹಕಾರವನ್ನು ನೀಡಬೇಕು. ಅದನ್ನು ಬಿಟ್ಟು ಭ್ರಷ್ಟಾಚಾರ, ಸ್ವಜನಪಕ್ಷಪಾತ, ರಾಜ್ಯದ ಸಂಪತ್ತು ಲೂಟಿ ಮಾಡುವ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬೆಂಬಲಿಸುವುದು ಸರಿಯೇ ಎಂದು ಅವರು ಪ್ರಶ್ನಿಸಿದರು.

ಯಾರು ಯಾವ ಕೆಲಸವನ್ನು ಮಾಡಬೇಕೋ ಅವರು ಅದೇ ಕೆಲಸ ಮಾಡಬೇಕು. ರಾಜಕಾರಣಿಗಳು ರಾಜಕಾರಣ ಮಾಡಬೇಕು. ಸ್ವಾಮೀಜಿಗಳು ತಮ್ಮ ಪಾಡಿಗೆ ತಾವು ಧಾರ್ಮಿಕ ಕೆಲಸಗಳನ್ನು ಮಾಡಬೇಕು ಎಂದು ಪರಮೇಶ್ವರ್ ಸಲಹೆ ನೀಡಿದ್ದಾರೆ.

ಭೂ ಹಗರಣಗಳ ಸುಳಿಗೆ ಸಿಲುಕಿ ಹೈಕಮಾಂಡ್‌ನಿಂದ ತಲೆದಂಡಕ್ಕೀಡಾಗುತ್ತಾರೆ ಎಂದು ಹೇಳಲಾದ ಮುಖ್ಯಮಂತ್ರಿ ಯಡಿಯೂರಪ್ಪನವರ ಪರವಾಗಿ ಸೋಮವಾರ ವಿವಿಧ ಮಠಗಳ ಸ್ವಾಮೀಜಿಗಳು ಪತ್ರಿಕಾಗೋಷ್ಠಿ ನಡೆಸಿ, ಇದು ಲಿಂಗಾಯಿತ ಮುಖ್ಯಮಂತ್ರಿಯ ಏಳಿಗೆ ಸಹಿಸದವರು ನಡೆಸುತ್ತಿರುವ ಕುತಂತ್ರ ಎಂದು ಕಿಡಿಕಾರಿದ್ದರು.
ಸಂಬಂಧಿತ ಮಾಹಿತಿ ಹುಡುಕಿ