ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಭೂ ದಾಖಲೆ ಯಡಿಯೂರಪ್ಪ ಮನೆಯಲ್ಲಿ?: ರೇವಣ್ಣ ಆರೋಪ (BJP | Yeddyurappa | JDS | Land Scam | Nice | Deve gowda)
Bookmark and Share Feedback Print
 
ರಾಜ್ಯದ ನೈಸ್, ಡಿ ನೋಟಿಫಿಕೇಷನ್, ನೀರಾವರಿ ಹಗರಣಗಳು 2ಜಿ ಸ್ಪೆಕ್ಟ್ರಂ ಅನ್ನು ಮೀರಿಸುವ ಭಾರೀ ಹಗರಣವಾಗಿದ್ದು, ಕೇಂದ್ರ ಮತ್ತು ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶ ಮಾಡಿ ರಾಜ್ಯ ಸರಕಾರವನ್ನು ವಜಾ ಮಾಡಬೇಕೆಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯಪಾಲರು ಮೌನ ಮುರಿದು ದಾಖಲೆಗಳನ್ನು ವಶಕ್ಕೆ ತೆಗೆದುಕೊಳ್ಳಬೇಕು. ಹದ್ದುಮೀರಿ ವರ್ತನೆ ಮಾಡುತ್ತಿರುವ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಈ ಸಂದರ್ಭದಲ್ಲಿ ಹೇಳಿದರು.

ನಾಗವಾರದ ರಿಂಗ್ ರಸ್ತೆ ಬಳಿ ಬಿಡಿಎ 98 ಎಕರೆ ಜಾಗವನ್ನು ಖಾಸಗಿ ಸೊಸೈಟಿಗೆ ಮಂಜೂರು ಮಾಡಿದ್ದು, ಇದರಲ್ಲಿ 1,37,197 ಚ.ಮೀ. ರಸ್ತೆ ಜಾಗವನ್ನು ಅಕ್ರಮವಾಗಿ ಮುಚ್ಚಿ ಆಮೇಲೆ ಈ ಸೊಸೈಟಿಯಿಂದ ಮುಖ್ಯಮಂತ್ರಿಗಳ ಮಕ್ಕಳು ಪಾಲುದಾರರರಾಗಿರುವ ಧವಳಗಿರಿ ಪ್ರಾಪರ್ಟಿಸ್ ಲಿಮಿಟೆಡ್ ಇದನ್ನು ಖರೀದಿ ಮಾಡುವ ಮೂಲಕ 17 ಕೋಟಿ ರೂ.ಲಾಭ ಮಾಡಿಕೊಂಡಿದ್ದಾರೆ. ಅಲ್ಲದೇ ಬಿಡಎಗೆ 25 ಕೋಟಿ ರೂ.ನಷ್ಟ ಮಾಡಿದ್ದಾರೆ ಎಂದು ದಾಖಲೆಗಳನ್ನು ಬಿಡುಗಡೆ ಮಾಡಿದರು.

ಇದಲ್ಲದೆ, ಬನಶಂಕರಿ ಐದನೇ ಹಂತದಲ್ಲಿ ಐದು ಎಕರೆ ಡಿನೋಟಿಫೈ ಮಾಡಿದ್ದಾರೆ. ಇದು 100 ಕೋಟಿ ರೂ.ಆಸ್ತಿ. ಅದೇ ರೀತಿ ಗಂಗೇನಹಳ್ಳಿಯಲ್ಲಿ 25 ಗುಂಟೆ ಜಮೀನನ್ನು ಡಿ ನೋಟಿಫೈ ಮಾಡಿದ್ದಾರೆ. ಆದರೆ ತಾನು 30 ಪ್ರಕರಣಗಳ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ವಿವರ ಕೇಳಿದರೂ ಅಧಿಕಾರಿಗಳು ನೀಡುತ್ತಿಲ್ಲ. ಎಲ್ಲ ದಾಖಲೆ ಮುಖ್ಯಮಂತ್ರಿಗಳ ಮನೆಯಲ್ಲಿದೆ ಎಂದು ಅಧಿಕಾರಿಗಳು ಸಬೂಬು ಹೇಳಿಕೊಂಡು ಯಾವುದೇ ದಾಖಲೆ ಕೊಡುತ್ತಿಲ್ಲ ಎಂದು ಗಂಭೀರವಾಗಿ ಆರೋಪಿಸಿದರು.

ದಾಖಲೆಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ವಶದಲ್ಲಿಯೇ ಇಟ್ಟುಕೊಳ್ಳುವ ಮೂಲಕ ರೆಕಾರ್ಡ್ ಕೀಪರ್ ಆಗಿದ್ದಾರೆ ಎಂದು ಲೇವಡಿ ಮಾಡಿರುವ ರೇವಣ್ಣ, ಸರಕಾರಕ್ಕೆ ಬದ್ದತೆ ಎಂಬುದಿಲ್ಲ, ಯಡಿಯೂರಪ್ಪ ಮನಸ್ಸಿಗೆ ಬಂದಂತೆ ಸರಕಾರ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ